ನನ್ನ ಮಗಳನ್ನು ಗ್ಲಾಮರಸಾಗಿ ತೋರಿಸೋಕೆ ನನಗೆ ಆಗುವುದಿಲ್ಲ ಎಂದು ಸ್ಪೋಟಕ ಹೇಳಿಕೆ ಕೊಟ್ಟ ಓಂ ಪ್ರಕಾಶ ರಾವ್.! ಹೇಳಿದ್ದೇಕೆ ನೋಡಿ

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ, ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ಓಂ ಪ್ರಕಾಶ್ ರಾವ್ ಮತ್ತು ಅದ್ಭುತ ನಟಿ ರೇಖಾದಾಸ್ ಜೋಡಿ ಕನ್ನಡ ಸಿನೆಮಾರಂಗದಲ್ಲಿ ಸಾಕಷ್ಟು ಸುದ್ಧಿ ಮಾಡಿದ ಜೋಡಿ. ಇವರಿಬ್ಬರೂ ಮದುವೆಯಾಗಿ ತುಂಬಾ ವರ್ಷಗಳ ಕಾಲ ಸಂಸಾರ ಮಾಡಿ ನಂತರ ಬೇರೆ ಬೇರೆಯಾದರರೂ, ಆದರೆ ಈ ದಂಪತಿಗಳಿಗೆ ಜನಿಸಿದ ಮಗಳಾದ ಶ್ರಾವ್ಯ ರಾವ್ ಇಂದಿಗೂ ಚಿತ್ರರಂಗದಲ್ಲಿ ಒಳ್ಳೇ ಅವಕಾಶ ಪಡೆಯಲು ಹಾಗೂ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಹಾರ ಸಾಹಸ ಪಡುತ್ತಾಇದ್ದಾರೆ.

ರೇಖಾದಾಸ್ ಅವರು ಓಂ ಪ್ರಕಾಶ್ ರಾವ್ ಅವರನ್ನು ಮದುವೆಯಾಗಬೇಕಾದರೆ ಹಾಸ್ಯ ಚಿತ್ರರಂಗದಲ್ಲಿ ಹಾಸ್ಯನಟಿಯಾಗಿ ಅವರು ಅಭಿನಯಿಸಿದ ಸಿನೆಮಾಗಳೆಲ್ಲ ಒಳ್ಳೆಯ ರೆಸ್ಪೋನ್ಸ್ ಪಡೆದುಕೊಳ್ಳುತ್ತಿತ್ತು. ಇನ್ನು ರೇಖಾದಾಸ್ ಟಾಪ್ ಹಾಸ್ಯ ನಟಿಯಾಗಿ ಉತ್ತುಂಗದಲ್ಲಿ ಇದ್ದರು. ಆ ಸಂದರ್ಭದಲ್ಲಿ ಓಂ ಪ್ರಕಾಶ್ ರಾವ್ ಅವರು ಸಿನೆಮಾದಲ್ಲಿ ಹಂತ ಹಂತವಾಗಿ ಬೆಳೆಯುತ್ತಿದ್ದರು ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸವನ್ನು ಮಾಡುತ್ತಿದ್ದರು. ಮೊದಮೊದಲು ಓಂ ಪ್ರಕಾಶ್ ರಾವ್ ಅವರನ್ನು ಮದುವೆಯಾಗಲು ಒಪ್ಪಿಕೊಳ್ಳದ ರೇಖಾದಾಸ್ ತದನಂತರ ಓಂ ಪ್ರಕಾಶ್ ರಾವ್ ಅವರು ಪದೇ ಪದೇ ಒತ್ತಡ ಹೇರುತ್ತಿದ್ದ ಕಾರಣ ಮದುವೆಯಾಗಲು ಒಪ್ಪಿಕೊಳ್ಳುತ್ತಾರೆ.

ಮದುವೆಯಾದ ಕೆಲ ದಿನಗಳು ಇಬ್ಬರು ಚನ್ನಾಗಿ ಜೀವನವನ್ನು ನಡೆಸುತ್ತಿರುತ್ತಾರೆ. ಆದರೆ ದಿನ ಕಳೆದಂತೆ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಲು ಶುರುವಾಗುತ್ತದೆ. ತುಂಬಾ ಬೇಗ ಓಂ ಪ್ರಕಾಶ್ ರಾವ್ ಅವರು ಮದುವೆಯಾದ ಕಾರಣ ಕುಟುಂಬದ ಕಡೆ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿರಲಿಲ್ಲ, ಆ ಸಂದರ್ಭದಲ್ಲಿ ಅವರಿಗೆ ಮಗಳು ಹುಟ್ಟುತ್ತಾಳೆ. ಆಗ ರೇಖಾದಾಸ್ ಅವರು ಅನುಭವಿಸಿದ ಕ-ಷ್ಟ ಯಾರಿಗೂ ಬರಬಾರದು.

