ನಟಿ ಶ್ರುತಿ ಅವರ ಮಾಜಿ ಪತಿ ನಿರ್ದೇಶಕ ಎಸ್ ಮಹೇಂದರ್ ಎರಡನೇ ಮದುವೆ ಆಗಿದ್ದು ಯಾರನ್ನು ಗೊತ್ತಾ..!?

ಸುದ್ದಿ

ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ಸೆಲೆಬ್ರಿಟಿಗಳು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಈಗಾಗಲೇ ಇಂತಹ ಘಟನೆ ಕನ್ನಡ ಚಿತ್ರರಂಗದಲ್ಲಿ ಹಲವಾರು ಬಾರಿ ನಡೆದಿದೆ. ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಆಗಿರುವ ಎಸ್ ಮಹೇಂದ್ರ ಹಾಗೂ ನಟಿ ಶ್ರುತಿ ಅವರ ವಿವಾಹದ ಕುರಿತಂತೆ. ಇಬ್ಬರೂ ಕೂಡ ಪ್ರೀತಿಸಿ ಮದುವೆಯಾಗಿದ್ದರು. ಕನ್ನಡ ಚಿತ್ರರಂಗದ ನಿರ್ದೇಶಕರಾಗಿ ಎಸ್ ಮಹೇಂದ್ರ ರವರು ಕೂಡ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದರು.

90ರ ದಶಕದಲ್ಲಿ ಕೌಟುಂಬಿಕ ಸಿನಿಮಾಗಳನ್ನು ಹೇಗೆ ಮಾಡಬೇಕು ಎಂಬುದನ್ನು ಕನ್ನಡ ಚಿತ್ರರಂಗಕ್ಕೆ ತೋರಿಸಿಕೊಟ್ಟ ಅಂತಹ ಮಹಾನ್ ನಿರ್ದೇಶಕ ಎಸ್ ಮಹೇಂದ್ರ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಅಂದಿನ ಕಾಲದಲ್ಲಿ ಮಹೇಂದ್ರ ರವರು ಮಾಡುವ ಸಿನಿಮಾಗಳು ಪ್ರಮುಖವಾಗಿ ಹಳ್ಳಿಯ ಸೊಗಡು ಪರಿಶುದ್ಧ ಪ್ರೇಮಕಥೆ ಹಾಗೂ ಕೌಟುಂಬಿಕ ಮೌಲ್ಯಗಳನ್ನು ಸಮಾಜಕ್ಕೆ ತೋರಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದೆ. ತಾಯಿ ಇಲ್ಲದ ತಬ್ಬಲಿ ಕರ್ಪೂರದ ಗೊಂಬೆ ವಾಲಿ ಹೀಗೆ ಹಲವಾರು ಪ್ರಮುಖ ಸಿನಿಮಾಗಳನ್ನು ಮಹೇಂದ್ರ ರವರು ತಮ್ಮ ಅದ್ಭುತ ನಿರ್ದೇಶನದ ಮೂಲಕ ನಿರ್ದೇಶಿಸಿದ್ದಾರೆ.

ಅಂದಿನ ಕಾಲದಲ್ಲಿ ಟ್ರೆಂಡ್ ಸೆಟ್ಟರ್ ಆಗಿ ಮಹೇಂದ್ರ ರವರು ನಿರ್ದೇಶನವನ್ನು ಮಾಡುತ್ತಿದ್ದರು. ತಮ್ಮ ವೃತ್ತಿಯ ಉನ್ನತ ಹಂತದಲ್ಲಿ ಇರಬೇಕಾದರೆ ನಟಿ ಶ್ರುತಿ ರವರನ್ನು ವಿವಾಹವಾಗುತ್ತಾರೆ. ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಇವರಿಗೆ ಒಬ್ಬ ಹೆಣ್ಣುಮಗಳು ಕೂಡ ಜನಿಸುತ್ತಾರೆ. ಇದಾದ ಕೆಲವೇ ವರ್ಷಗಳಲ್ಲಿ ಅಂದರೆ 2009 ರಲ್ಲಿ ಹಲವಾರು ವರ್ಷಗಳ ದಾಂಪತ್ಯ ಜೀವನಕ್ಕೆ ಎಳ್ಳು ನೀರು ಬಿಡುತ್ತಾರೆ. ಇನ್ನು ಮೂರು ವರ್ಷಗಳ ಕಾಲ ಎಸ್ ಮಹೇಂದ್ರ ರವರು ಒಬ್ಬಂಟಿಯಾಗಿ ಉಳಿದುಕೊಂಡು ಬಿಡುತ್ತಾರೆ.

ನಂತರ 2012 ರಲ್ಲಿ ಯಶೋಧ ಎನ್ನುವವರನ್ನು ಮದುವೆಯಾಗುತ್ತಾರೆ. ಈಗ ಅವರಿಗೆ ಒಬ್ಬ ಮುದ್ದಾದ ಮಗ ಕೂಡ ಇದ್ದಾನೆ. ಸದ್ಯಕ್ಕೆ ಸುಖಶಾಂತಿ ನೆಮ್ಮದಿಯಿಂದ ಸಂಸಾರ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ನಿರ್ದೇಶನಕ್ಕೆ ವಾಪಸ್ ಆಗುವ ಎಲ್ಲಾ ಸಾಧ್ಯತೆಗಳು ಕೂಡ ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿದೆ. ನಿರ್ದೇಶಕ ಎಸ್ ಮಹೇಂದ್ರ ರವರು ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ನಿರ್ದೇಶನಕ್ಕೆ ವಾಪಸಾದರೆ ಖಂಡಿತವಾಗಿ ಪ್ರೇಕ್ಷಕರು ಇವರ ಕೌಟುಂಬಿಕ ಸಿನಿಮಾಗಳನ್ನು ಎಂಜಾಯ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಹೇಂದ್ರ ರವರ ಸಿನಿಮಾಗಳ ಕುರಿತಂತೆ ಹಾಗೂ ಅವರ ವ್ಯಕ್ತಿತ್ವದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.


Leave a Reply

Your email address will not be published. Required fields are marked *