ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ಖ್ಯಾತನಾಮ ನಟಿಯರಿದ್ದಾರೆ. ಅವರಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಕೂಡ ತಮ್ಮನ್ನು ತಾವು ಗುರುತಿಸಿಕೊಂಡಿರುವಂತಹ ನಟಿ ಉಮಾಶ್ರೀ ಅವರ ಕುರಿತಂತೆ. ಉಮಾಶ್ರೀಯವರು ಇತ್ತೀಚಿನ ದಿನಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಗಾಗಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಕಲಾವಿದೆ ಎನ್ನುವ ಖ್ಯಾತಿಗೆ ಕೂಡ ಪಾತ್ರರಾಗಿದ್ದಾರೆ.
ಆದರೆ ಕೆಲವೊಂದು ಮೂಲಗಳು ಹೇಳುವ ಪ್ರಕಾರ ಈ ಧಾರವಾಹಿಯ ನಿಜವಾದ ಕಥೆ ಉಮಾಶ್ರೀಯವರ ನಿಜ ಜೀವನವನ್ನು ಆಧರಿಸಿದೆ ಎಂಬುದಾಗಿ ಕೇಳಿಬರುತ್ತಿದೆ. ಉಮಾಶ್ರೀಯವರು ಚಿಕ್ಕ ಮಗುವಿದ್ದಾಗಲೇ ತಂದೆ-ತಾಯಿಯನ್ನು ಕಳೆದುಕೊಳ್ಳುತ್ತಾರೆ. ನಂತರ ಅವರ ದೊಡ್ಡಮ್ಮ ಅವರನ್ನು ಸಾಕಿ ಬೆಳೆಸುತ್ತಾರೆ. ನಂತರ ಕಾಲೇಜಿಗೆ ಹೋದಾಗ ಎಲ್ಲರಂತೆ ಅವರಿಗೆ ಕೂಡ ಒಬ್ಬ ಹುಡುಗನ ಮೇಲೆ ಪ್ರೀತಿ ಆಗುತ್ತದೆ. ಮೊದಲಿಗೆ ದೊಡ್ಡಮ್ಮ ಗದರಿಸಿ ಸುಮ್ಮನಾಗಿಸಿದರು ಕೂಡ ನಂತರ ಊರವರ ಮಾತಿಗೆ ಅಂಜಿ ಅದೇ ಹುಡುಗನೊಂದಿಗೆ ಮದುವೆ ಮಾಡಿಕೊಡುತ್ತಾರೆ. ಮದುವೆಗೂ ಮುನ್ನ ಆತನ ಭಾವನೆ ಸೌಂದರ್ಯಕ್ಕೆ ಮರುಳಾಗಿದ್ದ ಉಮಾಶ್ರೀಯವರಿಗೆ ಮದುವೆ ಆದ ನಂತರ ನಿಜವಾದ ನರ’ಕ ಆರಂಭವಾಗುತ್ತದೆ.
ಆತನ ಮನೆಯವರು ಉಮಾಶ್ರೀಯವರನ್ನು ಕಾಲಕಸದಂತೆ ಕಂಡು ಮನೆಯಲ್ಲಿ ನೌಕರಿಗೆ ಬಂದಿರುವ ಕೆಲಸದಾಕೆಯಂತೆ ಕಂಡಿದ್ದಾರೆ. ಪ್ರತಿದಿನ ಒಂದಲ್ಲ ಒಂದು ಕಷ್ಟವನ್ನು ನೀಡುತ್ತಲೇ ಇರುತ್ತಾರೆ. ನಂತರ ಒಂದು ದಿನ ಉಮಾಶ್ರೀ ಒಂದು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ. ಹೆಣ್ಣುಮಗಳನ್ನು ಹೆತ್ತೆ ಎನ್ನುವ ಕಾರಣಕ್ಕಾಗಿ ಗಂಡ ನಿಂದಿಸಲು ಆರಂಭಿಸುತ್ತಾನೆ. ಇದಾದನಂತರ ಒಂದೊಮ್ಮೆ ದೊಡ್ಡಮ್ಮನ ಮನೆಗೆ ಹೋಗಿ ಬರುವಾಗ ಯಾಕೆ ತಡವಾಗಿ ಬಂದೆಯೆಂದು ಮನೆಯಿಂದ ಹೊರ ಹಾಕುತ್ತಾರೆ. ನಂತರ ಉಮಾಶ್ರೀ ಅವರು ತಮ್ಮ ಸಹೋದರಿಯ ಮನೆ ತುಮಕೂರಿಗೆ ಹೋಗುತ್ತಾರೆ. ಅಲ್ಲಿ ಹೋದ ನಂತರ ತಮ್ಮ ನಟನಾ ವೃತ್ತಿಯನ್ನು ಆರಂಭಿಸುತ್ತಾರೆ. ಮೊದಲಿಗೆ ನಾಟಕಗಳಲ್ಲಿ ನಟಿಸಿ ನಂತರ ಅನುಭವ ಎನ್ನುವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಉಮಾಶ್ರೀಯವರು ಎರಡನೇ ಮಗುವಿಗೆ ಕೂಡ ಜನ ನೀಡುತ್ತಾರೆ. ಆಗಸ್ಟ್ ಅವರು ಮಾಡಿಕೊಂಡಿದ್ದ ಬಾಡಿಗೆ ಮನೆಗೆ ಅವರ ಗಂಡ ಎರಡನೇ ಮದುವೆ ಮಾಡಿಕೊಂಡು ಬಂದು ಅವರನ್ನು ಹೊರಹಾಕುತ್ತಾರೆ.
ತನ್ನ ಇಬ್ಬರು ಮಕ್ಕಳನ್ನು ಕೂಡ ಕರೆದುಕೊಂಡು ಹೋಗುತ್ತಾರೆ. ನಟನೆಯ ಮೂಲಕವೇ ತನ್ನ ಮಕ್ಕಳ ಜೀವನವನ್ನು ರೂಪಿಸಬೇಕು ಎನ್ನುವ ನಿರ್ಧಾರಕ್ಕೆ ಬರುತ್ತಾರೆ. ಇಂದು ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 350 ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಇಂದು ನಿಜಕ್ಕೂ ಕೂಡ ಅವರ ಜೀವನವನ್ನು ಮೇಲ್ಮೈಯಿಂದ ನೋಡಿದರೆ ಒಬ್ಬ ಹೆಣ್ಣುಮಗಳಾಗಿ ಸಮಾಜದಲ್ಲಿ ಯಾವ ರೀತಿ ಸ್ವಾವಲಂಬಿಯಾಗಿ ಇರಬೇಕು ಎನ್ನುವುದನ್ನು ಅವರು ತೋರಿಸುತ್ತಾರೆ.