ರೇಖಾದಾಸ್ ಅವರು ಗರ್ಭಿಣಿಯಾದಾಗ ಹಾಗೂ ಮಗು ಜನಿಸಿದ ನಂತರ ಓಂ ಪ್ರಕಾಶ್ ರಾವ್ ಅವರು ಯಾವುದೇ ಕೆಲಸವನ್ನು ಮಾಡದೆ ಸುಮ್ಮನೆ ಹಾಗೆ ಇದ್ದರು. ಇದರ ಬಗ್ಗೆ ಇಂದಿಗೂ ಓಂ ಪ್ರಕಾಶ್ ರಾವ್ ಅವರಿಗೆ ಕನಿಷ್ಠ ಪಶ್ಚಾತಾಪವು ಇಲ್ಲ. ಮಗು ಜನಿಸಿದ ನಂತರ ಓಂ ಪ್ರಕಾಶ್ ರಾವ್ ಅವರು ರೇಖಾದಾಸ್ ಅವರಿಂದ ಬಹುತೇಕ ದೂರವಾಗಿದ್ದರೆ. ಇವರಿಬ್ಬರೂ ಒಟ್ಟಿಗೆ ಸಂಸಾರವನ್ನು ಮಾಡಿದ್ದು ಬರೇ 2 ವರ್ಷ ಮಾತ್ರ ಅಷ್ಟ್ರಲ್ಲಿ ಇವರಿಬ್ಬರೂ ಬೇರೆ ಬೇರೆ ಯಾದರು.

ಇನ್ನು ರೇಖಾದಾಸ್ ಅವರ ಮಗಳು ಶ್ರಾವ್ಯ ಅವರು ದೊಡ್ಡವರಾದ ಮೇಲೆ ಸಿನೆಮಾದಲ್ಲಿ ನಟಿಸಬೇಕು ಎಂಬ ಆಸೆ ಮೂಡುತ್ತದೆ. ಮೊದಲಿಗೆ “ಲೂಸ್” ಗಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ, ನಂತರ ಇವರ ಅಭಿನಯದ ರೋಜ್ ಸಿನೆಮಾ ತಕ್ಕಮೇಟ್ಟಿಗೆ ಹೆಸರನ್ನು ತಂದುಕೊಡುತ್ತದೆ. ಇದಾದ ನಂತರ ತನ್ನ ಮಗಳಿಗೆ ಒಳ್ಳೆಯ ಹೆಸರನ್ನು ತಂದುಕೊಡಬೇಕು ಎಂದು ಓಂ ಪ್ರಕಾಶ್ ರಾವ್ ಅವರೇ ಹುಚ್ಚ 2 ಸಿನೆಮಾವನ್ನು ನಿರ್ದೇಶನ ಮಾಡುತ್ತಾರೆ.

ಆದರೆ ಆ ಸಿನೆಮಾದಲ್ಲಿಯೂ ಕೂಡ ಯಶಸ್ಸು ಕಾಣಲಿಲ್ಲ. ಶ್ರಾವ್ಯ ರಾವ್ ಯಶಸ್ಸುನ್ನು ಕಾಣದೆ ಇರುವುದಕ್ಕೆ ಓಂ ಪ್ರಕಾಶ್ ರಾವ್ ಅವರು ನೀಡುವ ಕಾರಣವೇನೆಂದರೆ ನನ್ನ ಮಗಳನ್ನು ನಾನು ಗ್ಲಾಮರಸ್ ಆಗಿ ತೋರಿಸಲು ಸಾಧ್ಯವಿಲ್ಲಾ ಏಕೆಂದರೆ ಆಕೆಯ ಮುಖ ನಟನೆಗೆ ತುಂಬಾ ಸೂಕ್ತವಾಗಿದೆ, ಆದ್ದರಿಂದ ನಟನೆಗೆ ಹೆಚ್ಚು ಒತ್ತನ್ನು ನೀಡಲಾಗುತ್ತದೆ ಆದ್ದರಿಂದ ಆಕೆ ಸಿನೆಮಾಗಳಲ್ಲಿ ಯಶಸ್ಸುನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಹೇಳಿದರು. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *