ಈಗಾಗಲೇ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ 2022 ಪ್ರಾರಂಭವಾಗಿ ಹಲವಾರು ದಿನಗಳು ಕಳೆದುಹೋಗಿವೆ. ದಿನದಿಂದ ದಿನಕ್ಕೆ ಪ್ರತಿಯೊಂದು ಪಂದ್ಯಗಳು ಕೂಡ ರೋಚಕತೆಯನ್ನು ಹೆಚ್ಚಿಸುತ್ತಿವೆ. ಈ ಬಾರಿ ಬಹುತೇಕ ಎಲ್ಲಾ ತಂಡಗಳು ಕೂಡ ಸಮಾನ ಬಲಿಷ್ಠವಾಗಿವೆ. ಹೀಗಾಗಿ ಈ ಬಾರಿ ಟ್ರೋಫಿಯನ್ನು ಯಾರು ಗೆಲ್ಲಬಹುದು ಎನ್ನುವುದರ ಕುರಿತಂತೆ ಗೊಂದಲಗಳು ಏರ್ಪಟ್ಟಿದೆ.
ಇನ್ನು ಈ ಬಾರಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಬ್ಯಾಕ್ ಟು ಬ್ಯಾಕ್ ಗೆಲುವನ್ನು ಸಾಧಿಸಿದೆ. ಈ ಮೂಲಕ ಈ ಬಾರಿಯ ಐಪಿಎಲ್ 2022 ರ ಕಪ್ ಗೆಲ್ಲುವ ಫೆವರೇಟ್ ತಂಡಗಳಲ್ಲಿ ತನ್ನ ಹೆಸರನ್ನು ದಾಖಲಿಸಿದೆ. ಅದರಲ್ಲೂ ನಿನ್ನೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅಮೋಘ ವಾದಂತಹ ಪ್ರದರ್ಶನವನ್ನು ನೀಡಿದೆ. ಹೌದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಮಹೇಂದ್ರ ಅಗರ್ವಾಲ್ ನಾಯಕತ್ವದ ಪಂಜಾಬ್ ತಂಡ ಕೇವಲ 138 ರನ್ನುಗಳಿಗೆ ಆಲೌಟ್ ಆಗಿತ್ತು. ಸುಲಭವಾದ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅಂದ್ರೆ ರಸೆಲ್ ರವರ 8 ಭರ್ಜರಿ ಸಿಕ್ಸರ್ ಗಳ ನೆರವಿನಿಂದಾಗಿ 11 ಸುಲಭವಾಗಿ ಗೆದ್ದುಕೊಂಡಿದೆ.
ಇನ್ನು ಪ್ರತಿ ಬಾರಿ ಕೂಡ ನಿಮಗೆಲ್ಲ ಗೊತ್ತಿರುವಂತೆ ಐಪಿಎಲ್ ನಲ್ಲಿ ಕ್ಯಾಮೆರಾಮ್ಯಾನ್ ಸುಂದರ ಹುಡುಗಿಯರ ಕಡೆಗೆ ಕ್ಯಾಮರಾವನ್ನು ಕ್ಲಿಕ್ಕಿಸಿ ರಾತ್ರೋರಾತ್ರಿ ಸುದ್ದಿ ಆಗುವಂತೆ ಮಾಡುತ್ತಾರೆ. ಆದರೆ ಈ ಬಾರಿ ಕೂಡ ಇದೇ ಘಟನೆ ನಡೆದಿದೆ ಆದರೆ ಕ್ಯಾಮೆರಾ ಕಣ್ಣಿಗೆ ಸರಿಯಾಗಿರುವುದು ಯಾರೋ ಹೊಸ ಹುಡುಗಿ ಅಲ್ಲ ಬದಲಾಗಿ ಬಾಲಿವುಡ್ ಚಿತ್ರರಂಗದ ಕಿಂಗ್ ಖಾನ್ ಎಂದು ಖ್ಯಾತರಾಗಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಓನರ್ ಶಾರುಖ್ ಖಾನ್ ಅವರ ಮಗಳು. ಹೌದು ಐಪಿಎಲ್ ಕ್ಯಾಮೆರಾಮ್ಯಾನ್ ಕಣ್ಣಿಗೆ ಬಿದ್ದಿರುವ ಶಾರುಖ್ ಖಾನ್ ಮಗಳು ಈಗ ರಾತ್ರೋರಾತ್ರಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದಾರೆ.
ಹೌದು ಕೋಲ್ಕತ್ತಾ ಹಾಗೂ ಪಂಜಾಬ್ ಬಂದಿದ್ದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ ಸುಹಾನ ಕಾಂ ರವರ ಫೋಟೋ ಹಾಗೂ ವಿಡಿಯೋ ತುಣುಕುಗಳು. ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವ ಸುಹಾನಾ ಖಾನ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿದ್ದಾರೆ. ತಮ್ಮ ತಂದೆಯ ತಂಡಕ್ಕೆ ಸಪೋರ್ಟ್ ಮಾಡಲು ತಮ್ಮ ಸಹೋದರ ಹಾಗೂ ಗೆಳತಿಯೊಂದಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡು ಎಲ್ಲಾ ಪಡ್ಡೆಹೈಕಳ ನಿದ್ದೆಯನ್ನು ಕೆಡಿಸಿದ್ದಾರೆ ಎಂದು ಹೇಳಬಹುದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ನೋಡಿದರೂ ಕೂಡ ಈಗ ಸುಹಾನ ಖಾನ್ ರವರದ್ದೇ ಫೋಟೋ.
ನಿನ್ನೆಯವರೆಗೆ ಸುಹಾನ ಖಾನ್ ರವರನ್ನು ಯಾರು ಕೂಡ ಸರಿಯಾಗಿ ಬಲ್ಲವರಿರಲಿಲ್ಲ. ಆದರೆ ಪಂಜಾಬ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಣ ಪಂದ್ಯಾಟದಲ್ಲಿ ಅವರು ಕ್ಯಾಮೆರಾಗಳಿಗೆ ಕಾಣಿಸಿಕೊಂಡು ಈಗ ದೇಶದಾದ್ಯಂತ ಸುದ್ದಿ ಆಗುತ್ತಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.