ದಕ್ಷಿಣ ಭಾರತದ ಖ್ಯಾತ ನಟಿ ನಯನತಾರ ಮತ್ತು ವಿಘ್ನಶ್ ಅವರು ಹಲವು ವರ್ಷಗಳ ಕಾಲ ಒಬ್ಬರನೊಬ್ಬರು ಪ್ರೀತಿಸಿ ಇತ್ತೀಚಿಗೆ ಮದುವೆಯನ್ನು ಮಾಡಿಕೊಂಡರು. ನಟಿ ನಯನತಾರ ಮತ್ತು ವಿಘ್ನಶ್ ಈಗ ಇಬ್ಬರು ಗುರುಹಿರಿಯರ ಸಮ್ಮುಖದಲ್ಲಿ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಇವರಿಬ್ಬರ ಅದ್ದೂರಿ ಮದುವೆಯ ಬಗ್ಗೆ ಇಡೀ ಚಿತ್ರರಂಗವೇ ಮಾತಾಡುತ್ತಿದೆ. ಇವರಿಬ್ಬರ ಮದುವೆಗೆ ಕೋಟಿ ಕೋಟಿ ಹಣವನ್ನು ಖರ್ಚು ಮಾಡಿ ನಂತರ ದಂಪತಿಗಳು ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನವನ್ನು ಪಡೆದುಕೊಂಡರು.ಅದಕ್ಕಾಗಿ ಅವರು ಮಾಡಿರುವ ಖರ್ಚಿನ ವೆಚ್ಚ ಕೇಳಿದರೆ ನಿಮಗೆ ಆಶ್ಚರ್ಯ ಆಗುತ್ತೆ.
ಹಾಗಾದ್ರೆ ನಟಿ ನಯನತಾರ ಮತ್ತು ವಿಘ್ನಶ್ ದಂಪತಿಗಳು ತಮ್ಮ ಹನಿಮೂನ್ ಗಾಗಿ ಮಾಡಿರುವ ಖರ್ಚು ಮತ್ತು ಅವರು ಹನಿಮೂನ್ ಗಾಗಿ ಎಲ್ಲಿಗೆ ಹೋಗಿದ್ದಾರೆ ಎಂದು ತಿಳಿಯೋಣ ಬನ್ನಿ. ದಂಪತಿಗಳು ಮದುವೆಯಾದ ಬಳಿಕ ಕೆಲವು ದೇವಸ್ಥಾನಗಳನ್ನು ಸುತ್ತಾಡಿ ಈಗ ಹನಿಮೂನ್ ಗಾಗಿ ಥೈಲ್ಯಾಂಡ್ ಗೆ ಹೋಗಿದ್ದಾರೆ. ಇನ್ನು ಥೈಲ್ಯಾಂಡ್ ನಲ್ಲಿ ಹನಿಮೂನ್ ಮಾಡುತ್ತಿರುವ ಈ ದಂಪತಿಗಳು ಬ್ಯಾಂಕಾಕ್ ನ ಪ್ರತಿಷ್ಠಿತ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ.
ಈ ಹೋಟೆಲ್ ಅತ್ಯಂತ ದುಬಾರಿ ಹೋಟೆಲ್ ಅಗಿದ್ದು ಒಂದು ದಿನ ಈ ಹೋಟೆಲ್ ನಲ್ಲಿ ಉಳಿದುಕೊಳ್ಳಲು ಬರೋಬ್ಬರಿ 2ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಕಟ್ಟಬೇಕು. ಹೌದು ನಯನತಾರ ಹಾಗೂ ವಿಘ್ನಶ್ ದಂಪತಿಗಳು ಬ್ಯಾಂಕಾಕ್ ನ ಪ್ರತಿಷ್ಠಿತ ಸಿಯಾನ್ ಹೋಟೆಲ್ ನಲ್ಲಿ ತಂಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಮೂಲಗಳ ಪ್ರಕಾರ ನಯನತಾರ ಹಾಗೂ ವಿಘ್ನಶ್ ದಂಪತಿಗಳು ತಮ್ಮ ಮೊದಲು ಹನಿಮೂನ್ ಗಾಗಿ ಬರೋಬ್ಬರಿ 5 ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಾಧ್ಯ ಇವರ ಒಂದು ಚಿತ್ರದ ಶೋಟಿಂಗ್ ಕೂಡ ಅಲ್ಲೇ ನಡೆಯುತ್ತಿದ್ದು ಈ ಕಾರಣದಿಂದ ನಯನತಾರ ಹಾಗೂ ವಿಘ್ನಶ್ ಅವರು ಥೈಲ್ಯಾಂಡ್ ಗೆ ಹನಿಮೂನ್ ಗೆ ಬಂದಿದ್ದಾರೆ ಎಂಬ ಕೆಲವು ಮೂಲಗಳು ಹೇಳುತ್ತಿದೆ. ಇನ್ನು ನಿರ್ದೇಶಕ ವಿಘ್ನಶ್ ಮತ್ತು ನಟಿ ನಯನತಾರ ಅವರ ಒಟ್ಟು ಆಸ್ತಿಯ ಮೌಲ್ಯ ಬರೋಬ್ಬರಿ 215 ಕೋಟಿ ರೂಪಾಯಿ ಆಗಿದೆ. ಈ ನವ ದಂಪತಿಗಳು ಥೈಲ್ಯಾಂಡ್ ನಲ್ಲಿ ತಮ್ಮ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಈ ಜೊತೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.