ನಿಜವಾದ ಪ್ರೀತಿಯನ್ನು ಹುಡುಕುವವರು ಈ ವಿಚಾರಗಳನ್ನು ತಪ್ಪದೇ ಅರಿತುಕೊಳ್ಳಬೇಕು; ಸ್ವತಹ ಆಚಾರ್ಯ ಚಾಣಕ್ಯ ಹೇಳಿರುವ ಮಾತುಗಳು ಇವು..!?

information

ಆಚಾರ್ಯ ಚಾಣಕ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅವರು ಬರೆದಿರುವಂತಹ ಗ್ರಂಥಗಳ ಮೂಲಕ ಇಂದು ಹಲವಾರು ಜನ ಯಶಸ್ವಿಯಾದವರು ಕೂಡ ನಮ್ಮೆದುರಿಗೆ ಇದ್ದಾರೆ. ಅವರ ಪ್ರತಿಯೊಂದು ಯೋಜನೆಗಳು ಹಾಗೂ ದೂರ ಆಲೋಚನೆಗಳು ಇಂದಿಗೂ ಕೂಡ ಪ್ರಸ್ತುತ ಎಂದು ಅನಿಸುತ್ತದೆ. ಅದಕ್ಕಾಗಿ ನಮ್ಮ ಭಾರತದ ಇತಿಹಾಸದಲ್ಲಿ ಚಾಣಕ್ಯ ರಿಗೆ ಮೇದಾವಿ ಪಟ್ಟವನ್ನು ನೀಡಲಾಗಿದೆ. ಅವರು ತಮ್ಮ ಗ್ರಂಥಗಳ ಮೂಲಕ ಜೀವನದಲ್ಲಿ ಯಶಸ್ವಿಯಾಗಲು ಹಾಗೂ ಹಲವಾರು ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎನ್ನುವ ಕುರಿತಂತೆ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ.
ನಿಜವಾದ ಪ್ರೀತಿಯನ್ನು ಹುಡುಕುವವರು ಈ ವಿಚಾರ ಅವುಗಳಲ್ಲಿ ಇಂದು ನಾವು ಕೆಲವೊಂದು ವಿಚಾರಗಳನ್ನು ನೋಡಲು ಹೊರಟಿದ್ದೇವೆ. ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ ಮದುವೆ ಎನ್ನುವುದು ಸರ್ವೇಸಾಮಾನ್ಯವಾಗಿ ನಡೆಯಬೇಕಾಗಿರುವಂತಹ ಪ್ರಕ್ರಿಯೆ. ಆದರೆ ಪ್ರೀತಿ ಮಾಡುವಾಗ ನಾವು ಯಾರನ್ನು ಪ್ರೀತಿ ಮಾಡುತ್ತೇವೆ ಎನ್ನುವುದರ ಕುರಿತಂತೆ ನಮಗೆ ಸಂಪೂರ್ಣವಾದ ಜ್ಞಾನ ಹಾಗೂ ತಿಳುವಳಿಕೆ ಖಂಡಿತವಾಗಿ ಇರಬೇಕೆಂದು ಚಾಣಕ್ಯರು ತಮ್ಮ ಗ್ರಂಥದಲ್ಲಿ ಹೇಳುತ್ತಾರೆ. ಹಾಗಿದ್ದರೆ ನಿಜವಾದ ಪ್ರೀತಿ ಎಂದರೆ ಏನು ಪ್ರೀತಿಯಲ್ಲಿ ಯಾವೆಲ್ಲ ವಿಚಾರ ಪ್ರಮುಖವಾಗಿರುತ್ತದೆ ಎಂಬುದನ್ನು ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.
ಮೊದಲ ನೋಟದಲ್ಲೇ ಪ್ರೀತಿ ಆಗುತ್ತದೆ ಎಂಬುದಾಗಿ ಇಂದಿನ ಜಮಾನದಲ್ಲಿ ಎಲ್ಲರೂ ಹೇಳುತ್ತಾರೆ‌. ಚಾಣಕ್ಯನ ಪ್ರಕಾರ ಇದೆಲ್ಲಾ ಕೇವಲ ಬಾಯಿಮಾತಿನಲ್ಲಿ ಹೇಳಲಷ್ಟೇ ಚಂದ ಇದು ದೈಹಿಕ ಆಕರ್ಷಣೆಯಿಂದ ಆಗುವಂತಹ ಪ್ರೀತಿ ಎಂಬುದಾಗಿ ಅವರು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸುತ್ತಾರೆ. ಹಾಗಂತ ಆಕರ್ಷಕವಾಗಿರುವ ಹುಡುಗಿಯರು ಎಲ್ಲರೂ ಕೂಡ ಕೆಟ್ಟವರಲ್ಲ. ಆದರೆ ಬಹುತೇಕ ಚೆನ್ನಾಗಿ ಕಾಣಿಸುವ ಹುಡುಗಿಯರೇ ಮನಸ್ಸಿನಿಂದ ಕೆಟ್ಟವರಾಗಿ ಇರುತ್ತಾರೆ. ಯಾಕೆಂದರೆ ಅಂದವಾಗಿರುವ ಹುಡುಗಿಯರಿಗೆ ಮೋಸ ಮಾಡಲು ಹಲವಾರು ದಾರಿಗಳು ಹಾಗೂ ಅವಕಾಶಗಳು ದೊರೆಯುತ್ತವೆ ಇದನ್ನು ಊಹಿಸುವಲ್ಲಿ ಹುಡುಗರು ವಿಫಲರಾಗುತ್ತಾರೆ.
