ನಟಿ ಶೃತಿ ಅವರ ದಾಂಪತ್ಯ ಜೀವನದಲ್ಲಿ ವೈಮನಸ್ಸು ಮೂಡಿದ್ದೇಕೆ ಗೊತ್ತಾ? ಅವರ ದಾಂಪತ್ಯ ಜೀವನದಲ್ಲಿ ಬಿರುಕು ಬಿಡಲು ನಿಜವಾದ ಸತ್ಯ ಇಲ್ಲಿದೆ ನೋಡಿ

ಸುದ್ದಿ

ಸ್ಯಾಂಡಲ್ವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚಿದವರು ನಟಿ ಶ್ರುತಿ. ಒಂದು ಕಾಲದಲ್ಲಿ ನಟಿ ಶ್ರುತಿಯವರ ಸಿನಿಮಾಗಳು ಎಂದರೆ ಪ್ರೇಕ್ಷಕರು ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದರು. ಸಂಸಾರದಲ್ಲಿ ಕಷ್ಟದಲ್ಲಿರುವ ಹೆಣ್ಣಿನ ಪಾತ್ರದಲ್ಲಿ ನಟಿಸುತ್ತಿದ್ದ ಶ್ರುತಿಯವರು, ಪ್ರೇಕ್ಷಕರ ಕಣ್ಣಲ್ಲಿ ಕಣ್ಣೀರು ಬರುವಂತೆ ನಟಿಸುತ್ತಿದ್ದರು. ನಟಿ ಶ್ರುತಿಯವರ ನಟನೆ, ಪಾತ್ರವನ್ನು ನಿಭಾಯಿಸುವ ಪರಿ, ಪ್ರೇಕ್ಷಕ ವರ್ಗವನ್ನು ತನ್ನತ್ತ ಸೆಳೆಯುವಂತಿತ್ತು.

ಶ್ರುತಿ ಅವರು ಆಗಿನ ಕಾಲದ ಹಲವು ಸಿನಿಮಾಗಳಲ್ಲಿ ಹಲವು ಪಾತ್ರಗಳಿಗೆ ಜೀವ ತುಂಬಿ, ಇವತ್ತಿಗೂ ಅಭಿಮಾನಿಗಳ ಮನೆಯ ಮಗಳಾಗಿದ್ದಾರೆ. ಕನ್ನಡ ಚಿತ್ರರಂಗದ ನಟಿ ಶ್ರುತಿ ಅವರು ಅನೇಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ ಅಲ್ಲದೆ ಆಗಿನ ಕಾಲದ ಬೇಡಿಕೆ ನಟಿಯಾಗಿದ್ದರು. ಮೊದಲ ಬಾರಿಗೆ ಶಿವರಾಜ್ ಕುಮಾರ್ ಅವರ ಸಿನಿಮಾ ಆಸೆಗೊಬ್ಬ ಮೀಸೆಗೊಬ್ಬ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು.

ನಿರ್ದೇಶಕ ದ್ವಾರಕೇಶ್ ಅವರ “ಶೃತಿ ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರದ ದಿನಗಳಲ್ಲಿ ಅವರಿಗೆ ಬೇಡಿಕೆಯು ಹೆಚ್ಚಾಯಿತು. ಅವಕಾಶಗಳು ಕೂಡ ಮನೆ ಬಾಗಿಲಿಗೆ ಹುಡುಕಿಕೊಂಡು ಬರುತ್ತಿತ್ತು ಇನ್ನು, ಸಿನಿಮಾ ಬದುಕಿನಲ್ಲಿ ಉತ್ತುಂಗದಲ್ಲಿದ್ದ ಶ್ರುತಿಯವರ ವೈಯುಕ್ತಿಕ ಬದುಕು ಹೇಳಿಕೊಳ್ಳುವಷ್ಟೇನು ಉತ್ತಮವಾಗಿರಲಿಲ್ಲ. ಹಾಗಾದರೆ ನಟಿ ಶ್ರುತಿ ಹಾಗೂ ಎಸ್ ಮಹೇಂದರ್ ಅವರ ದಾಂಪತ್ಯ ಜೀವನವು ಮುರಿದು ಬಿದ್ದದ್ದು ಯಾಕೆ ಎನ್ನುವುದಕ್ಕೆ ಉತ್ತರ ಇಲ್ಲಿದೆ.ನಟಿ ಶ್ರುತಿಯವರು ಎಸ್ ಮಹೇಂದರ್ ಮೊದಲ ಮದುವೆ ಮಾಡಿಕೊಂಡರು.

ಪ್ರಾರಂಭದ ದಿನಗಳಲ್ಲಿ ಎಸ್ ಮಹೇಂದರ್ ಮತ್ತು ಶ್ರುತಿ ಜೊತೆಯಾಗಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅವರಿಬ್ಬರ ನಡುವೆ ಪ್ರೀತಿ ಚಿಗುರಿ 1998 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮೊದ ಮೊದಲು ಇವರ ಸಂಸಾರದಲ್ಲಿ ಯಾವುದೇ ಬಿರುಕು ಇರಲಿಲ್ಲ. ಹೀಗಿರುವಾಗ, ರಾಜಕೀಯದಲ್ಲಿ ಎಸ್ ಮಹೇಂದರ್ ತೊಡಗಿಕೊಂಡರು, ಹೀಗಿರುವಾಗ ಈ ಪ್ರಚಾರದಲ್ಲಿ ಶ್ರುತಿ ಕೂಡ ಸಾಥ್ ನೀಡುತ್ತಿದ್ದರು.

