ನನ್ನ ಡೈವೋರ್ಸಿ ಬಳಿಕ ಜೀವನದಲ್ಲಿ ಅದೆಷ್ಟು ನೋವು ಅನುಭವಿಸಿದ್ದಿನಿ ಗೊತ್ತಾ? ಮನಸ್ಸಿನ ಒತ್ತಡವನ್ನು ಹೊರಹಾಕಿದ ನಟಿ ಸೋನು ಗೌಡ ಹೇಳಿದ್ದೇನು ನೋಡಿ!!

ಸುದ್ದಿ

ಕನ್ನಡ ಸಿನೆಮಾರಂಗದಲ್ಲಿ ನಟ, ನಟಿಯರು ಬದುಕು ಅಷ್ಟು ಸುಲಭವಾಗಿ ಇರಲ್ಲ, ಅವರ ಲೈಫ್ ಸ್ಟೈಲ್ ನೋಡಿದವರಿಗೆ ಇವರ ಜೀವನ ಅದೆಷ್ಟು ಸುಂದರ ಎಂದು ಭಾವನೆ ಇರುತ್ತೆದೆ. ಸೆಲೆಬ್ರಿಟಿಗಳ ಜೀವನ ತುಂಬಾ ಕಲರ್ ಫುಲ್ ಲೈಫ್ ಸ್ಟೈಲ್ ನೋಡಿದಾಗ ಇವರೇ ಅದೃಷ್ಟವಂತರು ಎಂದು ನಾವು ನಾವು ಅಂದುಕೊಳ್ಳುತ್ತೇವೆ. ಆದರೆ ಮೇಲ್ನೋಟಕ್ಕೆ ಖುಷಿಯಾಗಿ ಕಾಣಿಸುವ ಅನೇಕ ಸೆಲೆಬ್ರಿಟಿಗಳ ವೈಯಕ್ತಿಕ ಬದುಕಿನಲ್ಲಿ ತುಂಬಾ ಕಷ್ಟ ಇರುತ್ತದೆ. ಅವರ ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಅನುಭವಿಸಿರುತ್ತಾರೆ. ಆದರೆ ಅವುಗಳನ್ನು ಎಲ್ಲೂ ತೋರಿಸಿಕೊಳ್ಳುವುದಿಲ್ಲ.

ಅನೇಕ ಸೆಲೆಬ್ರಿಟಿಗಳು ಕೆಲವೊಂದು ಸನ್ನಿವೇಶ, ಸಂದರ್ಭಗಳಲ್ಲಿ ತಮ್ಮ ಜೀವನದ ಅದುಹೋದ ಕಹಿ ಘಟನೆಗಳ ಕುರಿತು ಹೇಳಿಕೊಂಡಿದ್ದಾರೆ. ಅದೇ ರೀತಿ ನಮ್ಮ ಚಿತ್ರರಂಗದ ನಟಿ ಸೋನು ಗೌಡ ಕೂಡ ಅವರ ಜೀವನದ ಕಹಿ ಘಟನೆಗಳ ನೋವನ್ನು ಹಂಚಿಕೊಂಡಿದ್ದಾರೆ. ಈ ರೀತಿ ಮಾಧ್ಯಮಗಳ ಮುಂದೆ ಹೇಳಲು ಕಾರಣವಾಗಿದ್ದು ಅವರು ನಾಯಕಿಯಾಗಿ ನಟಿಸಿರುವ ‘ವೆಡ್ಡಿಂಗ್ ಗಿಫ್ಟ್’ ಚಿತ್ರ, ನಟಿ ಸೋನು ಗೌಡ ಅವರು ವೆಡ್ಡಿಂಗ್ ಗಿಫ್ಟ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಚಿತ್ರತಂಡ ಬಿಡುಗಡೆ ಮಾಡಿದ್ದು, ಈ ಕಾರ್ಯಕ್ರಮ ಮುಗಿದ ಬಳಿಕ ಮಾಧ್ಯಮ ಮುಂದೆ ಮಾತನಾಡಿದ ಸೋನು ಗೌಡ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. 2010 ನವೆಂಬರ್ 1 ರಂದು ಸೋನು ಗೌಡ ತಮ್ಮ ವೈವಾಹಿಕ ಜೀವನಕ್ಕೆ ಕಲಿಟ್ಟಿದ್ದರು. ಆದರೆ ಹೆಚ್ಚು ದಿನ ಅವರ ಸಂಸಾರ ಸಗದೆ ಮುರಿದು ಬಿದ್ದಿತು.

