ಪತ್ನಿ ಜೊತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಆಟೋ ಸವಾರಿ; ವಿಡಿಯೋ ವೈರಲ್..!?

ಸುದ್ದಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಕನ್ನಡ ಚಿತ್ರರಂಗ ಕಂಡಂತಹ ಮಹಾನ್ ನಟರಲ್ಲಿ ಒಬ್ಬರಾಗಿದ್ದರು. ನಟನೆ ನೃತ್ಯ ಸಂಗೀತ ಚಿತ್ರ ನಿರ್ಮಾಣ ಹೀಗೆ ಯಾವುದೇ ವಿಭಾಗದಲ್ಲಿ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಸವ್ಯಸಾಚಿ ಯಂತೆ ಎಲ್ಲಾ ಕಾರ್ಯಗಳಲ್ಲಿ ಕೂಡ ತಮ್ಮ 100% ಪ್ರಯತ್ನವನ್ನು ತೋರ್ಪಡಿಸುತ್ತಿದ್ದರು. ಅವರಿಗೆ ಸಾಟಿ ಯಾರೂ ಇಲ್ಲ ಎನ್ನುವ ಹಾಗೆ ಇದ್ದರು.

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರ ಭಾಷೆಗಳಲ್ಲಿಯೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕುರಿತಂತೆ ಪ್ರೀತಿ ಹಾಗೂ ಗೌರವಗಳನ್ನು ಸ್ಟಾರ್ ನಟರು ತೋರಿಸುತ್ತಿದ್ದರು. ಕನ್ನಡ ಚಿತ್ರರಂಗದಲ್ಲಿ ಕೂಡ ವರನಟನ ಮಗ ಎಂಬ ಕಾರಣಕ್ಕಾಗಿ ಅಲ್ಲ ತನ್ನ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದಿಂದ ಪವರ್ ಸ್ಟಾರ್ ಎನ್ನುವ ಪಟ್ಟವನ್ನು ಪಡೆದುಕೊಂಡವರು ಪುನೀತ್ ರಾಜಕುಮಾರ್. ಅವರು ನಟಿಸುವ ಪ್ರತಿಯೊಂದು ಸಿನಿಮಾಗಳು ಕೂಡ ಸಾಮಾಜಿಕ ಬದಲಾವಣೆಯ ಅಥವಾ ಸಾಮಾಜಿಕ ಕಳಕಳಿಯ ಕುರಿತಂತೆ ಇರುವಂತಹ ಚಿತ್ರ ಗಳಾಗಿರುತ್ತವೆ. ಇನ್ನು ಅಷ್ಟು ದೊಡ್ಡ ಸ್ಟಾರ್ ನಟನ ಮಗನಾಗಿದ್ದರೂ ಹಾಗೂ ಕನ್ನಡ ಚಿತ್ರರಂಗದ ಟಾಪ್ ನಟನಾಗಿದ್ದರೂ ಕೂಡ ಪ್ರತಿಯೊಬ್ಬರೊಂದಿಗೂ ಕೂಡ ಬೇಧಭಾವವಿಲ್ಲದೆ ಸಮಾನವಾಗಿ ಎಲ್ಲರ ಜೊತೆಗೂ ನಗುನಗುತ್ತಲೇ ಮಾತನಾಡುತ್ತಾರೆ. ಅದು ಅವರನ್ನು ಬೇರೆಯಲ್ಲ ನಟರಿಗಿಂತ ವಿಶೇಷವಾಗಿ ಹಾಗು ವಿಭಿನ್ನವಾಗಿ ಕಾಣಿಸುವಂತೆ ಮಾಡುತ್ತದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಳಿ ಅತ್ಯಂತ ದುಬಾರಿ ಕಾರುಗಳಿಂದ ಹಿಡಿದು ಬೈಕುಗಳು ಕೂಡ ಇವೆ. ತಮ್ಮ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರೊಂದಿಗೆ ಹಲವಾರು ಕಾರ್ಯಕ್ರಮಗಳೊಂದಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಹೋಗಿರುವುದನ್ನು ಕೂಡ ನಾವು ಹಲವಾರು ಬಾರಿ ನೋಡಿದ್ದೇವೆ. ಇಬ್ಬರೂ ಕೂಡ ಮೇಡ್ ಫಾರ್ ಈಚ್ ಅದರ್ ಎನ್ನುವಂತೆ ಅನ್ಯೋನ್ಯವಾಗಿದ್ದರು. ಆದರೆ ಆ ದೇವರಿಗೆ ಇವರಿಬ್ಬರು ಚೆನ್ನಾಗಿರುವುದನ್ನು ನೋಡಲಿಕ್ಕೆ ಆಗಲಿಲ್ಲ ಅನ್ಸುತ್ತೆ. ಅದಕ್ಕೆ ಅಪ್ಪು ಅವರನ್ನು ಬೇಗನೆ ಕರೆದುಕೊಂಡ. ಈಗಲೂ ಕೂಡ ಆಗಾಗ ಪುನೀತ್ ರಾಜಕುಮಾರ್ ಅವರ ಸ್ಮಾರಕ ಹಾಗೂ ಕೆಲವು ಕಾರ್ಯಕ್ರಮಗಳಿಗೆ ಅಶ್ವಿನಿ ಪುನೀತ್ ರಾಜಕುಮಾರ್ ರವರು ಹೋಗುತ್ತಾರೆ ಆದರೆ ಒಬ್ಬರೇ. ನಿಜಕ್ಕೂ ಕೂಡ ಇಂತಹ ದೃಶ್ಯಗಳನ್ನು ನೋಡಿದಾಗ ಕಣ್ಣೀರು ಬರುವುದಂತೂ ಗ್ಯಾರಂಟಿ.

ಇತ್ತೀಚಿನದಿನಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ರವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈ’ರಲ್ ಆಗುತ್ತಿದೆ. ಹೌದು ಗೆಳೆಯರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಜ ಜೀವನದಲ್ಲಿ ಕೂಡ ಫ್ಯಾಮಿಲಿ ಮ್ಯಾನ್. ಚಿತ್ರೀಕರಣದಿಂದ ಬಿಡುವು ಸಿಕ್ಕಾಗಲೆಲ್ಲಾ ಫ್ಯಾಮಿಲಿ ಜೊತೆಗೆ ಆಗಾಗ ಹೊಸ ಹೊಸ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದರು. ಇನ್ನೊಮ್ಮೆ ಮುಂಬೈಗೆ ಹೋಗಿದ್ದಾಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ತಮ್ಮ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಜೊತೆಗೆ ರಿಕ್ಷಾದಲ್ಲಿ ಸವಾರಿ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲರನ್ನೂ ಭಾವುಕರನ್ನಾಗಿ ಮಾಡಿದೆ.


Leave a Reply

Your email address will not be published. Required fields are marked *