ನಿರೂಪಕಿ ಅನುಶ್ರೀ ಎಷ್ಟೆಲ್ಲ ಕಷ್ಟಪಟ್ಟು ಮೇಲೆ ಬಂದಿದ್ದಾರೆ ಗೊತ್ತಾ; ಒಂದು ಕಾಲದಲ್ಲಿ ಯಾವೆಲ್ಲ ಕೆಲಸ ಮಾಡಿದ್ರು ಗೊತ್ತಾ..!?

ಸುದ್ದಿ

ನಟಿ ಅನುಶ್ರೀ ಅವರ ಮಾತೃಭಾಷೆ ತುಳು ಆಗಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಅವರು ಇಂದು ಟಾಪ್ ಆಂಕರ್ ಆಗಿ ಕಾಣಿಸಿಕೊಂಡಿದ್ದಾರೆ. ನಿಜಕ್ಕೂ ಕೂಡ ಅವರು ಇಂದು ಚಿತ್ರರಂಗದಲ್ಲಿ ಯಶಸ್ವಿಯಾಗಿರುವ ರೀತಿ ಹಲವಾರು ಜನರಿಗೆ ಸ್ಪೂರ್ತಿಯಾದದ್ದು ಎಂದರೆ ತಪ್ಪಾಗಲಾರದು. ಚಿಕ್ಕವಯಸ್ಸಿನಲ್ಲಿಯೇ ಅನುಶ್ರೀ ಅವರನ್ನು ಅವರ ತಂದೆ ಬಿಟ್ಟು ಹೋಗಿರುತ್ತಾರೆ. ಅವರ ತಾಯಿಯೇ ಇಬ್ಬರು ಮಕ್ಕಳನ್ನು ಸಾಕಿರುತ್ತಾರೆ. ಅನುಶ್ರೀ ಅವರಿಗೆ ಅಭಿಜಿತ್ ಎನ್ನುವ ಸಹೋದರ ಕೂಡ ಇದ್ದಾನೆ.

ಮೊದಲಿಗೆ ಆಸ್ಪತ್ರೆಯಲ್ಲಿ ಎಂಟ್ರಿ ಬರೆದುಕೊಳ್ಳುವ ಕೆಲಸವನ್ನು ಮಾಡುತ್ತಿದ್ದರು. ನಂತರ ಮಂಗಳೂರಿನ ಪ್ರಾದೇಶಿಕ ಚಾನೆಲ್ ಆಗಿರುವ ನಮ್ಮ ಟಿವಿಯಲ್ಲಿ ಒಂದು ಕಾರ್ಯಕ್ರಮವನ್ನು ನಡೆಸಿಕೊಡುವ ಮೂಲಕ ಬೆಂಗಳೂರಿನ ಖಾಸಗಿ ವಾಹಿನಿಯ ಗಮನವನ್ನು ಸೆಳೆಯುತ್ತಾರೆ. ನಂತರ ತಮ್ಮ ತಮ್ಮ ಹಾಗೂ ತಾಯಿಯ ಜೀವನವನ್ನು ಸೆಟಲ್ ಮಾಡುವ ವಿಚಾರಕ್ಕಾಗಿ ಬೆಂಗಳೂರಿಗೆ ಹೋಗಿ ವಾಹಿನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ ಆದರೆ ಅಲ್ಲಿಗೆ ಹೋದಾಗ ಗೊತ್ತಾಗುತ್ತದೆ ದಿನಕ್ಕೆ ಕೇವಲ 250 ರೂಪಾಯಿ ಸಂಭಾವನೆ ಎಂದು.

ಕೇವಲ ಇಷ್ಟು ಮಾತ್ರವಲ್ಲದೆ ಅನುಶ್ರೀ ಅವರಿಗೆ ಬೆಂಗಳೂರು ಕನ್ನಡದ ಪರಿಚಯ ಕೂಡ ಇರಲಿಲ್ಲ. ಆಗ ವಾಹಿನಿಯವರು ಮನೆಗೆ ಹೋಗುವಂತೆ ಕೇಳಿದಾಗ ಸರ್ ನನಗೆ ಒಂದು ತಿಂಗಳು ಟೈಮ್ ಕೊಡಿ ನಾನು ಬೆಂಗಳೂರು ಕನ್ನಡವನ್ನು ಕಲಿಯುತ್ತೇನೆ ಎಂಬುದಾಗಿ ಹೇಳಿ ಕಲಿಯುತ್ತಾರೆ. ನಂತರ ಒಂದೊಂದೇ ವಾಹಿನಿಗಳಲ್ಲಿ ಕೆಲಸ ಮಾಡಲು ಪ್ರಾರಂಭ ಮಾಡುತ್ತಾರೆ. ಈಟಿವಿ ಕನ್ನಡದಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡೋ ನಂತರ ಕಸ್ತೂರಿ ವಾಹಿನಿಯಲ್ಲಿ ಕೂಡ ರಿಯಾಲಿಟಿ ಶೋಗಳಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳುತ್ತಾರೆ. ನಂತರ ಕನ್ನಡ ಕಿರುತೆರೆ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿಶೋ ಆಗಿರುವ ಬಿಗ್ ಬಾಸ್ ನಲ್ಲಿ ಕೂಡ ಹಲವಾರು ದಿನಗಳ ಕಾಲ ಕಂಟೆಸ್ಟೆಂಟ್ ಆಗಿ ಆಗಿರುತ್ತಾರೆ ಹಾಗೂ ಅಲ್ಲಿಯೂ ಕೂಡ ಜನಪ್ರಿಯತೆ ಪಡೆದುಕೊಳ್ಳುತ್ತಾರೆ.

ಇದಾದ ನಂತರ ಕಸ್ತೂರಿ ವಾಹಿನಿಯಲ್ಲಿ ಚಿನ್ನದ ಬೇಟೆ ಕಾರ್ಯಕ್ರಮ ಮಾಡುತ್ತಾರೆ. ಅನುಶ್ರೀ ಅವರ ನಿರೂಪಣೆಯ ವೃತ್ತಿಯ ಮೊದಲ ಮೈಲಿಗಳು ಪ್ರಾರಂಭವಾಗಿದೆ ಜೀ ಕನ್ನಡ ವಾಹಿನಿ ಸರಿಗಮಪ ಕಾರ್ಯಕ್ರಮದಿಂದ. ಇದಾದನಂತರ ಸಿನಿಮಾದಲ್ಲಿ ಕೂಡ ಅನುಶ್ರೀ ಅವರು ಕಾಣಿಸಿಕೊಳ್ಳುತ್ತಾರೆ. ಇದಾದ ನಂತರ ಹಲವಾರು ಅವಾರ್ಡ್ ಹಾಗೂ ಪ್ರಶಸ್ತಿ ಸನ್ಮಾನಗಳನ್ನು ಕೂಡ ಪಡೆದುಕೊಳ್ಳುತ್ತಾರೆ. ಅತಿ ಚಿಕ್ಕ ವಯಸ್ಸಿನಲ್ಲಿ ಅತ್ಯಂತ ಕಷ್ಟದಿಂದ ಬೆಳೆದು ಬಂದಂತಹ ಅನುಶ್ರೀ ಅವರು ಇಂದು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ತಾಯಿಗಾಗಿ ಮನೆ ಹಾಗು ತಮ್ಮನಿಗಾಗಿ ಒಂದೊಳ್ಳೆ ಜೀವನವನ್ನು ರೂಪಿಸಿಕೊಟ್ಟಿದ್ದಾರೆ. ನಿಜಕ್ಕೂ ನಟಿ ಹಾಗೂ ನಿರೂಪಕಿ ಅನುಶ್ರೀ ಅವರು ನಿಜಕ್ಕೂ ಇಂದಿನ ಯುವಜನತೆಗೆ ಸ್ಪೂರ್ತಿ ಎಂದರೆ ಖಂಡಿತವಾಗಿ ತಪ್ಪಾಗಲಾರದು ಹಾಗೂ ಅದು ಅತಿಶಯೋಕ್ತಿ ಕೂಡ ಅಲ್ಲ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸುವುದನ್ನು ಮಾತ್ರ ಮರೆಯಬೇಡಿ.


Leave a Reply

Your email address will not be published. Required fields are marked *