ನಟಿ ಜೂಹಿ ಚಾವ್ಲಾ ರವರ ಮಗಳು ತುಂಬಾನೇ ಫೇಮಸ್ ಯಾರು ಅವರು ಹೇಗಿದ್ದಾರೆ ಗೊತ್ತಾ..!?

Entertainment

80 90ರ ದಶಕದಲ್ಲಿ ಇರುವಂತಹ ನಾಯಕ ನಟಿಯರು ಇಂದಿನ ಪ್ರೇಕ್ಷಕರಿಗೂ ಕೂಡ ಸಾಕಷ್ಟು ಇಷ್ಟ ಆಗಿದ್ದರು. ಹೀರೋಯಿನ್ ಎಂದರೆ ಅಂದಿನ ಕಾಲದ ಹೀರೋಯಿನ್ ಗಳು ಎಂದು ಹೇಳುವಷ್ಟರ ಮಟ್ಟಿಗೆ ಜನಪ್ರಿಯರಾಗಿದ್ದರು. ಇನ್ನು ನಾವು ಮಾತನಾಡಲು ಹೊರಟಿರುವ ಹೀರೋಯಿನ್ ಕೂಡ ಅದೇ ಕಾಲದ ಸೂಪರ್ ಸ್ಟಾರ್ ನಟಿ. ಹೌದು ನಾವು ಮಾತನಾಡುತ್ತಿರುವುದು ನಟಿ ಜೂಹಿ ಚಾವ್ಲಾ ರವರ ಕುರಿತಂತೆ.

ನಟಿ ಜೂಹಿ ಚಾವ್ಲಾ ರವರು ಹಿಂದಿ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡುವ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಾರೆ. ಕೇವಲ ಹಿಂದಿ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕನ್ನಡದಲ್ಲಿ ಕೂಡ ಅದರಲ್ಲೂ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಸಿನಿಮಾಗಳಲ್ಲಿ ಹೆಚ್ಚಾಗಿ ಅವರು ಕಾಣಿಸಿಕೊಂಡಿದ್ದಾರೆ. ಪ್ರಮುಖವಾಗಿ ಜೂಹಿಚಾವ್ಲಾ ರವರು ಕನ್ನಡದಲ್ಲಿ ನಟಿಸಿರುವ ಸಿನಿಮಾಗಳೆಂದರೆ ರಣಧೀರ ಶಾಂತಿ ಕ್ರಾಂತಿ ಹೀಗೆ ಮುಂತಾದವು ಇದ್ದಾವೆ. ಅಂದಿನ ಕಾಲದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಜೂಹಿ ಚಾವ್ಲಾ ಅವರ ಕಾಂಬಿನೇಷನ್ ಕನ್ನಡ ಚಿತ್ರರಂಗದಲ್ಲಿ ಮನೆಮಾತಾಗಿತ್ತು. ನಟಿಸಿದ್ದು ಕೆಲವೇ ಸಿನಿಮಾಗಳಾದರೂ ಕೂಡ ಇಂದಿಗೂ ಕೂಡ ಕನ್ನಡಿಗರ ಮನದಾಳದಲ್ಲಿ ಜೂಹಿಚಾವ್ಲಾ ರವರು ಅಡಗಿ ಕುಳಿತಿದ್ದಾರೆ. ಇನ್ನು ಕೆಲವು ವರ್ಷಗಳ ಹಿಂದಷ್ಟೇ ಬಿಡುಗಡೆಯಾಗಿರುವ ರಮೇಶ್ ಅರವಿಂದ್ ರವರ ಪುಷ್ಪಕ ವಿಮಾನ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು.

