ನಾವು ಇತ್ತೀಚಿನ ದಿನಗಳಲ್ಲಿ ಏನೇ ಕಾಯಿಲೆ ಬಂದರೂ ಕೂಡ ಅದರ ಪರಿಹಾರಕ್ಕಾಗಿ ವೈದ್ಯರ ಬಳಿ
ಓಡಾಡುತ್ತೇವೆ. ಆದರೆ ಅದಕ್ಕೆ ನಮ್ಮ ಬಳಿ ಪರಿಹಾರ ಇರುತ್ತದೆ ಎನ್ನುವುದನ್ನು ಯಾರೂ ಕೂಡ ನೋಡಿಕೊಳ್ಳಲು ಹೋಗುವುದಿಲ್ಲ. ಆದರೆ ಅವುಗಳಿಗೆಲ್ಲ ಪರಿಹಾರ ಎನ್ನುವುದು ನಮ್ಮ ಸುತ್ತಮುತ್ತಲಿನ ಪರಿಸರದಲ್ಲೇ ಇದೆ ಎನ್ನುವುದನ್ನು ಎಲ್ಲರೂ ಮರೆತಿರುತ್ತಾರೆ. ಹೌದು ನಮ್ಮ ಭಾರತದೇಶ ಪ್ರಾಚೀನಕಾಲದಿಂದಲೂ ಕೂಡ ಪ್ರಾಕೃತಿಕ ಆಯುರ್ವೇದಿಕ್ ಔಷಧಗಳನ್ನು ಬಳಸಿಕೊಂಡು ಬಂದಂತಹ ದೇಶ. ಇದರಿಂದ ಉತ್ತಮ ಫಲಿತಾಂಶವನ್ನು ಕೂಡ ಪಡೆದಿದ್ದಾರೆ.
ಇಂದಿನ ಲೇಖನಿಯಲ್ಲಿ ಕೂಡ ನಾವು ಹೇಳಲು ಹೊರಟಿರುವುದು ಇದೇ ವಿಚಾರದ ಕುರಿತಂತೆ. ಹೌದು ಶ್ವಾಸಕೋಶದ ಎಲ್ಲ ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸಿ ಎಲ್ಲ ಸ್ವಚ್ಛವಾಗಿ ಇರಿಸಲು ಹಿಪ್ಪಲಿ ಕಾಯಿಯ ಬಳಕೆಯನ್ನು ಮಾಡಬಹುದಾಗಿದೆ. ಕೇವಲ ಇಷ್ಟು ಮಾತ್ರವಲ್ಲದೆ ಇದರಲ್ಲಿ ಹಲವಾರು ಪ್ರಯೋಜನಗಳು ಕೂಡ ಇದೆ. ಕ್ಷಯ ರೋಗದ ನಿವಾರಣೆಗಾಗಿ ಕೂಡ ಇದನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಳಸಲಾಗುತ್ತದೆ. ಮೂರ್ಛೆರೋಗದ ಶಮನಕ್ಕಾಗಿಯೂ ಕೂಡ ಹಿಪ್ಪಲಿ ಕಾಯಿಯ ಅಗತ್ಯ ಬೇಕಾದಷ್ಟಿದೆ. ದೇಹದಲ್ಲಿ ಸುಸ್ತು ಜಾಸ್ತಿ ಆಗುತ್ತಿದ್ದರೆ ಶಕ್ತಿ ವರ್ಧನೆಯನ್ನು ಮಾಡಲು ಕೂಡ ಇವು ಅತ್ಯಂತ ಸಹಾಯಕಾರಿಯಾಗಿದೆ. ಪಿತ್ತನಾಳ ಪಿತ್ತಕೋಶ ಗರ್ಭಸ್ರಾವಕ್ಕೆ ಜ್ವರ ಕೆಮ್ಮು ದಮ್ಮು ವಾತ ಹೀಗೆ ಹತ್ತು ಹಲವಾರು ಚಿಕ್ಕ ಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುವ ಬದಲು ಹಿಪ್ಪಲಿ ಕಾಯಿಯನ್ನು ದೈನಂದಿಕ ವಾಗಿ ಸೇವಿಸಿದರೆ ಖಂಡಿತವಾಗಿ ಅತ್ಯುತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ಸಾಬೀತಾಗಿರುವ ಅಂಶವಾಗಿದೆ.
ದೇಹದಲ್ಲಿ ಇರುವಂತಹ ಎಲ್ಲಾ ಬ್ಯಾ’ಕ್ಟೀರಿಯ ಹಾಗೂ ವೈ’ರಸ್ಗಳನ್ನು ನಶಿಸುವಂತೆ ಮಾಡುತ್ತದೆ. 3 ಹಿಪ್ಪಲಿ ಕಾಯಿಯನ್ನು ಚೆನ್ನಾಗಿ ಪುಡಿ ಮಾಡಿ ಹಾಲಿನ ಜೊತೆ ಹಾಕಿಕೊಂಡು ಕುಡಿಯಬೇಕು. ಇದನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಬೇಗನೆ ಕುಡಿಯಬೇಕು. ದಿನಕಳೆದಂತೆ ಪ್ರತಿದಿನ ಹೆಚ್ಚುವರಿ ಮೂರು ಹಿಪ್ಪಲಿ ಕಾಯಿಗಳನ್ನು ಪುಡಿಮಾಡಿ ಅವುಗಳೊಂದಿಗೆ ಸೇರಿಸಿಕೊಳ್ಳಬೇಕು. ಹೀಗೆ ಮಾಡುತ್ತಾ ಬರೋಬ್ಬರಿ ಹತ್ತು ದಿನಗಳ ಕಾಲ ದೈನಂದಿನ ವಾಗಿ ಒಂದು ದಿನ ಬಿಡದೆ ಚಾಚುತಪ್ಪದೆ ಕುಡಿಯಬೇಕು. ಖಂಡಿತವಾಗಿ ಇದೊಂದು ಆರೋಗ್ಯಕರ ಜೀವನದತ್ತ ಒಂದು ಉತ್ತಮ ಹೆಜ್ಜೆ ಎಂದು ಹೇಳಬಹುದಾಗಿದೆ.
ಹತ್ತು ದಿನಗಳ ನಂತರ ಹೀಗೆ ದಿನದಿಂದ ದಿನಕ್ಕೆ ಮೂರು ಹಿಪ್ಪಲಿ ಕಾಯಿಗಳನ್ನು ಹೆಚ್ಚಿಗೆ ಕುಡಿಯುತ್ತ ಹೋದನಂತರ ಮತ್ತೆ ದಿನದಿಂದ ದಿನಕ್ಕೆ ಮೂರು ಹಿಪ್ಪಲಿ ಕಾಯಿಗಳನ್ನು ಕಡಿಮೆ ಮಾಡುತ್ತ ಕುಡಿಯಬೇಕು. ಕೊನೆಗೆ ದಿನಕ್ಕೆ ಮೂರು ಹಿಪ್ಪಲಿ ಕಾಯಿಗಳನ್ನು ಪುಡಿಮಾಡಿ ಕುಡಿಯುವ ಮಟ್ಟಿಗೆ ಬರಬೇಕು. ಆಗ ನಿಮ್ಮ ಶ್ವಾಸಕೋಶದಲ್ಲಿ ಇರುವಂತಹ ಎಲ್ಲಾ ಸಮಸ್ಯೆಗಳು ಕೂಡ ದೂರವಾಗಿರುತ್ತದೆ ಮೊದಲು ಯಾವುದೇ ಅನುಮಾನವಿಲ್ಲದೆ ಒಪ್ಪಿಕೊಳ್ಳಬಹುದಾಗಿದೆ. ಹೀಗೆ ಮನೆಯಲ್ಲೇ ಮದ್ದು ಇಡುವಾಗ ಯಾವುದೇ ರೋಗದ ಚಿಂತೆಯ ಕೂಡ ನಮ್ಮ ಮನಸ್ಸಿನಲ್ಲಿ ಬರಬಾರದು.
ಹಿಪ್ಪಲಿ ಕಾಯಿಯಂತಹ ಗಿಡ ಗಳಂತಹ ಆಯುರ್ವೇದಿಕ್ ಗಿಡಗಳನ್ನು ನಿಮ್ಮ ಮನೆಯ ಸುತ್ತಮುತ್ತ ನೆಟ್ಟು ಬೆಳೆಸಬಹುದಾಗಿದೆ. ಖಂಡಿತವಾಗಿ ಇದರಿಂದಾಗಿ ನೀವು ಮಾತ್ರವಲ್ಲದೆ ನಿಮ್ಮ ಸುತ್ತಮುತ್ತ ಜೀವಿಸುವ ಜನರು ಕೂಡ ಇಂತಹ ಸಮಸ್ಯೆಗಳಿಂದ ಮುಕ್ತರಾಗಿ ಬದುಕಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.