ಇಂದು ಸ್ಯಾಂಡಲ್ವುಡ್ ಯುವರಾಜ್ ನಿಖಿಲ್ ಕುಮಾರ್ ಅವರ ಮನೆಯಲ್ಲಿ ಹಬ್ಬದ ವಾತಾವರಣ ನಿಖಿಲ್ ಕುಮಾರ್ ಅವರಿಗೆ ಗಂಡು ಮಗು ಆಗಿರೋದು ಎಲ್ಲರಿಗೂ. ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಾಗೂ ಮಾಜಿ ಪ್ರಧಾನಿ ಶ್ರೀ ದೇವೇಗೌಡ ರ ಮಾರಿ ಮೊಮ್ಮಗ ಆಗಮನ ದಿಂದ ಇಡೀ ಕುಟುಂಬ ಅತ್ಯಂತ ಖುಷಿಯಾಗಿದ್ದರು.
ಕಾರೋನ ವೈರಸ್ ಮೊದಲು ಲಾಕ್ ಡೌನ್ ಏಪ್ರಿಲ್ 17, 2020ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಿಖಿಲ್ ಕುಮಾರ್ ಹಾಗೂ ರೇವತಿ ಇವರಿಬ್ಬರು ಮದುವೆಗೂ ಮುನ್ನ ನಿಖಿಲ್ ಕುಮಾರ್ ಪತ್ನಿ ಜೊತೆ ಹಂಚಿಕೊಳ್ಳುತ್ತಿದ್ದ ಫೋಟೋಗಳು ಬಾರಿ ಮೆಚ್ಚುಗೆ ಪಡೆಯುತ್ತಿತ್ತು. ಹೊಸ ಸೊಸೆಯನ್ನು ಬರ ಮಾಡಿಕೊಂಡ ಹೆಚ್ ಡಿ ಕುಟುಂಬ ಪ್ರತಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದರು.
ಇಂದು ಮತ್ತೆ ನಿಖಿಲ್ ಕುಮಾರ್ ಅವರ ಮನೆಯಲ್ಲಿ ಹಬ್ಬದ ವಾತಾವರಣ ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ನಟ ನಿಖಿಲ್ ಕುಮಾರ್ ಅವರ ಪುತ್ರನಿಗೆ ನಾಮಕರಣ ಶಾಸ್ತ್ರ ನಡೆದಿದೆ. ಬೆಳಿಗ್ಗೆ 10.30 ರಿಂದ 12.20 ಕ್ಕೆ ನಡೆದ ಶುಭ ಲಗ್ನಕ್ಕೆ ಮಗುವಿಗೆ ಕುಟುಂಬಸ್ಥರು ನಾಮಕರಣ ಮಾಡಿದ್ದಾರೆ.
ದೊಡ್ಡ ಗೌಡರ ಕುಟುಂಬವು ಮುದ್ದು ಮೊಮ್ಮಗನಿಗೆ “ಆವ್ಯನ್ ದೇವ್” ಎಂದು ಹೆಸರಿಟ್ಟಿದ್ದಾರೆ. ನಿಖಿಲ್ ಕುಮಾರ್ ಹಾಗೂ ರೇವತಿ ಅವರ ಮುದ್ದು ಮಗನಿಗೆ ಈಗ ಒಂಬತ್ತು ತಿಂಗಳು ತುಂಬಿದೆ. ಈ ಶುಭ ಕಾರ್ಯಕ್ರಮಕ್ಕೆ ಕೇವಲ ಕುಟುಂಬದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ದೇವೇಗೌಡರ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರೆ. ಮಗಾನ ನಾಮಕರಣಕ್ಕೆ ವಿವಿಧ ಹೂಗಳಿಂದ ಸಿಂಗಾರ ಗೊಂಡಿದ್ದು, ಮುದ್ದು ಮಗನನ್ನು ಬೆಳ್ಳಿ ತೊಟ್ಟಿಲಲ್ಲಿ ನಿಖಿಲ್ ಮಗನಿಗೆ ನಾಮಕರಣ ಶಾಸ್ತ್ರ ಮಾಡಿಸಿದ್ದಾರೆ.
ಮುದ್ದು ಮಗನ ಆಗಮನದ ಸಂತಸದಲ್ಲಿ ಈ ನಡುವೆ ತಮ್ಮ ಬಿಡದಿ ತೋಟದಲ್ಲಿ ಹೊಸ ಮನೆಯನ್ನು ಕಟ್ಟಿಸಲು ಪಾಯ ಹಾಕಿದ್ದಾರೆ. ಮನೆ ನಿರ್ಮಾಣದ ಜೊತೆಗೆ ಬೇರೆ ರಾಜ್ಯಗಳ ಹಸುಗಳನ್ನು ಖರೀದಿಸಿದ್ದಾರೆ. ಜುಲೈ ತಿಂಗಳಿನಲ್ಲಿ ಮಾಜಿ ಸಿ ಎಂ ನಿವಾಸಕ್ಕೆ ಅವಧುತ ವಿನಯ್ ಗುರೂಜಿ ಭೇಟಿ ನೀಡಿದಾಗ ನಿಮ್ಮ ಮನೆಗೆ ಗಂಡು ಮಗುವಿನ ಆಗಮನ ಆಗುತ್ತದೆ ಎಂದು ಹೇಳಿದ್ದರು.
ನಿಖಿಲ್ ಗೆ ಒಳ್ಳೇ ಯೋಗ ಬರುತ್ತದೆ ಎಂದು ಆಶೀರ್ವಾದ ಮಾಡಿದ್ದರು. ಅಂದು ವಿನಯ್ ಗುರೂಜಿ ಆಡಿದ ಮಾತು ಇಂದು ಸತ್ಯವಾಗಿದೆ. ನಿಖಿಲ್ ಕುಮಾರ್ ಅಪ್ಪ ನಗಿರುವ ಸುದ್ಧಿ ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರಿದ್ದರು. ನಿಖಿಲ್ ಕುಮಾರ್ ಹಾಗೂ ರೇವತಿ ಅವರ ಮುದ್ದು ಮಗನ ಹೆಸರು ಹೇಗಿದೆ ಎಂದು ನಿಮ್ಮ ಕಾಮೆಂಟ್ ಮೂಲಕ ತಿಳಿಸಿ