ನಾಲ್ಕು ಕೈ, ನಾಲ್ಕು ಕಾಲು ಇರುವ ಪುಟ್ಟ ಕಂದಮ್ಮನ ಶಸ್ತ್ರ ಚಿಕಿತ್ಸೆಗೆ ನೆರವಾಗಿ ರಿಯಲ್ ಹೀರೋ ಆದ ನಟ ಸೋನು ಸೂದ್! ಈ ಕೆಲಸಕ್ಕೆ ಇಡೀ ಬಾಲಿವುಡ್ ಮೆಚ್ಚಿ ಕೊಂಡಾಡುತ್ತಿದೆ

ಸುದ್ದಿ

ಒಬ್ಬ ಪ್ರಸಿದ್ದ ನಟ ಕೇವಲ ನಟನಾಗಿ ಸಿನೆಮಾಗಳಿಗೆ ಹೀರೋ ಆದರೆ ಸಾಲದು, ತಮ್ಮ ನಿಜ ಜೀವನದಲ್ಲಿ ಕೂಡ ಹೀರೋ ಆಗಬೇಕೆಗುತ್ತದೆ. ಸಮಾಜದಲ್ಲಿ ಆಗೂ ಹೋಗುದಾರ ಬಗ್ಗೆ ಗಮನ ಕೊಟ್ಟು ತಮ್ಮ ಕೈಲಾದಷ್ಟು ಸಹಾಯ ಮಾಡಿದರೆ ಅವರನ್ನು ನಿಜವಾದ ಹೀರೋ ಅನ್ನುತ್ತಾರೆ. ಅಂಥವರ ಸಾಲಿಗೆ ಬಾಲಿವುಡ್ ನಟ ಸೋನು ಸೂದ್ ಕೂಡ ಒಬ್ಬರು. ಸೋನು ಸೂದ್ ಬಹುಭಾಷಾ ಕಲಾವಿದರಾಗಿ ಗುರುತಿಸಿಕೊಂಡಿರುವ ನಟ, ಇವರು ಬಾಲಿವುಡ್, ಹಿಂದಿ, ತಮಿಳು, ತೆಲುಗು, ಹಾಗೂ ಕನ್ನಡದಲ್ಲಿ ಕೂಡ ಅಭಿನಯಿಸಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

ಇನ್ನು ನಿಮಗೆ ತಿಳಿದಿರುವ ಹಾಗೇ ನಟ ಸೋನು ಸೂದ್ ಸಾಕಷ್ಟದಲ್ಲಿರುವರಿಗೆ ಸಹಾಯ ಮಾಡುದರಲ್ಲಿ ಎತ್ತಿದ ಕೈ. ಕೊರೋನ ಸಮಯದಲ್ಲಿ ಎಷ್ಟೋ ಜನರಿಗೆ ಬಳಿಗೆ ಬೆಳಕಾಗಿದ್ದಾರೆ. ನಿಜ ಇಂದು ನಟ ಸೋನು ಸೂದ್ ಒಂದು ವಿಶೇಷ ಮಗುವಿಗೆ ಶಾಸ್ತ್ರ ಚಿಕಿತ್ಸೆಗೆ ನೆರವಾಗಿ ದೇಶದ್ಯಂತ ಅಭಿಮಾನಿಗಳು ಹಾಡಿ ಹೊಗಳಿದ್ದಾರೆ.

ಚಿತ್ರರಂಗದಲ್ಲಿ ನಟನಾಗಿ, ಖಳನಾಯಕನಾಗಿ, ಪೋಷಕ ಪಾತ್ರಗಳ ಮೂಲಕ ಬಹುಬಷೆಯ ತರೆಯಾಗಿ ಗುರುತಿಸಿಕೊಂಡಿರುವ ಸೋನು ಸೂದ್ ಇಂದಿನ ಜನರ ಪಾಲಿಗೆ ರಿಯಲ್ ಹೀರೋ ಆಗಿ ಫುಲ್ ಫೀಲ್ ಆಗಿದ್ದಾರೆ. ಈ ನಟನನ್ನು ತೆರೆಯ ಮೇಲೆ ನೋಡೋದಕ್ಕೂ, ತೆರೆಯ ಹಿಂದೆ ನೋಡೋದಕ್ಕೂ ತುಂಬಾ ವ್ಯತ್ಯಾಸ ಇದೇ ಯಾಕೆಂದರೆ ಇವರು ಇದುವರೆಗೂ ಅಭಿನಯಿಸಿದ ಎಲ್ಲ ಪಾತ್ರಗಳು ಖಳನಾಯಕನ ಪಾತ್ರ ಹಾಗಾಗಿ ಇವರನ್ನು ಜನರು ತೆರೆಯ ಮೇಲೆ ನೋಡಲು ಇಷ್ಟ ಪಡೋದು ಕಡಿಮೆ. ಆದರೆ ರಿಯಲ್ ಲೈಫ್ ನಲ್ಲಿ ಜನರಿಗೆ ಇವರೇ ದೇವರು ಯಾಕಂದರೆ. ಯಂಥ ಪರಿಸ್ಥಿತಿಯಲ್ಲಿ ಯಾರೇ ಕಷ್ಟ ಅಂತ ಬಂದರು ಬರಿಗೈನಲ್ಲಿ ವಾಪಾಸ್ ಕಳುಹಿಸಿದ್ದೇ ಇಲ್ಲ.

