ನಮಸ್ತೆ ಪ್ರೀತಿಯ ವೀಕ್ಷಕರೆ ನಟ ರಾಮ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನೆಮಾಗಳಲ್ಲಿ ನಟಿಸಿ, ನಿರ್ಮಿಸಿ, ಹಾಗೂ ನಿರ್ದೇಶನ ಕೂಡ ಮಾಡಿದ್ದಾರೆ. ಇವರು ಪ್ರಖ್ಯಾತ ನಿರ್ಮಾಪಕ ಮತ್ತು ನಟ ಶೃಂಗಾರ ನಾಗರಾಜ್ ಅವರ ಮಗ. 1990 ರಲ್ಲಿ ತೆರೆಕಂಡ. ಆವೇಶ ಸಿನೆಮಾದಿಂದ ಕನ್ನಡ ಚಿತ್ರರಂಗಕ್ಕೆ ಪ್ರವೇಸಿದರು. ನಂತರ ಕೆಲವು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸಿದ ಇವರು 1993 ರಲ್ಲಿ ತೆರೆಕಂಡ “ಗೆಜ್ಜೆನಾದ” ಸಿನೆಮಾದಿಂದ ಪೂರ್ಣ ಪ್ರಮಾಣದ ನಾಯಕನಾಗಿ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡರು.
ಹಲವು ವರ್ಷಗಳ ನಟನೆಯ ನಂತರ ಇವರು 2006 ರಲ್ಲಿ ‘ಪಾಂಡವರು’ ಚಿತ್ರವನ್ನು ನಿರ್ಮಾಣ ಮಾಡಿದ್ದರು. ರಾಮ್ ಕುಮಾರ್ ಎಂದ ತಕ್ಷಣ ನಮಗೆ ತಟ್ಟನೆ ನೆನಪಿಗೆ ಬರುವುದು ಅವರ ಸುಂದರ ಮುಖ, ನಿಷ್ಕಲ್ಮಶ ನಗು, ರಾಮ್ ಕುಮಾರ್ ಕೇವಲ ನಟ ಮಾತ್ರ ಆಗಿರದೆ ಅದೆಷ್ಟೋ ಹುಡುಗಿಯರ ಫೆವರೇಟ್ ನಟ ಕೂಡ ಆಗಿದ್ದಾರೆ.
ಇನ್ನು ನಟ ರಾಮ್ ಕುಮಾರ್ ಅವರ ಗೆಜ್ಜೆನಾದ, ಕಾವ್ಯ, ತವರಿನ ತೊಟ್ಟಿಲು ಮುಂತಾದ ಸಿನೆಮಾಗಳನ್ನು ಈಗಾಲೂ ಜನ ಇಷ್ಟಪಡುತ್ತಾರೆ. ರಾಮ್ ಕುಮಾರ್ ಅವರು ಚಿಕ್ಕ ವಯಸ್ಸಿನಿಂದಲೂ ಸಿನೆಮಾರಂಗದ ಬಗ್ಗೆ ಅತಿಯಾದ ಆಸಕ್ತಿ ಬಳಸಿಕೊಂಡಿದ್ದರು. ಅವರು ಆವೇಶ ಚಿತ್ರದ ಮೂಲಕ ಸಿನೆಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಸಿನಿ ಪ್ರೇಕ್ಷಕರಿಗೆ ಹಲವಾರು ಸಿನೆಮಾಗಳನ್ನು ನೀಡಿ ಉತ್ತಮ ನಟರಾಗಿ ಹೋರಾಮಮ್ಮಿದರು.
ಕನ್ನಡ ಚಿತ್ರರಂದಲ್ಲಿ 80 ಮತ್ತು 90ರ ದಶಕದಲ್ಲಿ ನಟ ರಾಮ್ ಕುಮಾರ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ ಹೇಳಿ. ಹಾಗೆ ನೋಡಿದರೆ ಅಂದಿನ ಕಾಲದ ಯುವತಿಯರು ನೆಚ್ಚಿನ ನಟನಾಗಿ ಕೂಡ ಆಗಿದ್ದರು. ಅಷ್ಟೇ ಅಲ್ಲದೆ ತಮ್ಮ ತಂದೆ ಖ್ಯಾತ ನಿರ್ಮಾಪಕ ಹಾಗೂ ನಟ ಆಗಿದ್ದರಿಂದ ರಾಮ್ ಕುಮಾರ್ ಅವರಿಗೆ ಚಿತ್ರ ರಂಗದಲ್ಲಿ ಪ್ರವೇಶ ನೀಡಲು ಅತೀ ಸುಲಭವಾಯಿತು. ಅಂದು ಯಶಸ್ಸಿನ ಉತ್ತುಂಗದಲ್ಲಿದ್ದ ರಾಮ್ ಕುಮಾರ್ ದೊಡ್ಮನೆ ಅಳಿಯ ಅಗಿದ್ದು ಹೇಗೆ ಎಂದು ತಿಳಿಸಿಯಲೂ ಮುಂದೆ ಓದಿ.
ಡಾ. ರಾಜ್ ಕುಮಾರ್ ಅವರ ಬ್ಯಾನರ್ ನಲ್ಲಿ ತಯಾರಾಗುವ ಎಲ್ಲಾ ಚಿತ್ರಗಳಿಗೆ ಮಗಳು ಪೂರ್ಣಿಮ ಬಂದು ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ನಟ ರಾಮ್ ಕುಮಾರ್ ಹಾಗೂ ಪೂರ್ಣಿಮಾ ಅವರಿಗೆ ಪರಿಚಯವಾಗುತ್ತದೆ. ಇನ್ನು ಅಣ್ಣಾವ್ರು ಐದು ಜನ ಮಕ್ಕಳಲ್ಲಿ ಪೂರ್ಣಿಮಾ ಅವರು ದೊಡ್ಡವರದಮೇಲೆ ನಟನೆಗೆ ಬಾರದೆ ಪ್ರೊಡಕ್ಷನ್ ನತ್ತ ಮುಖ ಮಾಡುತ್ತಾರೆ.
1994ರಲ್ಲಿ ಇವರಿಬ್ಬರ ಸ್ನೇಹ ಪ್ರೀತಿಗೆ ಒಳಗಾಗುತ್ತಾರೆ. ಇನ್ನು ಈ ವಿಷಯ ಎರಡು ಕುಟುಂಬಗಳಿಗೂ ತಿಳಿದ ಬಳಿಕ ಉತ್ತಮ ಸ್ನೇಹ ಹೊಂದಿದ್ದ ಎರಡು ಕುಟುಂಬದ ಸದ್ಯಸರು ಮದುವೆಗೆ ಒಪ್ಪಿಗೆ ಸುಚಿಸುತ್ತಾರೆ. ಈ ಮೂಲಕ ನಟ ರಾಮ್ ಕುಮಾರ್ ದೊಡ್ಮನೆ ಅಳಿಯ ಆಗಿದ್ದರೂ ಕೂಡ ನಟ ರಾಮ್ ಕುಮಾರ್ ಎಲ್ಲಿಯೂ ಕೂಡ ದೊಡ್ಮನೆ ಅಳಿಯ ಅನ್ನುವ ಜಂಬ ಇದುವರೆಗೂ ಎಲ್ಲಿಯೂ ಕೂಡ ತೋರಿಸಿಲ್ಲ ದೊಡ್ಮನೆಗೆ ಕೆಟ್ಟ ಹೆಸರು ಬರದಂತೆ ನೋಡಿಕೊಂಡು ಬಂದಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.