ನನ್ನ ಮಗನ ಜೀವನವನ್ನು ನಾನೇ ಹಾಳು ಮಾಡಿಬಿಟ್ಟೆ ಎಂದು ಕಣ್ಣೀರಿಟ್ಟ ನಟ ಜಗ್ಗೇಶ್!! ಯಪ್ಪಾ ಕಾರಣ ತಿಳಿದರೆ ನಿಜಕ್ಕೂ ಬೇಚ್ಚಿ ಬೀಳ್ತೀರಾ!!

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ನವರಸ ನಾಯಕ ಜಗ್ಗೇಶ್ ಬಗ್ಗೆ ಎಲ್ಲರಿಗೂ ಗೊತ್ತು. ಸಾಧ್ಯ ಇದೀಗ ನಮ್ಮ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಬದಲಾಗಿದ್ದು ಯಾವ ಮಟ್ಟಕ್ಕೆ ಬದಲಾಗಿ ಬಿಟ್ಟಿದೆ ಎಂದರೆ ದಶಕಗಳ ಹಿಂದಿನ ಚಿತ್ರರಂಗವೇ ಬೇರೆ ಈಗಿನ ಚಿತ್ರರಂಗವೇ ಬೇರೆ ಎನ್ನಬಹುದು. ಹೌದು ಅಂದಿನ ಕಾಲದಲ್ಲಿ ಈ ಯಾವ ನಟರಿಗೂ ಕೂಡ ದೊಡ್ಡ ಮಟ್ಟದಲ್ಲಿ ಸಂಭಾವನೆ ಸಿಗುತ್ತಿರಲಿಲ್ಲ. ಅದರಲ್ಲೂ ಜೂನಿಯರ್ ಕಲಾವಿದರಿಗಂತೂ ಕೇವಲ ನೂರಾರಿನ ಇನ್ನೂರು ಗಳಿಗೆಲ್ಲ ಅಭಿನಯ ಮಾಡಿ ಚಿತ್ರರಂಗದ ಕೆಲಸ ಮಾಡುತ್ತಿದ್ದರು.

ಇನ್ನು ಇಂದಿನ ನಟರುಗಳು ಯಾವುದೇ ಸಿನೆಮಾದ ಚಿತ್ರಿಕಾರಣದ ಸೆಟ್ ಗೆ ತೆರಳಬೇಕು ಎಂದರೆ ಐಷಾರಾಮಿ ಕರುಗಳನ್ನೇ ಅಪೇಕ್ಷೆಸುತ್ತಾರೆ. ಅಂದರೆ ಆ ಸಮಯದಲ್ಲಿ ಕುಟುಂಬದ ನೌಕೆ ಸಾಗಿಬಿಟ್ಟರೆ ಸಾಕು ಎಂದು ಅದೆಷ್ಟೋ ಕಲಾವಿದರು ಯೋಚಿಸುತ್ತಿದ್ದರು. ಅಂತವರಲ್ಲಿ ಒಬ್ಬರದ ಕನ್ನಡ ಚಿತ್ರರಂಗದಲ್ಲಿ ನವರಸ ನಾಯಕ ಎಂದೇ ಖ್ಯಾತಿ ಪಡೆದಿರುವ ಜಗ್ಗೇಶ್ ಅವರು ಕೂಡ ಒಬ್ಬರು.

ಇನ್ನು ಜಗ್ಗೇಶ್ ಅವರ ತಂದೆ ಅವರ ಊರಿನಲ್ಲಿ ಬಹಳ ಅನುಕೂಲವಾಗಿದ್ದರೂ ಕೂಡ ಸಿನೆಮಾಕ್ಷೇತ್ರದಲ್ಲಿ ಏನಾದರು ಸಾಧನೆ ಮಾಡಬೇಕು ಹಾಗೂ ನಟನಾಗಿ ಗುರುತಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಬೆಂಗಳೂರಿಗೆ ಬಂದರು ಜಗ್ಗೇಶ್ ನಂತರ ಅವರು ಆರಂಭಿಕ ದಿನಗಲ್ಲಿ ಪರಿಮಳ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ನಂತರ ಜಗ್ಗೇಶ್ ಸಾಕಷ್ಟು ಸಿನೆಮಾಗಳಲ್ಲಿ ನಟಿಸಿ ಒಬ್ಬ ಯಶಸ್ವಿ ನಾಯಕನಾಗಿ ಸಿನೆಮಾಕ್ಷೇತ್ರದಲ್ಲಿ ಹೆಸರು ಮಾಡುತ್ತಾರೆ.

ಇತ್ತೀಚಿಗೆ ಖಾಸಗಿ ಮಾಧ್ಯಮದ ಸಂದರ್ಶನ ಒಂದರಲ್ಲಿ ಸ್ವತಃ ಜಗ್ಗೇಶ್ ಅವರೇ ನನ್ನ ಮಗನ ಸಿನಿ ಬದುಕು ಹಾಳಾಗಲು ನಾನೇ ಕಾರಣ ಎಂದು ಅಚ್ಚರಿಯ ಹೇಳಿಕೆಯನ್ನು ನೀಡಿದರು.ನಟರ ಮಕ್ಕಳು ನಟರಾಗುವುದು ಈ ಸಿನೆಮಾರಂಗದಲ್ಲಿ ಸಹಜ. ಅದರಂತೆ ನನ್ನ ಮಗ ಗುರುರಾಜ್ ಕೂಡ ಗಿಲ್ಲಿ ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಆ ಚಿತ್ರ ಬಿಡುಗಡೆಯ ನಂತರ ಅವನಿಗೆ ತಕ್ಕ ಯಶಸ್ಸು ಗುರುರಾಜ್ ಗೆ ತಂದುಕೊಡಲಿಲ್ಲ.

ಇನ್ನು ಗುರುರಾಜ್ ಗೆ ಬಹಳಷ್ಟು ವರ್ಷಗಳ ಹಿಂದೆಯೇ ತಮಿಳು ಹಾಗೂ ತೆಲುಗಿನ ದೊಡ್ಡ ದೊಡ್ಡ ಬ್ಯಾನರ್ ನ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳು ಬಂದಿದ್ದವು, ಒಳ್ಳೆ ಒಳ್ಳೇ ಕಥೆಗಳು, ಹೆಸರುವಾಸಿ ಬ್ಯಾನರ್ ಗಳು ಆದರೆ ಅದೆಲ್ಲವನ್ನು ತ್ಯಜಿಸಿ ಆ ಸಮಯದಲ್ಲಿ ಅವನ ಜೀವನವನ್ನೇ ಹಾಳು ಮಾಡಿಬಿಟ್ಟೆ ಎಂದು ಜಗ್ಗೇಶ್ ಹೇಳಿದರು.

ನಾವು ಹುಟ್ಟಿರೋದು ಬೆಳೆದಿರೋದು, ತಿನ್ನೋ ಅನ್ನ, ಕನ್ನಡ ಮಣ್ಣಿಂದಲೇ ಹಾಗಾಗಿ ಏನೇ ಆದರೂ ಇಲ್ಲಿಯೇ ಮಾಡೋಣ ಎಂದು ಅವನ ಪ್ರತಿಯೊಂದು ಹೆಜ್ಜೆಯನ್ನು ನಾನೇ ತಡೆದುಬಿಟ್ಟೆ. ಅಂದು ನಾನು ತಡೆಯದೆ ಹೋಗಿದ್ದಾರೆ ಅವನನ್ನು ಅವನ ಪಾಡಿಗೆ ಬಿಟ್ಟಿದ್ದಾರೆ ಇವತ್ತಿಗೆ ತಮಿಳು, ತೆಲುಗು ಸಿನೆಮಾರಂಗದಲ್ಲಿ ಸೂಪರ್ ಸ್ಟಾರ್ ಆಗಿ ಬೆಳೆಯುತ್ತಿದ್ದ, ಅವನ ಎಲ್ಲಾ ಆಸೆಗಳನ್ನು ನಾನೇ ಹಾಳು ಮಾಡಿಬಿಟ್ಟೆ” ಎನ್ನುತ್ತಾ ಮಗನ ಬಗ್ಗೆ ಭಾವುಕರಾದ ನಟ ಜಗ್ಗೇಶ್ ತಮ್ಮ ನೋವನ್ನು ಮಾಧ್ಯಮದ ಮೂಲಕ ಹೇಳಿಕೊಂಡರು. ನಟ ಜಗ್ಗೇಶ್ ಅವರ ಈ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *