ನಟಿ ಉಮಾಶ್ರೀ ಅವರ ಮಗಳು ನಿಜಕ್ಕೂ ಹೇಗಿದ್ದಾರೆ ಗೊತ್ತಾ… ಅಬ್ಬಬ್ಬಾ ಒಮ್ಮೆ ನೋಡಿ..

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹಿರಿಯ ಕಲಾವಿದರು ಇದ್ದಾರೆ. ಇಂಥವರಲ್ಲಿ ಒಬ್ಬರದ ನಟಿ ಉಮಾಶ್ರೀ ಈ ಹೆಸರನ್ನು ಕೇಳಿದರೆ ಎಂತವರಿಗೂ ಒಂದು ಕ್ಷಣ ಮೈರೋಮಾಂಚನ ವಾಗುತ್ತದೆ ಅಂತಾನೆ ಹೇಳಬಹುದು. ಯಾಕೆಂದರೆ ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದೆ ಉಮಾಶ್ರೀ ಅವರು. ಉಮಾಶ್ರೀ ಅವರ ಪಾಲಿಗೆ ಯಾವುದೇ ಪಾತ್ರ ಅಭಿನಯಕ್ಕೆ ಬಂದರೆ ನೀರು ಕುಡಿದಷ್ಟೇ ಬಹಳ ಅಚ್ಚುಕಟ್ಟಾಗಿ ಹಾಗೂ ಆ ಪಾತ್ರಕ್ಕೆ ಜೀವ ತುಂಬುವ ಈ ಮಹಾನ್ ನಟಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಇರೋದು ಹೆಮ್ಮೆ ಅಂತಾನೇ ಹೇಳಬಹುದು.
ತಮ್ಮ ಪಂಚಿಂಗ್ ಡೈಲಾಗ್ ಹಾಗೂ ಹಾಸ್ಯ, ಡಬ್ಬಲ್ ಮೀನಿಂಗ್ ಡೈಲಾಗ್ ಮುಖಂತರ ಸಿನಿಪ್ರೇಕ್ಷಕರ ಗಮನ ಸೆಳೆದಿದ್ದರೆ. ಉಮಾಶ್ರೀ ಅವರು ಪೋಷಕ ಪಾತ್ರದಲ್ಲಿ ಹಾಗೂ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸಿದ್ದರು. ಉಮಾಶ್ರೀ ಅವರು ಎಂತಹ ಕಲಾವಿದೆ ಎನ್ನವುದಕ್ಕೆ ಅವರ ಪುಟ್ನಂಜ ಚಿತ್ರವೇ ಸಾಕ್ಷಿ.

ನಿಜಕ್ಕೂ ಹೇಳುವುದಾದರೆ ಉಮಾಶ್ರೀ ಅವರ ಅಭಿನಯಕ್ಕೆ ಸರಿ ಸಾಟಿ ಬೇರೆ ಯಾರು ಇಲ್ಲ ನಟಿ ಉಮಾಶ್ರೀ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮೊದಲು ರಂಗಭೋಮಿಯಲ್ಲಿ ಕಾರ್ಯನಿರ್ವಾಹಿಸುತ್ತಿದ್ದರು. ಅವರ ನಾಟಕದ ರಂಗಭೋಮಿಯಲ್ಲೂ ಸಹ ಸಾಕಷ್ಟು ಪ್ರಶಸ್ತಿಗಳು ಬಂದಿದ್ದವು.
ಇನ್ನು ಉಮಾಶ್ರೀ ಅವರ ವಯಕ್ತಿಕ ಜೀವನದಲ್ಲಿ ಬಹಳಷ್ಟು ನೋವಿನಿಂದ ಕೂಡಿದ್ದು ಅವರ ಪತಿ ಬಿಟ್ಟು ಹೋದಾಗ ಉಮಾಶ್ರೀ ಅವರಿಗೆ ಇಬ್ಬರು ಮಕ್ಕಳು ಇದ್ದರು. ತನ್ನ ಮಕ್ಕಳನ್ನು ಸಾಕಲು ಬಹಳ ಕಷ್ಟ ಪಟ್ಟಿದ್ದರು. ನಟಿ ಉಮಾಶ್ರೀ ಅವರು ಮನೆ ಕೆಲಸ ಮಾಡುವುದು, ಇಡ್ಲಿ ಮಾಡುವುದು ಸೇರಿದಂತೆ ಹಲವು ಕೆಲಸವನ್ನು ಮಾಡಿ ಜೀವನ ಸಾಗಿಸುತ್ತಿದ್ದರು.

ಇನ್ನು ಕಾಶೀನಾಥ್ ಅವರ ನಿರ್ದೇಶನದ ಬಂಗಾರದ ಜಿಂಕೆ ಎಂಬ ಚಿತ್ರದ ಮೂಲಕ ಒಂದು ಸಣ್ಣ ಪಾತ್ರದ ಮೂಲಕ ಅಭಿನಯಿಸಿದ್ದರು. ಆ ಚಿತ್ರ ಅವಾರ್ಡ್ ವಿನ್ನಿಂಗ್ ಚಿತ್ರಕೂಡ ಆಗಿತ್ತು. ನಂತರ ನಟಿ ಉಮಾಶ್ರೀ ಅವರು ಹೆಚ್ಚಾಗಿ ಕಾಮಿಡಿ ಪಾತ್ರಗಳಿಗೆ ಮೀಸಲಾದ ಅವರು ಸುಮಾರು 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
ಕನ್ನಡದ ಹಲವಾರು ಹಿರಿಯ ಕಲಾವಿದರ ಜೊತೆಗೆ ಜೋಡಿಯಾಗಿ ನಟಿಸಿ ಪ್ರೇಕ್ಷಕರನ್ನು ನಗೆ ಗಡಲಲ್ಲಿ ತೆಲಿಸಿದ್ದಾರೆ. ಅಂದಿನ ಚಿತ್ರಗಳಲ್ಲಿ ಕೇವಲ ಹಾಸ್ಯ ಪಾತ್ರಗಳಿಗೆ ಮೀಸಲು ನೀಡದೆ ನೆಗೆಟಿವ್ ಶೇಡ್ ಇರುವ ಪಾತ್ರಗಳಿಗೆ ಕೂಡ ಉಮಾಶ್ರೀ ಅವರು ನಟಿಸಿದ್ದು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ರವಿಚಂದ್ರನ್ ಅವರ ಪುಟ್ನಜ ಚಿತ್ರದಲ್ಲಿ ಉಮಾಶ್ರೀ ಅವರ ಪುಟ್ಮಲ್ಲಿ ಪಾತ್ರ ಇಂದಿಗೂ ಕನ್ನಡ ಪ್ರೇಕ್ಷಕರು ಮರೆತಿಲ್ಲ. 2008 ರಲ್ಲಿ ಉಮಾಶ್ರೀ ಅವರ ಮುಖ್ಯಪಾತ್ರದಲ್ಲಿ ಅಭಿನಯಿಸಿದ ಗುಲಾಬಿ ಟಾಕೀಸ್ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ದೊರಕಿತ್ತು ಉಮಾಶ್ರೀ ಅವರ ತಮ್ಮ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು. ಹಾಗೇ ಅವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರಕಿದೆ.
ಇನ್ನು ನಟಿ ಉಮಾಶ್ರೀ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಇವರ ಮಗನ ಹೆಸರು ವಿಜಯ್ ಕುಮಾರ್ ಇವರು ವಕೀಲರು ಆಗಿದ್ದಾರೆ. ಇನ್ನು ಉಮಾಶ್ರೀ ಅವರಿಗೆ ಮಗಳು ಗಾಯತ್ರಿ ಇವರು ಡೆಂಟಿಸ್ಟ್ ಆಗಿ ಕೆಲಸ ಮಾಡುತಿದ್ದರೆ. ನಟಿ ಉಮಾಶ್ರೀ ಅವರು ಮಕ್ಕಳನ್ನು ಬಹಳ ಕಷ್ಟದಲ್ಲಿ ಒಬ್ಬರೇ ಸಾಕಿ ಇಂದು ಈ ಮಟ್ಟಕ್ಕೆ ಬೆಳೆಸಿದ್ದಾರೆ ತಾಯಿ ಅಂದ್ರೆ ಹೀಗಿರಬೇಕು. ಇವರ ಮಕ್ಕಳು ಹೆಚ್ಚಾಗಿ ಯಾರ ಮುಂದೇನು ಬರಲ್ಲ.

ನಟಿ ಉಮಾಶ್ರೀ ಅವರು ಇತ್ತೀಚಿಗೆ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುದರಿಂದ ಮಕ್ಕಳು ಹಾಗೂ ಮೊಮ್ಮಕ್ಕಳ ಜೊತಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಅಂತೆ. ಇತ್ತೀಚಿಗೆ

ನಟಿ ಉಮಾಶ್ರೀ ಅವರು ಸಾಕಷ್ಟು ಚಿತ್ರಗಳಲ್ಲಿ ನಟಿ ಮತ್ತೆ ಅಭಿಮಾನಿಗಳನ್ನು ತನ್ನತ್ತ ಸೆಳೆದಿದ್ದರೆ. ಉಮಾಶ್ರೀ ಅವರ ಜೀವನದ ಬದುಕಿನ ದಾರಿ ಸಾಕಷ್ಟು ಹೆಣ್ಣು ಮಕ್ಕಳಿಗೆ ಮಾದರಿ ಅಂತಾನೆ ಹೇಳಬಹುದು. ನಟಿ ಉಮಾಶ್ರೀ ಅವರ ಸುಂದರ ಕುಟುಂಬದ ಮುದ್ದಾದ ಫೋಟೋಗಳನ್ನು ನೀವು ಇಲ್ಲಿ ನೋಡಿ ನಿಮ್ಮ ಅನಿಸಿಕೆ ಗಳನ್ನ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *