ಕೊಡಗಿನ ಕುವರಿ ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ದೇಶದ ಎಲ್ಲಾ ಸಿನೆಮಾಕ್ಷೇತ್ರದಲ್ಲಿಯೂ ದೊಡ್ಡ ಹೆಸರು ಮಾಡಿರುವ ನಟಿಯಾಗಿದ್ದರೆ. ಅವರ ಮೊದಲನೇ ಚಿತ್ರದ ಮೂಲಕವೇ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡ ಈಕೆ ತೆಲಗು, ತಮಿಳು, ಹಾಗೂ ಹಿಂದಿ ಚಿತ್ರಗಳಲ್ಲಿ ಸಾಕಷ್ಟು ಬ್ಯುಸಿಯಾಗಿರುವ ಇವರ ವೈಯಕ್ತಿಕ ರಿಲೇಷನ್ ಶಿಪ್ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತದೆ.
ಕಿರಿಕ್ ಪಾರ್ಟಿ ಸಿನೆಮಾದ ಬಳಿಕ ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ನಿಶಿತಾರ್ಥ ಅಗಿದ್ದು, ಕೆಲವೇ ದಿನಗಳಲ್ಲಿ ಬ್ರೇಕ್ ಅಪ್ ಕೂಡ ಆಗಿದೆ. ಬಳಿಕ ಟಾಲಿವುಡ್ ನ ಖ್ಯಾತ ನಟ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹಲವು ರೂಮರ್ ಗಳು ಇಂದಿಗೂ ಕೂಡ ಹರಿದಾಡುತ್ತಲೆ ಇದೆ.
ನಟಿ ರಶ್ಮಿಕಾ ಮಂದಣ್ಣ ಸಿನೆಮಾರಂಗಕ್ಕೆ ಎಂಟ್ರಿ ಕೊಟ್ಟು ಬರೋಬ್ಬರಿ ಐದು ವರ್ಷಗಳು ಕಳೆಯುದರರೊಳಗೆ ಅವರು ನಟಿಸಿದ ಎಲ್ಲಾ ಸಿನೆಮಾಗಳು ಹಿಟ್ ಆಗಿರೋದ್ರಿಂದ ಸಿನೆಮಾರಂಗಕ್ಕೆ ಅವರು ಗೋಲ್ಡನ್ ಲೆಗ್ ಆಗಿ ನ್ಯಾಷನಲ್ ಕ್ರಷ್ ಆಗಿದ್ದಾರೆ. ಕನ್ನಡದಲ್ಲಿ ಕಿರಿಕ್ ಪಾರ್ಟಿ ತೆಲುಗಿನಲ್ಲಿ ಚಲೋ ಎಂಬ ಸಿನೆಮಾಗಳ ಮೂಲಕವೇ ಆಕೆ ದೊಡ್ಡ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಅದರಲ್ಲೂ ಆಕೆಗೆ ದೊಡ್ಡ ಬ್ರೇಕ್ ಹೆಸರು ನೀಡಿದ್ದು ಅಲ್ಲು ಅರ್ಜುನ್ ಅವರ ಪುಷ್ಪಾ ಸಿನೆಮಾ ಎಂದರೇ ತಪ್ಪಾಗಲಾರದು.
ಈ ಸಿನೆಮಾದ ಮೂಲಕವೇ ಆಕೆ ಮತ್ತಷ್ಟು ಸಿನೆಮಾಗಳಲ್ಲಿ ನಟಿಸುವ ಅವಕಾಶವನ್ನು ದಕ್ಕಿಸಿಕೊಂಡಿದ್ದಾರೆ. ಇನ್ನು ನಟಿ ರಶ್ಮಿಕಾ ಮಂದಣ್ಣ ಬಗ್ಗೆ ರೂಮರ್ಸ್ ಗಳು ಸಹ ಆಕೆಯ ಸಿನೆಮಾರಂಗದಲ್ಲಿ ಬಿಸಿ ಸುದ್ದಿಯಂತೆ ಹರಿದಾಡುತ್ತಿದೆ. ರಶ್ಮಿಕಾ ಮಂದಣ್ಣ ಮೊದಲನೆಯ ಸಿನೆಮಾದಲ್ಲಿ ನಾಯಕನಾಗಿದ್ದ ರಕ್ಷಿತ್ ಶೆಟ್ಟಿ ಜೊತೆ ಪ್ರೇಮ ಪುರಾಣ ವಾಗಿದ್ದು ಮದುವೆಯವರೆಗೂ ಸಹ ಇವರ ಪಯಣ ಸಗಿತ್ತು.
ನಿಶಿತಾರ್ಥ ನಡೆದ ಬಳಿಕ ಅವರು ರಕ್ಷಿತ್ ಜೊತೆ ಬ್ರೇಕ್ ಅಪ್ ಮಾಡಿಕೊಂಡರು. ಇದಕ್ಕೆ ಮುಖ್ಯ ಕಾರಣ ಆಕೆಗೆ ಟಾಲಿವುಡ್ ನಲ್ಲಿ ನಟಿಸುವ ಅವಕಾಶಗಳು ಬಂದಿದ್ದೆ ಎಂದು ಹೇಳಲಾಗುತ್ತಿದೆ. ತನ್ನ ಸಿನಿ ಕೇರಿಯರ್ ಗಾಗಿ ಆಕೆ ದೊಡ್ಡ ರಿಸ್ಕ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಆಕೆ ತೆಗೆದುಕೊಂಡ ರಿಸ್ಕ್ ಗೆ ಪ್ರತಿಫಲ ಸಹ ಸಿಕ್ಕಿದೆ. ದೇಶದಲ್ಲಿ ದೊಡ್ಡ ಸ್ಟಾರ್ ನಟಿಯಾಗಿ ಹೊರಹೋಮ್ಮಿದ್ದಾರೆ.
ಇನ್ನೂ ನಟಿ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಇವರಿಬ್ಬರು ಪ್ರೀತಿಯಲ್ಲಿ ಮುಳುಗಿದ್ದಾರೆ. ಎಂಬ ಸುದ್ದಿಗಳು ಹರಿದಾಡಿದೆ. ಇದಕ್ಕೆ ಕಾರಣ ಕರಣ್ ಜೋಹರ್ ಶೋ ನಲ್ಲಿ ವಿಜಯ್ ದೇವರಕೊಂಡ ಆಕೆ ನನ್ನ ಡಾರ್ಲಿಂಗ್ ಆಕೆ ನನ್ನ ಬೆಸ್ಟ್ ಫ್ರೆಂಡ್ ಎಂದು ಹೇಳಿದ್ದಾರೆ. ಇದಕ್ಕೆ ನಟಿ ರಶ್ಮಿಕಾ ಮಂದಣ್ಣ ಇತ್ತೀಚಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ಮಾತನಾಡುತ್ತ ಸದ್ಯಕ್ಕೆ ನಾನು ಸಿಂಗಲ್ ಆಗಿದ್ದೇನೆ. ಯಾರೊಂದಿಗೂ ಸಹ ರಿಲೇಷನ್ ಶಿಪ್ ನಲ್ಲಿ ಇಲ್ಲ ಎಂದು ಹೇಳಿದ್ದಾರೆ. ಪುಷ್ಪಾ ಸಿನೆಮಾದ ಬಳಿಕ ರಶ್ಮಿಕಾಗೆ ಬಾಲಿವುಡ್ ನಲ್ಲೂ ಸಹ ಅನೇಕ ಅವಕಾಶಗಳು ದೊರೆತಿದೆ. ಅದರಲ್ಲೂ ಬಾಲಿವುಡ್ ನಲ್ಲಿ ದೊಡ್ಡ ಸ್ಟಾರ್ ಗಳ ಜೊತೆ ಬಣ್ಣ ಹಚ್ಚಿದ್ದಾರೆ.
ಆಕೆ ಬಾಲಿವುಡ್ ನಲ್ಲಿ ನಟಿಸಿದ ಸಿನೆಮಾಗಳು ಬಿಡುಗಡೆಯದಾರೆ ಆಕೆ ನ್ಯಾಷನಲ್ ಸ್ಟಾರ್ ಅಗಲಿದ್ದಾರೆ. ಎಂಬ ಮಾತುಗಳು ಬಲವಾಗಿ ಹೇಳಲಾಗುತ್ತಿದೆ. ಇನ್ನೂ ರಶ್ಮಿಕಾ ಮಂದಣ್ಣ ಅಗಲಿ ಅಥವಾ ವಿಜಯ್ ದೇವರಕೊಂಡ ಅಗಲಿ ತಮ್ಮ ನಡುವೆ ಏನು ಇಲ್ಲ ಎಂದರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವರ್ಗ ಅವರ ಮೇಲಿನ ರೂಮರ್ಸ್ ಗಳ ಬಗ್ಗೆ ಚರ್ಚೆಗಳನ್ನು ನಡೆಸುತ್ತಾಲೇ ಇರುತ್ತಾರೆ. ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.