ಕೆಲವು ಕಾರಣಗಳಿಂದ ಗಂಡನಿಂದ ನೊಂದು ದೂರ ಆಗಿ ಡೈ-ವೋರ್ಸ್ ಕೊಟ್ಟಿದ್ದರು. ಈ ಕಾರಣದಿಂದ ಸೋನು ಗೌಡ ಅವರು ಜೀವನದಲ್ಲಿ ಬಹಳಷ್ಟು ನೊಂದಿದ್ದರು. ಅನೇಕ ಕಷ್ಟಗಳನ್ನು ಎದುರಿಸಿದ್ದಾರೆ. ಆದರೆ ಒಬ್ಬ ಹೆಣ್ಣಾಗಿ ಎಲ್ಲವನ್ನು ಧೈರ್ಯವಾಗಿ ಎದುರಿಸಿದ್ದರು. ಸೋನು ಗೌಡ ಅವರು 2008 ರಲ್ಲಿ ಬಿಡುಗಡೆಯದ ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಪೋಷಕ ಪಾತ್ರ ಮಾಡಿದ್ದರು. ನಂತರ ಪರಮೇಶಿ ಪಾನ್ ವಾಲಾ, ಗುಲಾಮ, ಕಿರುಗೂರಿನ ಗಯ್ಯಾಳಿಗಳು, ಐ ಲವ್ ಯೂ ಹೀಗೆ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

ಅಷ್ಟೇ ಅಲ್ಲದೇ, ತೆಲುಗು, ತಮಿಳು, ಮಲಯಾಳಂ ಸಿನೆಮಾಗಳಲ್ಲಿ ತಮ್ಮ ಅದ್ಭುತ ನಟನೆ ಮಾಡಿ ಆ ಕ್ಷೇತ್ರದಲ್ಲಿಯೂ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ನಟಿ ಸೋನು ಗೌಡ ಅವರು ಇತ್ತೀಚಿಗೆ ಕನ್ನಡಡಿಗರ ನೆಚ್ಚಿನ ಧಾರಾವಾಹಿ ಅನಿರುದ್ದ್ ಹಾಗೂ ಮೇಘ ಶೆಟ್ಟಿ ಅಭಿನಯದ ಜೊತೆ ಜೊತೆಯಲಿ ಯಲ್ಲಿ ನಟಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ವೆಡ್ಡಿಂಗ್ ಗಿಫ್ಟ್ ಚಿತ್ರದಲ್ಲಿ ನಟಿಸಿರುವ ಸೋನು ಗೌಡ ಅವರ ಪಾತ್ರ, ಅವರ ವೈಯಕ್ತಿಕ ಜೀವನಕ್ಕೆ ಸ್ವಲ್ಪ ಹತ್ತಿರವಾಗಿದೆ ಎಂದಿದ್ದಾರೆ ನಟಿ ಸೋನು ಗೌಡ.

ಹಾಗಾಗಿ ಈ ಚಿತ್ರದಲ್ಲಿ ನಟಿಸುವಾಗ ವೈಯಕ್ತಿಕ ಜೀವನ ಮತ್ತೆ ನೆನಪಾಗಿದೆ ಎಂದಿದ್ದಾರೆ. ಕರ್ಪೋರೆಟ್ ಲೈಫ್ ಸ್ಟೈಲ್ ನಡೆಸುವ ಹುಡುಗಿಯ ವೇಷದಲ್ಲಿ ಕಾಣಿಸಿಕೊಳ್ಳುವ, ಎಲ್ಲವನ್ನೂ ಕರ್ಪೋರೆಟ್ ದೃಷ್ಟಿಯಲ್ಲೇ ನೋಡುವ ಹುಡುಗಿಯೊಬ್ಬಳ ಲೈಫ್ ಸ್ಟೈಲ್ ನಲ್ಲಿ ಮದುವೆಯ ನಂತರ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಅನ್ನೋದರ ಸುತ್ತ ಸಿನೆಮಾ ನಡೆಯುತ್ತದೆ. ಕರ್ಪೋರೆಟ್ ಲೈಫ್ ಬಯಸುವ, ಒಬ್ಬಳೇ ಆಗಿರುವಂತಃ, ನಾನೇ ಎಲ್ಲವೂ ಎನ್ನುವಂತ “ಇಗೋ ಇರುವಂತ ಕ್ಯಾರೆಕ್ಟರ್ ಸೋನು ಗೌಡ ಅವರದ್ದು.

ಸಿನೆಮಾ ಪ್ರಾರಂಭದಲ್ಲಿ ಒಳ್ಳೆಯವರಗಿದ್ದು ನಂತರ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ನಟಿ ಸೋನು ಗೌಡ ಅವರಿಗೆ ಇದು ವಿಶೇಷ ಸಿನೆಮಾ ಆಗಲಿದೆ.ಈ ಸಿನೆಮಾದಲ್ಲಿ ನನಗೆ ನನ್ನ ಪಾತ್ರ ತುಂಬಾ ಇಷ್ಟವಾಗಿದೆ. ಅಭಿಮಾನಿಗಳಿಗೆ ಈ ಹೊಸ ಪಾತ್ರದಲ್ಲಿ ಸೋನು ಗೌಡ ಅವರನ್ನು ಒಪ್ಪಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೇ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ. ನಟಿ ಸೋನು ಗೌಡ ಅವರು ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಳಿಸಿ.


Leave a Reply

Your email address will not be published. Required fields are marked *