ಹೀಗೆ ಸಂಸಾರ ಸಾಗುತ್ತಿರುವಾಗಲೇ, ಎಸ್ ಮಹೇಂದರ್ ಹಾಗೂ ಶ್ರುತಿ ಮಧ್ಯ ಚಂದ್ರಚೂಡ್ ಅವರ ಎಂಟ್ರಿ ಆಯಿತು. ಹೀಗಾಗಿ 2009 ರಲ್ಲಿ ಶ್ರುತಿ ಪತಿಯಿಂದ ವಿ-ಚ್ಛೇ-ಧ-ನ ಪಡೆದು ದೂರಾದರು. ಆದರೆ, 2011ರಲ್ಲಿ ಅಧಿಕೃತವಾಗಿ ಎಸ್ ಮಹೇಂದ್ರ ಅವರಿಂದ ದೂರವಾದರು. ಆದಾದ ಬಳಿಕ 2013 ರಲ್ಲಿ ಚಕ್ರವರ್ತಿ ಚಂದ್ರಚೂಡ್ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ಚಂದ್ರಚೂಡ್ ಮೊದಲ ‌ಮದುವೆಯಾಗಿದ್ದ ಕಾರಣ ಈ ಮದುವೆ ರದ್ದಾಗುತ್ತದೆ.

ಅಂದಹಾಗೆ, ಶ್ರುತಿ ಹಾಗೂ ಚಂದ್ರ ಚೂಡ್ ಅವರ ಸಂಬಂಧದಲ್ಲಿ ನಡೆದದ್ದು ಏನು ಎನ್ನುವುದಕ್ಕೆ ಇಲ್ಲಿದೆ ಉತ್ತರ. ಹಿರಿಯ ಪತ್ರಕರ್ತ ಹಾಗೂ ಬರಹಗಾರ ಚಂದ್ರ ಚೂಡ್ ಮೊದಲಿಗೆ ಮಂಜುಳಾ ಎನ್ನುವ ಟೀಚರ್ ರನ್ನು ಮದುವೆಯಾಗಿದ್ದರು. ಈ ದಂಪತಿಗಳಿಗೆ ಇಬ್ಬರೂ ಮುದ್ದಾದ ಮಕ್ಕಳಿದ್ದರು. ಹೀಗಿರುವಾಗ ಇವರಿಬ್ಬರ ನಡುವಿನ ದಾಂಪತ್ಯ ಜೀವನದಲ್ಲಿ ಸ್ವಲ್ಪ ಬಿರುಕು ಮೂಡಿತು. ಹೆಂಡತಿಗೆ ಡೈ-ವೋ-ರ್ಸ್ ನೀಡಬೇಕು ಎಂದು ಕೊಂಡಿದ್ದರು. ಇನ್ನೊಂದೆಡೆ ನಟಿ ಶ್ರುತಿ ಹಾಗೂ ಮಹೇಂದರ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ದೂರವಾದರು.

ಹೀಗಿರುವಾಗಲೇ ನಟಿ ಶ್ರುತಿ ಮತ್ತು ಚಂದ್ರಚೂಡ್ ಅವರು ಒಮ್ಮೆ ಭೇಟಿಯಾದರು. ಇವರಿಬ್ಬರ ನಡುವೆ ಆತ್ಮೀಯತೆ ಹೆಚ್ಚಾಯಿತು, ಈ ಕಾರಣದಿಂದಾಗಿ ಶ್ರುತಿಯವರ ಬಳಿ ಚಂದ್ರಚೂಡ್ ಅವರ ಜೊತೆ ವಿವಾಹವಾಗುವ ವಿಚಾರವನ್ನು ಸಹ ಹೇಳಿದ್ದರು. ಇಬ್ಬರೂ ಇಷ್ಟಪಟ್ಟು ಮದುವೆ ಕೂಡ ಆದರು. ಆದರೆ ಆ ಸಮಯದಲ್ಲಿ ಚಂದ್ರ ಚೂಡ್ ಅವರ ಮೊದಲ ಪತ್ನಿ ಟೀಚರ್ ಮಂಜುಳಾ ಅವರು ಕೋರ್ಟ್ ಮೆಟ್ಟಿಲೇರಿದರು. ಹೌದು, ಡಿ-ವೋ-ರ್ಸ್ ನೀಡದೇ , ನನ್ನ ಪತಿ ಮದುವೆಯಾಗಿದ್ದಾರೆ ಎಂಬುದಾಗಿ ದೂರು ದಾಖಲು ಮಾಡಿದರು.

ಈ ವಿಷಯ ತಿಳಿದ ಶ್ರುತಿಯವರು ಚಂದ್ರ ಚೂಡ್ ಅವರಿಂದ ದೂರವಾದರು. ಹೀಗೆ ತಾನು ಎರಡು ಮದುವೆಯಾದರೂ ವೈವಾಹಿಕ ಬದುಕಿನಲ್ಲಿ ನೆಮ್ಮದಿ ಸಂತೋಷ ಎನ್ನುವುದು ಶ್ರುತಿ ಪಾಲಿಗೆ ಸಿಗಲೇ ಇಲ್ಲ. ಕೊನೆಗೆ ಇದೆಲ್ಲದರಿಂದಲೂ ದೂರವಾಗಿ, ಇದೀಗ ಒಂಟಿಯಾಗಿ ತನ್ನ ಮಗಳು ಗೌರಿ ಜೊತೆಗೆ ಜೀವನ ನಡೆಸುತ್ತಿದ್ದಾರೆ.


Leave a Reply

Your email address will not be published. Required fields are marked *