ಇನ್ನೂ ಸದ್ಯಕ್ಕೆ 53 ವರ್ಷದವರಾದರೂ ಕೂಡ ನಟಿ ಜೂಹಿ ಚಾವ್ಲಾ ರವರು 25 ಹರೆಯದ ಯುವತಿಯಂತೆ ಕಾಣುತ್ತಾರೆ. ಇಂದಿಗೂ ಕೂಡ ಜೂಹಿ ಚಾವ್ಲಾ ಅವರು ನಾಯಕ ನಟಿಯಾಗಿ ನಟಿಸುತ್ತೇನೆ ಎಂದರೆ ನಿರ್ಮಾಪಕ ಹಾಗೂ ನಿರ್ದೇಶಕರ ಗುಂಪೇ ಎದುರು ನಿಲ್ಲುತ್ತದೆ ಎಂದರೆ ತಪ್ಪಾಗಲಾರದು. ಇನ್ನು ಜೂಹಿ ಚಾವ್ಲಾ ಅವರ ವೈವಾಹಿಕ ಜೀವನಕ್ಕೆ ಬರುವುದಾದರೆ ಜೆ ಮೆಹತಾ ಎನ್ನುವ ಉದ್ಯಮಿಯೊಬ್ಬರನ್ನು ಮದುವೆಯಾಗುತ್ತಾರೆ. ಇನ್ನು ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರಲ್ಲಿ ಜೂಹಿ ಚಾವ್ಲಾ ರವರ ಮಗಳ ಹೆಸರು ಜಾಹ್ನವಿ ಮೆಹತ ಎನ್ನುವುದಾಗಿ.

ನಿಮಗೆಲ್ಲರಿಗೂ ತಿಳಿದಿರುವಂತೆ ಜೂಹಿ ಚಾವ್ಲಾ ರವರು ಶಾರುಖ್ ಖಾನ್ ಒಡೆತನದಲ್ಲಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹ ಮಾಲಕಿ ಯಾಗಿದ್ದಾರೆ. ಹೀಗಾಗಿ ಆಗಾಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪಂದ್ಯಾಟಗಳಲ್ಲಿ ಹಾಗೂ ಹರಾಜು ಪ್ರಕ್ರಿಯೆಯಲ್ಲಿ ತಂಡದ ಜೊತೆಗೆ ಜೂಹಿಚಾವ್ಲಾ ರವರ ಮಗಳಾಗಿರುವ ಜಾಹ್ನವಿ ಮೆಹತಾ ರವರು ಕೂಡ ಆಗಾಗ ಕಂಡು ಬರುತ್ತಾರೆ. ಇದೇ ಕಾರಣಕ್ಕಾಗಿ ಅವರು ಜನಪ್ರಿಯರು ಕೂಡ ಆಗಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಜೂಹಿಚಾವ್ಲಾ ರವರು ತಮ್ಮ ಮಗನನ್ನು ಚಿತ್ರರಂಗಕ್ಕೆ ಸಿದ್ಧಪಡಿಸುವ ಯೋಚನೆಯಲ್ಲಿದ್ದಾರೆ ಎಂಬುದಾಗಿ ಕೂಡ ಸುದ್ದಿ ಕೇಳಿ ಬರುತ್ತದೆ. ಚಿತ್ರ ನಟರ ಮಕ್ಕಳು ಚಿತ್ರರಂಗಕ್ಕೆ ಬಂದು ಯಶಸ್ವಿಯಾದವರು ಕೆಲವೇ ಕೆಲವು ಮಂದಿ ಮಾತ್ರ. ಇನ್ನು ಜೂಹಿ ಚಾವ್ಲ ರವರ ಮಗಳಾಗಿರುವ ಜಾಹ್ನವಿ ಮೆಹತಾ ರವರು ಚಿತ್ರರಂಗದಲ್ಲಿ ಕಾಲಿಟ್ಟು ಮುಂದಿನದಿನಗಳಲ್ಲಿ ಯಶಸ್ವಿಯಾಗುತ್ತಾರೋ ಅಥವಾ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಾಗಿದೆ. ವಿಚಾರದ ಕುಡಿದಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.


Leave a Reply

Your email address will not be published. Required fields are marked *