ಅಷ್ಟೆಲ್ಲ ಯಾಕೆ ಇಂತಹ ಪ್ರೀತಿಯ ವಿಚಾರದಲ್ಲಿ ದೇವರೇ ಕೂಡ ಮೋಸ ಹೋಗಿದ್ದಾರೆ ಇನ್ನು ಹುಲುಮಾನವರ ಆಗಿರುವ ನಾವೆಲ್ಲ ಎಂದು ಅಂದುಕೊಳ್ಳಬಹುದಾಗಿದೆ. ಒಂದು ವೇಳೆ ರೂಪದಲ್ಲಿ ಕೂಡ ಸೌಂದರ್ಯವತಿ ಆಗಿದ್ದು ಗುಣದಲ್ಲಿ ಕೂಡ ಗುಣವತಿ ಆಗಿದ್ದರೆ ಖಂಡಿತವಾಗಿ ಭೂಮಿಯ ಮೇಲೆ ಸ್ವರ್ಗ ಸಿಕ್ಕಂತಾಗುತ್ತದೆ. ಆದರೆ ಇಷ್ಟೆಲ್ಲ ಸರ್ವಗುಣ ಸಂಪನ್ನೆ ಆಗಿರುವ ಹುಡುಗಿ ಸಿಗುವುದು ನಿಜಕ್ಕೂ ಕೂಡ ಕಷ್ಟಸಾಧ್ಯದ ಕೆಲಸವೇ ಸರಿ.
ಆಚಾರ್ಯ ಚಾಣಕ್ಯ ಗ್ರಂಥದ ಉಲ್ಲೇಖ ದಲ್ಲಿರುವ ಪ್ರಕಾರ ಹುಡುಗಿ ಬುದ್ಧಿವಂತೆ ಆಗಿರುವುದು ಪ್ರಮುಖವಾಗಿರುತ್ತದೆ. ಒಂದು ವೇಳೆ ಮದುವೆಯಾದ ಮೇಲೆ ಹುಡುಗಿ ಸಂಸಾರವನ್ನು ನಡೆಸಿಕೊಂಡು ಹೋಗುವುದು ತನ್ನ ಸೌಂದರ್ಯದಿಂದ ಬದಲಾಗಿ ತನ್ನ ಬುದ್ಧಿಶಕ್ತಿಯಿಂದ. ಸೌಂದರ್ಯ ಇದು ಬುದ್ಧಿ ಇಲ್ಲ ಎಂದರೆ ಆ ಹುಡುಗಿ ಸಂಸಾರ ನಡೆಸಲು ಯೋಗ್ಯಳಲ್ಲ. ಇನ್ನು ಹುಡುಗಿಯರ ಕೆಟ್ಟ ಗುಣ ಹಾಗೂ ಮೋಸ ಮಾಡುವ ಪ್ರವೃತ್ತಿ ಪ್ರಾರಂಭವಾಗುವುದೇ ಕೆಲವೊಮ್ಮೆ ಹುಡುಗರು-ಹುಡುಗಿಯರು ಕುರಿತಂತೆ ಅವರ ಕೆಟ್ಟ ಭಾವನೆಗಳ ಕುರಿತಂತೆ ಬಹಿರಂಗವಾಗಿ ಹೇಳಿದಾಗ. ಇದರಿಂದಾಗಿ ಅವರ ಮನಸ್ಸಿನಲ್ಲಿ ಇಂತಹ ಭಾವನೆಗಳು ಉದ್ಭವವಾಗಲು ಆರಂಭವಾಗುತ್ತದೆ.
ನಾವು ಈಗ ಬದುಕುತ್ತಿರುವುದು ಮಾಡರ್ನ್ ಯುಗದಲ್ಲಿ. ಇಲ್ಲಿ ಪ್ರಾಮಾಣಿಕ ಪ್ರೀತಿ ಸಿಗುವುದೇ ವಿರಳಾತಿವಿರಳ ಎಂದು ನಿಸ್ಸಂಶಯವಾಗಿ ಹೇಳಬಹುದಾಗಿದೆ. ಈ ಕಲಿಯುಗದಲ್ಲಿ ಪ್ರಾಮಾಣಿಕ ಪ್ರೀತಿ ದೊರೆತರೆ ಇನ್ನು ಯಾವುದು ಕೂಡ ಒಬ್ಬ ಮನುಷ್ಯನಿಗೆ ಬೇಕಾಗಿಲ್ಲ ಎಂದು ಹೇಳ ಬಹುದು. ಪ್ರೀತಿಯಲ್ಲಿ ಒಮ್ಮೆ ಎಡವಿದರೆ ಸಾಕು ಅದರ ಕುರಿತಂತೆ ಜೀವನಪೂರ್ತಿ ಬೇಸರದಿಂದ ಚಿಂತಿಸುತ್ತಲೇ ಇರುತ್ತೇವೆ. ಹೀಗಾಗಿ ಪ್ರೀತಿಯನ್ನು ತಿಳಿದುಕೊಂಡು ಮಾಡಬೇಕು.


Leave a Reply

Your email address will not be published. Required fields are marked *