ಕೋವಿಡ್ ಸಮಯದಲ್ಲಿ ಅದೆಷ್ಟೋ ಜನರನ್ನು ಊರಿಂದ ಊರಿಗೆ ಹೋಗುವ ವ್ಯವಸ್ಥೆ, ಊಟ, ಉಪಚಾರ, ಹೀಗೆ ಹಲವು ರೀತಿಯಲ್ಲಿ ಸಹಾಯ ಮಾಡಿದವರು. ಇಂದು ಪುಟ್ಟ ಕಂದಮ್ಮನ ಕಷ್ಟಕ್ಕೆ ನಿಂತ್ತಿದ್ದಾರೆ. ಈ ಮಗುವಿಗೆ ನಾಲ್ಕು ಕೈ, ನಾಲ್ಕು ಕಾಲು, ಇರುವ ಈ ಮಗುವಿನಾ ನೆರವಿಗೆ ಮುಂದಾಗಿದ್ದಾರೆ.

ಬಿಹಾರ್ ಮೂಲದ ಪುಟ್ಟ ಗ್ರಾಮದ ಈ ಹೆಣ್ಣು ಮಗು ಚಾಹುಮುಕಿಯ ದೇಹದಲ್ಲಿ ನಾಲ್ಕು ಕೈ ಮತ್ತು ನಾಲ್ಕು ಕಾಲುಗಳೊಂದಿಗೆ ಜನಿಸಿದ್ದಳು. ಈ ಪುಟ್ಟ ಕಂದಮ್ಮನ ತಂದೆ ತಾಯಿಗೆ ಮಗಳ ಶಾಸ್ತ್ರ ಚಿಕಿತ್ಸೆಗೆ ಬೇಕಾದ ಹಣವನ್ನು ಹೊಂದಿಸಲು ಸಾಧ್ಯವಾಗದ ಸಂದರ್ಭದಲ್ಲಿ, ಈ ಪುಟ್ಟ ಮಗುವಿನ ಚಿಕಿತ್ಸೆಯ ಸಂಪೂರ್ಣ ಖರ್ಚುನ್ನು ನಟ ಸೋನು ಸೂದ್ ಅವರೇ ನೋಡಿಕೊಂಡಿದ್ದು. ಇದೀಗ ಮಗುವಿನ ಶಾಸ್ತ್ರ ಚಿಕಿತ್ಸೆಯ ನಂತರ ಅರೋಗ್ಯ ಸುಧಾರಿಸಿದೆ.

ಆ ಪುಟ್ಟ ಹೆಣ್ಣು ಮಗುವಿನ ಸದ್ಯದ ಸ್ಥಿತಿಯ ಕುರಿತು ನಟ ಸೋನು ಸೂದ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟ ಸೋನು ಸೂದ್ ಅವರ ಈ ಮಹತ್ತರವಾದ ಈ ನಡೆಗೆ ಮೆಚ್ಚುಗೆಯ ಸುರಿಮಳೆ ಬರುತ್ತಿದೆ. ಸಾಕಷ್ಟು ತಾರೆಯರು ಅವರ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೇ ತರಹ ಎಲ್ಲಾ ಚಿತ್ರರಂಗದಲ್ಲಿಯೂ ಇಂತಹ ಒಬ್ಬ ರಿಯಲ್ ಹೀರೋ ಹುಟ್ಟಲಿ. ನಟ ಸೋನು ಸೂದ್ ಅವರಿಗೆ ಇನ್ನಷ್ಟು ಒಳ್ಳೆ ಕೆಲಸ ಮಾಡಲು ಆ ದೇವರು ಅವರಿಗೆ ಅರೋಗ್ಯ, ಆಯುಷ್ಯ, ಸಂಪತ್ತನ್ನು ಕೊಡಲಿ ಎಂದು ಬೇಡೋಣ. ನಟ ಸೋನು ಸೂದ್ ಅವರ ಈ ಕೆಲಸಕ್ಕೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *