ನಮಸ್ತೆ ಪ್ರೀತಿಯ ವೀಕ್ಷಕರೆ ಬಹುಬೇಡಿಕೆಯ ನಿರೂಪಕಿಯಾರಲ್ಲಿ ಕನ್ನಡದ ಅನುಶ್ರೀ ಕೂಡ ಒಬ್ಬರು. ಅನುಶ್ರೀ ಅವರು ಮೊದಲ ಬಾರಿ ನಿರೂಪಣೆ ಮಾಡಿದಾಗ ಪಡೆದಿರುವ ದಿನದ ಸಂಭಾವನೆ ಒಂದು ಎಪ್ಪಿಸೋಡ್ ಗೆ 250ರೂಪಾಯಿ ಗಿಂತ ಕಡಿಮೆ ವೇತನವಿದ್ದರೂ ಸಹ ಅದಕ್ಕೆ ಹೋಗಲು ನಿರ್ಧರಿಸಿದರು. ಆದರೆ ಇಂದಿನ ಸಂಭಾವನೆ ಹೋಲಿಸಿದರೆ ಒಂದು ಸಾವಿರದಷ್ಟು ಪಟ್ಟು ಹೆಚ್ಚಾಗಿದೆ. ಹಾಗಾದರೆ ಅನುಶ್ರೀ ಅವರು ಇಂದು ಒಂದು ಎಪ್ಪಿಸೋಡ್ ಗೆ ಎಷ್ಟು ಸಂಭಾವನೆಯನ್ನೂ ಪಡೆಯುತ್ತಾರೆ ನೋಡೋಣ ಬನ್ನಿ.
ಅನುಶ್ರೀ ಅವರು ಕನ್ನಡ ಜನತೆಗೆ ಅತ್ತಿರವಾಗಿದ್ದು ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಶೋ ಮೊದಲ ಆವೃತ್ತಿಲ್ಲಿ ಭಾಗವಹಿಸಿದ್ದರಿಂದ.ಅವರು 12 ವಾರಗಳ ಕಾಲ ನಡೆದರು ಮತ್ತು ಕೊನೆಯ 6ನೇ ಸ್ಥಾನದಲ್ಲಿದ್ದರು. ನಂತರ ಕಿರುತೆರೆಯ ಅನೇಕ ಕಾರ್ಯಕ್ರಮಗಳನ್ನು ಮತ್ತು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿರುವ ಅನುಶ್ರೀ ಮೂಲತಃ ಮಂಗಳೂರಿನವರು. ಅಲ್ಲಿಯ ಸ್ಥಳೀಯ ಚಾನೆಲ್ ನಮ್ಮ ಟಿವಿ ಚಾನೆಲ್ ಮೂಲಕ ಅಂತ್ಯಾಕ್ಷರಿ ಮ್ಯೂಸಿಕ್ ಶೋ ಮೂಲಕ ಟಿವಿ ಜರ್ನಿ ಶುರು ಮಾಡಿದರು.
ಜನಪ್ರಿಯ ಕನ್ನಡ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಸಹೋದರ ಶಿವಶರಣ್ ಶೆಟ್ಟಿ ಅವರ ಮಾಲಿಕತ್ವದ ನಮ್ಮ ಟಿವಿ ಚಾನೆಲ್ ಆಂಕರ್ ಆಗಿ ಪಿಯುಸಿ ಮುಗಿಸಿದ ಕೂಡಲೇ ಅವರು ತಮ್ಮ ವೃತ್ತಿಜೀವನವನ್ನು ಶುರುಮಾಡಿದರು. ಆನಂತರ ಒಂದೊಂದೇ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಾ ಬಂದರು. ಈಟಿವಿಯಲ್ಲಿ ‘ಡಿಮ್ಯಾಂಡಪ್ಪೋ ಡಿಮ್ಯಾಂಡೊ’ ಕಾರ್ಯಕ್ರಮ ಇವರಿಗೆ ಸಾಕಷ್ಟು ಫೇಮಸ್ ಆದರೂ.
ನಂತರ ಅವರು ಇಟಿವಿ ಕನ್ನಡ, ಕಸ್ತೂರಿ, ಜೀ ಕನ್ನಡ, ಸುವರ್ಣ ಟಿವಿ, ಮುಂತಾದ ಮುಖ್ಯವಾಹಿನಿಯ ಕನ್ನಡ ವಾಹಿನಿಗಳಲ್ಲಿ ಕಾಣಿಸಿಕೊಂಡರು. ಸರಿಗಮಪ, ಡಾನ್ಸ್ ಕರ್ನಾಟಕ ಡಾನ್ಸ್, ಕುಣಿಯೋನು ಬಾರ, ಕಾಮಿಡಿ ಕಿಲಾಡಿಗಳು ಹೀಗೆ ಅನೇಕ ರಿಯಾಲಿಟಿ ಶೋಗಳನ್ನು ಅನುಶ್ರೀ ನಿರೂಪಣೆ ಮಾಡಿದ್ದಾರೆ. ಇದರ ಜೊತೆಗೆ ಹಲವು ಸಿನೆಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ‘ಬೆಂಕಿ ಪಟ್ಟಣ’ ಇವರ ಅಭಿನಯದ ಮೊದಲ ಚಿತ್ರವಾಗಿದೆ. ಈ ಚಿತ್ರಕ್ಕೆ ಬೆಸ್ಟ್ ಡೆಬ್ಯು ಆಕ್ಟರ್ ಎಂಬ ಅವಾರ್ಡ್ ಕೂಡ ಲಬ್ಬಿಸಿದೆ.
ಮುರಳಿ ಮೀಡ್ಸ್ ಮೀರಾ ‘ಸಿನೆಮಾದಲ್ಲೂ ನಟನೆ ಮಾಡಿದ್ದಾರೆ. ಈ ಸಿನೆಮಾಗಾಗಿ ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್ ದೊರಕಿದೆ. ಕನ್ನಡದಲ್ಲಿ ಟಾಕಿಂಗ್ ಟಾಕ್ ಅಕುಲ್ ಬಾಲಾಜಿ ನಂತರ ಅನುಶ್ರೀ ಅವರು ಬಹು ಬೇಡಿಕೆಯ ನೂರುಪಾಕಿಯಾಗಿದ್ದಾರೆ ಸದ್ಯ ಮೂಲಗಳ ಪ್ರಕಾರ ಅನುಶ್ರೀ ಅವರು ಒಂದು ಎಪ್ಪಿಸೋಡ್ ಗೆ ಒಂದು ಲಕ್ಷದ ಇಪ್ಪತ್ತುಸಾವಿರ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ಸಿನೆಮಾಗಳಲ್ಲಿ ನಟಿಸಲು ಒಂದು ದಿನಕ್ಕೆ 2ಲಕ್ಷದಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವ ಮಾಹಿತಿ ಕೂಡ ದೊರಕಿದೆ. ಈ ಮಾಹಿತಿಯ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.