ನನ್ನ ಮಗಳ ಮದುವೆ ಮಾಡುವುದಕ್ಕೂ ನನ್ನ ಬಳಿ ಹಣ ಇರಲಿಲ್ಲ ಅಂತ ಕಷ್ಟದ ದಿನವನ್ನು ನೆನೆದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ರವಿಚಂದ್ರನ್.! ಆವಾಗ ಕೈತುಂಬಾ ದುಡ್ಡು ಚಿನ್ನ ಕೊಟ್ಟ ವ್ಯಕ್ತಿಯನ್ನು ನೆನೆದ ರವಿಚಂದ್ರನ್ ಯಾರೂ ಗೊತ್ತಾ ಆ ವ್ಯಕ್ತಿ ನೋಡಿ!!

ಸುದ್ದಿ

ಸ್ಯಾಂಡಲ್ವುಡ್ ನ ನಟ, ನಿರ್ದೇಶಕ ಅಂಡ್ ನಿರ್ಮಾಪಕರಾಗಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮತ್ತೊಂದು ಬಿಡುಗಡೆಯಾಗಿದೆ ರವಿ ಬೋಪಣ್ಣ’ ಸಿನೆಮಾ ಆಗಸ್ಟ್ 12 ರಂದು ತೆರೆ ಕಂಡು ಈ ಚಿತ್ರಕ್ಕೆ ರವಿಚಂದ್ರನ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ಅಭಿನಯಿಸುತ್ತಿರುವ ಸಿನೆಮಾವಾಗಿದ್ದು, ಸಿನೆಮಾ ಬಿಡುಗಡೆಯಗಿ ಬಾರಿ ಮೆಚ್ಚುಗೆ ಪಾತ್ರವಾಗಿದೆ. ದೃಶ್ಯಂ 2 ಚಿತ್ರದ ಬಳಿಕ ರವಿಚಂದ್ರನ್ ಅವರು ಈ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ರವಿ ಬೋಪಣ್ಣ ಹಾಡಿನ ಜೊತೆಗೆ ಸಿನೆಮಾದ ಫ್ರೀ ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಜಿಟಿ ಮಾಲ್ನಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್, ನವರಸ ನಾಯಕ ಜಗ್ಗೇಶ್, ಡಾಲಿ ಧನಂಜಯ್ ಹಾಗೂ ಶರಣ್ ಆಗಮಿಸಿ ರವಿ ಚಂದ್ರನ್ ಅವರ ರವಿ ಬೋಪಣ್ಣ ಚಿತ್ರಕ್ಕೆ ಶುಭ ಶುಭ ಹಾರೈಸಿದ್ದರು. ಆದರೆ ಇದೇ ವೇಳೆ ಮಗಳು ಮದುವೆಯಲ್ಲಿ ಸಹಾಯ ಮಾಡಿದ ಸ್ನೇಹತರನ್ನು ನೆನಪಿಸಿಕೊಂಡರು.

ಹೌದು, ಫ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮಾತನಾಡಿ, ಸಿನೆಮಾದಲ್ಲಿನ ಹಾಡುಗಳು, ಕ್ಯಾರೆಕ್ಟಾರ್ಸ್, ಸಿನೆಮಾ ಎಡಿಟಿಂಗ್ ಹಾಗೂ ಕಿಚ್ಚ ಸುದೀಪ್ ಪಾತ್ರದ ಬಗ್ಗೆ ಬಿಚ್ಚಿಟ್ಟರು. ಅಷ್ಟೇ ಅಲ್ಲ ಈ ಹಿಂದೆ ತಮ್ಮ ಮಗಳು ಮದ್ವೆ ಮಾಡೋಕೆ ಏನೆಲ್ಲಾ ಕಷ್ಟಪಟ್ಟರು ಎನ್ನುವುದು ಹೇಳಿಕೊಂಡಿದ್ದಾರೆ. ಅದರ ಜೊತೆಗೆ, ಇಲ್ಲೇ ಹೋದ್ರು ಪಟ ಪಟ ಅಂತ ಮಾತಾಡ್ತೀನಿ. ಆದ್ರೆ ಇವತ್ತು ಮಾತಾಡೋಕೆ ಆಗ್ತಿಲ್ಲ. 60 ವರ್ಷ ಮುಗಿದು ಹೋಯಿತು.

ನನ್ನ ಅಪ್ಪ ತುಂಬಾ ನೆನಪಾಗುತ್ತಿದ್ದಾರೆ. ನಾನು ದುಡ್ಡು ಸಂಪಾದನೆ ಮಾಡಿದ್ದೆನೋ ಇಲ್ಲವೋ ಆದರೆ ಹೃದಯ ಸಂಪಾಧನೆ ಮಾಡಿದ್ದೇನೆ. ಯಾವ ರವಿಚಂದ್ರನ್ ನ ಪ್ರೇಮಲೋಕದಿಂದ ನೋಡಿದ್ದಿರೋ ಅಲ್ಲಿಂದ ಇಲ್ಲಿ ತನಕ ಏನೆಲ್ಲಾ ಇದೆಯೋ ಅದೆಲ್ಲ ಈ ಸಿನೆಮಾದಲ್ಲಿದೆ. ನಾನು ಅವತ್ತಿಂದ ಕಾಲರ್ ಅನ್ನ ಇಳಿಸೇ ಇಲ್ಲ. ಈ ಸಿನೆಮಾದಲ್ಲಿ ಗ್ರಾಮರ್ ಇಲ್ಲ ಗ್ಲಾಮಾರ್ ಇದೇ. ಫ್ಯಾಮಿಲಿ ಸಿನೆಮಾ ಇದು. ಈ ಸಿನೆಮಾ ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ ಎಂದಿದ್ದಾರೆ.

ಅದರ ಜೊತೆಗೆ, ನಮ್ಮೊಳಗೇ ಒಬ್ಬ ಕರ್ಮ ಇದ್ದಾನೆ. ಅದು ಯಾವಾಗ್ಲೂ ನಮ್ಮನ್ನ ನೋಡಿ ನಗುತ್ತಾ ಇರ್ತಾನೆ. ಸುದೀಪ್ ಇಲ್ಲೇ ಹೋಗುತ್ತಿದ್ದರು ನಾನು ಕಾಲ್ ಮಾಡಿದ್ರೆ ಕಾರ್ ನಿಲ್ಲಿಸಿಯೇ ಮಾತಾಡೋದು. ನನ್ನ ಸುದೀಪ್ ಮದ್ಯೆ ಜನ್ಮ ಜನ್ಮದ ಸಂಬಂಧ ಇದೆ. ಕರ್ನಾಟಕದಲ್ಲಿ ಯಾರದ್ದಾದ್ರು ಕರೆಂಟ್ ವಾಯ್ಸ್ ಇದೆ ಅಂದ್ರೆ ಅದು ಸುದೀಪ್ ವಾಯ್ಸ್ ಮಾತ್ರ. ಕಿಚ್ಚ ಸುದೀಪ್ ಅವರ ವಾಯ್ಸ್ ನಲ್ಲಿ ಕರೆಂಟ್ ಇದೆ ಅಂದ್ರು. ಈ ಸಿನೆಮಾನ ಮೂರು ಭಾರೀ ಎಡಿಟ್ ಮಾಡಿದ್ದೇನೆ.

ನನ್ನ ಜೊತೆಯಲ್ಲಿದ್ದವನೆ ನನಗೆ ಹುಚ್ಚ ಅಂದ್ರು, ಆ ಹುಚ್ಚುತನವೇ ಈ ಸಿನೆಮಾ ಚನ್ನಾಗಿ ಬರೋದಕ್ಕೆ ಕಾರಣ. ಇಡೀ ಸಿನೆಮಾದಲ್ಲಿ 8 ಹಾಡುಗಳಿವೆ. ಕಾವ್ಯ ಶೆಟ್ಟಿ ಅದ್ಭುತ ನಟಿ 24-30-50 ವರ್ಷದ ಪಾತ್ರ ಮಾಡಿದ್ದಾರೆ. ಇನ್ನು ಸುಮಾರು ವರ್ಷ ನಾನು ಕಳೆದು ಹೋಗಿದ್ದೆ. ಆದ್ರೆ ಈ ಸಿನೆಮಾದಿಂದ ಮತ್ತೆ ಕಲಿತುಕೊಂಡೆ. ಜೀವನ ತುಂಬಾ ಕಷ್ಟದ ಉದಾಹರಣೆ ಹೇಳ್ತಿನಿ.

ನನ್ನ ಮಗಳ ಮದುವೆಯಲ್ಲಿ ಹಣದ ಅವಶ್ಯಕತೆ ಇತ್ತು. ಮನೆಗೆ ಇಬ್ರು ಸ್ನೇಹತರು ಬಂದಿದ್ರು. ಗಿಫ್ಟ್ ಕೊಟ್ಟು ಹೋದ್ರು. ಆ ಗಿಫ್ಟ್ ಓಪನ್ ಮಾಡಿದ್ರೆ ಅದರಲ್ಲಿ ಸಾಕಷ್ಟು ದುಡ್ಡು ಇತ್ತು ಎಂದು ಅಂದಿನ ನೆನಪುಗಳನ್ನು ಮೆಲುಕು ಹಾಕಿದ ರವಿಚಂದ್ರನ್ ಸುದೀಪ್ ಹೆಸರು ಹೇಳಿದ್ರೆ ನನಗೆ ಮೈಯಲ್ಲಿ ರೋಮಾಂಚನ ಆಗುತ್ತೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಈ ವೇಳೆಯಲ್ಲಿ ತನ್ನ ಮಗಳ ಮದುವೆ ಮಾಡಲು ನಿಂತಿದ್ದಾಗ ಹಣದ ಸಮಸ್ಯೆಯೂ ಎದುರಾಗಿತ್ತು ಹೌದು, ರವಿಚಂದ್ರನ್ 2019ರ ಮೇ ತಿಂಗಳಲ್ಲಿ ಪುತ್ರಿ ಗೀತಂಜಲಿ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದರು.

ಮದುವೆಯ ಸಂದರ್ಭದಲ್ಲಿ ಆರ್ಥಿಕವಾಗಿ ಸಹಾಯಕ್ಕೆ ಬಂದ ಮೂವರು ಸ್ನೇಹಿತರನ್ನು ಈ ವೇದಿಕೆಯಲ್ಲಿ ನೆನಪಿಸಿಕೊಂಡಿದ್ದಾರೆ. ಆ ಗಳಿಗೆಯನ್ನು ರವಿಚಂದ್ರನ್ ನೆನಪಿಸಿಕೊಂಡಿದ್ದು, ನನ್ನ ಮಗಳ ಮದುವೆ ಸಮಯದಲ್ಲಿ ಚಿತ್ರರಂಗದ ಹೊರಗಿನ ಸ್ನೇಹಿತರು ಸಹಾಯ ಮಾಡಿದರು. ರಮೇಶ್, ವೆಂಕಟೇಶ್ ಸಾಕಷ್ಟು ಹಣ ನೀಡಿ ನನ್ನ ಬೆಂಬಲಕ್ಕೆ ನಿಂತರು. ಮತ್ತೊಬ್ಬ ಸ್ನೇಹಿತ ಸಜ್ಜನ್ ಅವರು ಚಿನ್ನ ಖರೀದಿಗೆ ಸಹಾಯ ಮಾಡಿದರು. ಎಂದು ಸ್ನೇಹಿತರ ಬಗ್ಗೆ ಹೇಳಿಕೊಂಡಿದ್ದರು.


Leave a Reply

Your email address will not be published. Required fields are marked *