ನಟಿ ಮೀನಾ ಹಾಗೂ ಕಿಚ್ಚ ಸುದೀಪ್ ಏನಿದು ವಿವಾದ; ?

Entertainment

ಒಂದು ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹುತೇಕ ಪರಭಾಷಾ ನಟಿಯರ ನಟಿಸಿ ಹೋಗುತ್ತಿದ್ದರು. ಕೆಲವರು ಕೆಲವು ಸಿನಿಮಾಗಳಲ್ಲಿ ನಟಿಸಿ ಹೋಗಿ ಕಣ್ಮರೆಯಾದರೆ. ಇನ್ನು ಕೆಲವು ನಟಿಯರು ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದರು ಕೂಡ ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಸದಾ ಉಳಿದುಕೊಂಡಿದ್ದಾರೆ. ಅಂತ ನಟಿಯರಲ್ಲಿ ಒಬ್ಬರು ಕುರಿತಂತೆ ಇಂದು ನಾವು ಮಾತನಾಡಲು ಹೊರಟಿದ್ದೇವೆ.
ಹೌದು ಗೆಳೆಯರೇ ನಾವು ಮಾತನಾಡುತ್ತಿರುವುದು ನಟಿ ಮೀನಾ ರವರ ಕುರಿತಂತೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸೂಪರ್ ಹಿಟ್ ಸಿನಿಮಾಗಳಲ್ಲಿ ಮೀನಾ ರವರು ನಾಯಕಿಯಾಗಿ ನಟಿಸಿದ್ದರು. ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಬೇಡಿಕೆಯನ್ನು ಹೊಂದಿದ್ದರು. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಸಿನಿಮಾಗಳಲ್ಲಿ ಕೂಡ ಅವರ ಬೇಡಿಕೆ ಹೆಚ್ಚಿತು. ನಂತರ 2009 ರಲ್ಲಿ ವಿದ್ಯಾಸಾಗರ್ ಎನ್ನುವವರನ್ನು ಮದುವೆಯಾದ ನಂತರ ಚಿತ್ರರಂಗದಿಂದ ಕೊಂಚ ಮಟ್ಟಿಗೆ ವಿರಾಮವನ್ನು ಪಡೆದುಕೊಳ್ಳುತ್ತಾರೆ. ಇವರಿಗೆ ನೈನಿಕ ಎಂಬ ಮಗಳು ಕೂಡ ಇದ್ದಾರೆ. ಈಗಾಗಲೇ ತಲಪತಿ ವಿಜಯ್ ಸಿನಿಮಾದಲ್ಲಿ ಬಾಲನಟಿಯಾಗಿ ಕೂಡ ಇವರು ಕಾಣಿಸಿಕೊಂಡಿದ್ದಾರೆ.
ಇನ್ನು ಇವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಸ್ವಾತಿಮುತ್ತು ಹಾಗೂ ಮೈ ಆಟೋಗ್ರಾಫ್ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಜೋಡಿ ಸೂಪರ್ ಹಿಟ್ ಆಗಿ ಕಾಣಿಸಿಕೊಂಡಿತ್ತು. ಅದರಲ್ಲಿ ಒಂದು ಸಂದರ್ಭದಲ್ಲಿ ಇವರಿಬ್ಬರ ಮೇಲೆ ಬಂದಿರುವ ಗಾಳಿಸುದ್ದಿಯನ್ನು ಕೇಳಿದರೆ ನೀವು ಕೂಡ ಆಶ್ಚರ್ಯ ಪಡುತ್ತೀರಿ. ಹೌದು ಸ್ವಾತಿಮುತ್ತು ಸಂದರ್ಭದಲ್ಲಿ ನಟಿ ಮೀನಾ ಹಾಗೂ ಕಿಚ್ಚ ಸುದೀಪ್ ರವರ ಮದುವೆ ಆಗಿದ್ದಾರೆ ಎಂಬುದಾಗಿ ಗಾಸಿಪ್ ಗಳು ಹರಡಿದ್ದವು. ಇದು ನಿಜಕ್ಕೂ ಕೂಡ ನಟಿ ಮೀನಾ ಅವರ ಮನಸ್ಸಿನ ಮೇಲೆ ಅಪಾರವಾದ ಪರಿಣಾಮವನ್ನು ಬೀರಿತ್ತು.
ಇದಕ್ಕೆ ಪೂರಕವಾದ ಕಾರಣವೆಂದರೆ ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳಲ್ಲಿ ಜೊತೆಯಾಗಿ ಅವರು ಕಾಣಿಸಿಕೊಂಡಿದ್ದು. ನಂತರ ಸ್ವತಹ ಮಿನಾ ಅವರೇ ಮಾಧ್ಯಮದ ಮುಂದೆ ಬಂದು ನಾನು ಹಾಗೂ ಸುದೀಪ್ ಇಬ್ಬರೂ ಕೂಡ ಒಳ್ಳೆ ಆತ್ಮೀಯ ಸ್ನೇಹಿತರು. ನನ್ನ ಸ್ವಾತಿಮುತ್ತು ಚಿತ್ರದ ನಟನೆಯನ್ನು ನೋಡಿ ಸುದೀಪ್ ರವರು ನನಗೆ ಆ ಮೈ ಆಟೋಗ್ರಾಫ್ ಚಿತ್ರದಲ್ಲಿ ಅವಕಾಶವನ್ನು ನೀಡಿದ್ದಾರೆ. ಇಷ್ಟು ಬಿಟ್ಟರೆ ನಮ್ಮ ನಡುವೆ ಬೇರೆ ಏನು ಇಲ್ಲ ಎಂಬುದಾಗಿ ಸ್ಪಷ್ಟೀಕರಣ ನೀಡಿದ್ದರು. ಇದರಿಂದಾಗಿ ಚಿತ್ರರಂಗದಲ್ಲಿ ಸುಳ್ಳುಸುದ್ದಿ ಹೇಗೆ ಬೇಕಾದರೂ ಕೂಡ ಹೊರಡಬಹುದು ಎನ್ನುವುದನ್ನು ನಾವು ಕಲಿತುಕೊಳ್ಳಬಹುದಾಗಿದೆ.


Leave a Reply

Your email address will not be published. Required fields are marked *