ನನ್ನ ಅಣ್ಣ ಇದ್ದಿದ್ರೆ ತಬ್ಬಿ ಮುದ್ದಾಡುತ್ತಿದ್ದೆ ಎಂದು ಅಣ್ಣಾವ್ರನ್ನು ನೆನೆದು ಭಾವುಕರಾದ ಸಹೋದರಿ ನಾಗಮ್ಮ..!?

ಸುದ್ದಿ

ಕನ್ನಡದ ಮೇರು ನಟ ಡಾ. ರಾಜಕುಮಾರ್ ಅವರ 93 ನೇ ಹುಟ್ಟುಹಬ್ಬ ಮೊನ್ನೆ ತಾನೇ ಅವರ ಅಭಿಮಾನಿಗಳು ಹಾಗೂ ಕುಟುಂಬದವರು ಆಚರಿಸಿದರು. ಸೋಷಿಯಲ್ ಮೀಡಿಯಾದಲ್ಲಿ ಅಣ್ಣಾವ್ರು ಅಭಿಮಾನಿಗಳು ಅವರ ಭಾವ ಚಿತ್ರವನ್ನು ಶೇರ್ ಮಾಡಿಕೊಂಡು, ಅವರ ಹುಟ್ಟುಹಬ್ಬ ವನ್ನು ಸಂಭ್ರಮದಿಂದ ಆಚರಿಸಿದರು. ಈ ಸಮಯದಲ್ಲಿ ಡಾ. ರಾಜ್ ಕುಮಾರ್ ಅವರ ಸಹೋದರಿ ನಾಗಮ್ಮ ಅವರು ಒಂದು ಭಾವನಾತ್ಮಕ ಶುಭಾಶಯವನ್ನು ಕೋರಿದರು.
ದೊಡ್ಮನೆ ದೇವರು ಡಾ. ರಾಜ್ ಕುಮಾರ್ ಅವರ ಹುಟ್ಟೂರು ಚಾಮರಾಜನಗರದ ದೊಡ್ಡ ಗಜಾನುರಿನಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ನಾಗಮ್ಮ ಅವ್ರು ನನ್ನ ಅಣ್ಣ ಇದ್ದಿದ್ದರೆ ಅವನನ್ನು ಮುದ್ದಾಡುತಿದ್ದೆ ಎನ್ನುವ ಪ್ರೀತಿಯ ಮಾತನ್ನು ಆಡಿದ್ದಾರೆ.ಪ್ರತಿ ವರ್ಷ ಅವರ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಸಹಾ ಹೇಳುತಿದ್ದೆ. ನನ್ನ ಅಣ್ಣನಿಗೆ ಮುತ್ತು ಕೊಡುತ್ತಿದ್ದೆ ಎಂದು ಆ ದಿನಗಳನ್ನು ನಾಗಮ್ಮ ಅವರು ನೆನಪಿಸಿಕೊಂಡರು.

ಈ ವೇಳೆ ಭಾವುಕರಾಗಿದ್ದ ಅವರು ಅಣ್ಣ ಇಲ್ಲವಲ್ಲ ಹೀಗಿ ತಬ್ಬಿಕೊಂಡು ಶುಭಾಶಯ ಹೇಳೋಕೆ? ನನ್ನ ಒಬ್ಬಳನ್ನೇ ಬಿಟ್ಟು ಹೋಗಿದ್ದಾನೆ. ಅವನು ನನ್ನನ್ನು ಕರೆಸಿಕೊಳ್ಳಬೇಕು ಎಂದು ಭಾವುಕರಾದರು. ನಾವು ಎಲ್ಲರು ಒಟ್ಟಿಗೆ ಬೆಳಿದ್ವಿ ನಾವೆಲ್ಲರೂ ಒಟ್ಟಿಗೆ ಇರಬೇಕು ಅಷ್ಟೇ ಸಾಕು ಎಂದು ಬಾವುಕಾರಾದರೂ ನಾಗಮ್ಮ ನವರು. ಮತ್ತೊಂದು ಕಡೆ ಇಂದು ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬ ವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದರು.

ಕರ್ನಾಟಕ ಸರ್ಕಾರ ಮತ್ತು ಡಾ. ರಾಜಕುಮಾರ್ ಸ್ಮಾರಕ ಟ್ರೇಸ್ಟ್ ಪ್ರತಿ ವರ್ಷದನಂತೆ ಈ ವರ್ಷವೂ ನಾನಾ ರೀತಿಯ ಕಾರ್ಯಕ್ರಮವನ್ನು ನಡೆಸಿದೆ. ಇದಲ್ಲದೆ ಕರ್ನಾಟಕ ಸರ್ಕಾರ ಚಲನಚಿತ್ರ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಇನ್ನು ಅಣ್ಣಾವ್ರುರ ಪುಣ್ಯ ಭೂಮಿ ಸ್ಥಳದಲ್ಲಿ ಅಭಿಮಾನಿಗಳು ರಕ್ತ ದಾನ ಶಿಬಿರ, ನೇತ್ರದಾನ, ಅನ್ನ ಸಂತರ್ಪಣೆ ಹಲವಾರು ಕಾರ್ಯಕ್ರಮವನ್ನು ಮಾಡಿದ್ದಾರೆ. ಇದರಿಂದ ಅಣ್ಣಾವ್ರು ಕುಟುಂಬ ಹಾಗೂ ಅಭಿಮಾನಿಗಳು ತುಂಬಾ ಸಂತೋಷಗೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡರು

ಪ್ರತಿ ವರ್ಷ ದಂತೆ ಈ ವರ್ಷನು ಅಣ್ಣಾವ್ರು ಹುಟ್ಟುಹಬ್ಬ ದಂದು ಲಕ್ಷಾಂತರ ಜನರ ಶುಭಾಶಯಗಳನ್ನು ಕೊರಿದ್ದಾರೆ ಅಭಿಮಾನಿಗಳು ಮಾತ್ರ ವಲ್ಲದೆ ಕನ್ನಡ ಚಿತ್ರರಂಗದ ಹಿರಿಯ ಹಾಗೂ ಕಿರಿಯ ಕಲಾವಿದರು ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದರು. ನಮ್ಮ ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದರೆ ಡಾ. ರಾಜ್ ಕುಮಾರ್ ಅಭಿಮಾನಿಗಳು ಕಾಮೆಂಟ್ ಮೂಲಕ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *