ನಟಿ ಶೃತಿ ಹರಿಹರನ್; ಹೊಸ ಫೋಟೋಶೂಟ್ ನಲ್ಲಿ ಹೇಗೆಲ್ಲ ಪೋಸ್ ನೀಡಿದ್ದಾರೆ ಗೊತ್ತೇ??

ಸುದ್ದಿ

ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಹಲವಾರು ಯುವ ನಟಿಯರು ನಟಿಸಿ ಸ್ಟಾರ್ ನಟಿಯರಾಗಿದ್ದಾರೆ. ಅಂಥವರಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ಶೃತಿಹರಿಹರನ್ ರವರ ಕುರಿತಂತೆ. ಶೃತಿ ಹರಿಹರನ್ ರವರು ಯಾವದೇ ಬೆಂಬಲ ಇಲ್ಲದೆ ಕನ್ನಡ ಚಿತ್ರರಂಗಕ್ಕೆ ಬಂದವರು. ನಂತರ ಬಹುತೇಕ ಸ್ಟಾರ್ ನಟರ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

ಆದರೆ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಿಂದ ದೂರವಾಗಿದ್ದರು. ಇದಕ್ಕೆ ಕಾರಣ ಏನು ಎನ್ನುವುದು ಕೂಡ ನಿಮಗೆ ಗೊತ್ತಿದೆ. ಹೌದು ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ರವರ ಜೊತೆಗೆ ಮೀಟೂ ಪ್ರಕರಣದ ಕಾರಣದಿಂದಾಗಿ ಶೃತಿ ಹರಿಹರನ್ ರವರ ಸಾಕಷ್ಟು ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದರು. ಇದೇ ಕಾರಣದಿಂದಾಗಿ ಚಿತ್ರರಂಗದಿಂದ ಕೆಲವರು ಅವರನ್ನು ದೂರ ಕೂಡ ಇಟ್ಟಿದ್ದರು. ಇದಾದ ನಂತರವೂ ಕೂಡ ಅವರು ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದರು ಕೂಡ ಅದು ಅಷ್ಟೊಂದು ಯಶಸ್ಸನ್ನು ತಂದುಕೊಟ್ಟಿಲ್ಲ. ಹೀಗಾಗಿ ಚಿತ್ರರಂಗದಿಂದ ಸ್ವಲ್ಪಮಟ್ಟಿಗೆ ವಿರಾಮವನ್ನು ಪಡೆದುಕೊಂಡಿದ್ದರು.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಪೋಸ್ಟ್ ಮಾಡುವುದರ ಮುಖಾಂತರ ಸಕ್ರಿಯರಾಗಿರುತ್ತಿದ್ದರು. ಆದರೆ ಕೂಡ ಕೆಲವೊಂದು ಅಭಿಮಾನಿಗಳು ಶೃತಿಹರಿಹರನ್ ಅವರು ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಆಸೆಯನ್ನು ಹೊಂದಿದ್ದರು. ಅದಕ್ಕೆ ಪೂರಕವೆಂಬಂತೆ ಶ್ರುತಿ ಹರಿಹರನ್ ರವರು ಇತ್ತೀಚೆಗೆ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದರು. ಅಭಿಮಾನಿಗಳು ಕೂಡ ಶೃತಿಹರಿಹರನ್ ರವರ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಸಂತೋಷವನ್ನು ವ್ಯಕ್ತಪಡಿಸಿದರು. ಒಟ್ಟಾರೆಯಾಗಿ ಈ ಫೋಟೋಶೂಟ್ ಗಳ ಮೂಲಕ ಶೃತಿಹರಿಹರನ್ ರವರು ಕನ್ನಡ ಚಿತ್ರರಂಗಕ್ಕೆ ಮತ್ತೊಮ್ಮೆ ಕಾಲಿಡಲಿದ್ದಾರೆ ಎನ್ನುವ ಸುಳಿವು ನೀಡಿದರು.

ಅಂತೂ ಇಂತೂ ಶ್ರುತಿ ಹರಿಹರನ್ ಅವರ ಅಭಿಮಾನಿಗಳಿಗೆ ಈಗ ಒಂದು ದೊಡ್ಡ ಸಂತೋಷದ ಸುದ್ದಿ ಸಿಕ್ಕಿದೆ ಎಂದು ಹೇಳಬಹುದಾಗಿದೆ. ಹೌದು ಹಲವಾರು ವರ್ಷಗಳ ವಿರಾಮದ ನಂತರ ಈಗ ಮತ್ತೊಮ್ಮೆ ಶ್ರುತಿ ಹರಿಹರನ್ ರವರು ಕನ್ನಡ ಚಿತ್ರರಂಗಕ್ಕೆ ಮರು ಪಾದಾರ್ಪಣೆ ಮಾಡುತ್ತಿದ್ದಾರೆ. ಡಾಲಿ ಧನಂಜಯ್ ರವರೊಂದಿಗೆ ಈಗಾಗಲೇ ಸೂಪರ್ ಹಿಟ್ ಜೋಡಿ ಆಗಿ ಕಾಣಿಸಿಕೊಂಡಿರುವ ಶೃತಿಹರಿಹರನ್ ಅವರು ಈಗ ಮತ್ತೊಮ್ಮೆ ಅವರದೇ ಬಹುನಿರೀಕ್ಷಿತ ಹೆಡ್ ಬುಷ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ನಾತಿಚರಾಮಿ ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿಯನ್ನು ಕೂಡ ನಟಿ ಶೃತಿ ಹರಿಹರನ್ ರವರು ಗೆದ್ದಿದ್ದಾರೆ. ಇಂತಹ ಪ್ರತಿಭಾನ್ವಿತ ನಟಿ ಮತ್ತೊಮ್ಮೆ ಈಗ ಕನ್ನಡ ಚಿತ್ರರಂಗಕ್ಕೆ ವಾಪಸ್ ಆಗುತ್ತಿರುವುದು ಸಂತೋಷದಾಯಕ ಸುದ್ದಿಯಾಗಿದೆ. ಮತ್ತೊಮ್ಮೆ ತೆರೆಯ ಮೇಲೆ ವಾಪಸಾಗುವ ಶೃತಿ ಹರಿಹರನ್ ಯಾವ ರೀತಿ ಪರ್ಫಾರ್ಮೆನ್ಸ್ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.


Leave a Reply

Your email address will not be published. Required fields are marked *