ಪುನೀತ್ ಗೆ ಲೋಹಿತ್ ಅಂತಾನೇ ಹೆಸರಿಡಬೇಕು ಎಂದು ಅಣ್ಣಾವ್ರು ಹಠ ಹಿಡಿದದ್ದು ಯಾಕೆ ಗೊತ್ತಾ? ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ, ಕನ್ನಡ ಚಿತ್ರರಂಗದ ದೊಡ್ಮನೆಯ ಮಗ ಸಾವಿರಾರು ವಿದ್ಯಾರ್ಥಿಗಳ ದಾರಿದೀಪ ಆಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ನಮ್ಮ ಜೊತೆ ಇಲ್ಲವಾದರೂ ಅವರು ಇಲ್ಲ ಎಂಬುದನ್ನು ಹೇಳಲು ಯಾರಿಂದಲೂ ಸಾಧ್ಯನೇ ಇಲ್ಲ, ಚಿಕ್ಕವಯಸ್ಸಿನಲ್ಲಿಯೇ ಇರಬೇಕಾದರೆ ಪುನೀತ್ ರಾಜ್ ಕುಮಾರ್ ಅವರು ಹೆಚ್ಚು ವರ್ಷಗಳ ಕಾಲ ಆಯುಸ್ಸು ಇಲ್ಲ ಎಂದು ಹೇಳುತ್ತಿದ್ದರು ಎಂಬ ಚರ್ಚ್ ಗಳು ಅವರು ಸತ್ತಾಗ ತುಂಬಾ ಸುದ್ದಿಯಲ್ಲಿತ್ತು. ಈ ಮಾತನ್ನು ಪುನೀತ್ ರಾಜ್ ಕುಮಾರ್ ಅವರು ಆಪ್ತದವರೇ ಹೇಳಿದ್ದಾರೆ ಎಂಬ ಸುದ್ಧಿ.

ನಿಮಗೆ ಗೊತ್ತಾ, ಪುನೀತ್ ರಾಜ್ ಕುಮಾರ್ ಅವರ ಮೊದಲ ಹೆಸರು ಲೋಹಿತ್. ಡಾ. ರಾಜ್ ಕುಮಾರ್ ಅವರಿಗೆ ಮೊದಲಿನಿಂದಲೂ ಲೋಹಿತ್ ಎಂಬ ಹೆಸರಿನ ಮೇಲೆ ತುಂಬಾ ಪ್ರೀತಿ ಇತ್ತು. ಈ ಹಿಂದೆ ರಾಜ್ ಕುಮಾರ್ ಅವರು ಸತ್ಯಹರೀಶ್ಚಂದ್ರ ಚಿತ್ರದಲ್ಲಿ ನಟಿಸುತ್ತಿದ್ದರು ಹಾಗೂ ಆ ಸಿನೆಮಾದಲ್ಲಿನ ಸತ್ಯಹರೀಶ್ಚಂದ್ರ ಮಗನ ಪಾತ್ರವಾದ ಲೋಹಿತಾಶ್ವ ಪಾತ್ರವು ರಾಜ್ ಕುಮಾರ್ ಅವರಿಗೆ ತುಂಬಾ ಇಷ್ಟವಾಗಿತ್ತು.

ಚಿತ್ರ ಬಿಡುಗಡೆಯಾಗಿ ಯಶಸ್ವಿಯಾದ ಮೇಲೆ ಲೋಹಿತಾಶ್ವ ಎಂಬ ಹೆಸರನ್ನು ನಮ್ಮ ಮನೆಯಲ್ಲಿ ಯಾರಿಗಾದರೂ ಇಡಬೇಕು ಎಂದು ರಾಜ್ ಕುಮಾರ್ ಅವರು ಅಂದುಕೊಳ್ಳುತ್ತಾರೆ. ಪುನೀತ್ ರಾಜ್ ಕುಮಾರ್ ಅವರು ಜನಿಸಿದಾಗ ಮೊದಲು ಏನು ಹೆಸರಿಡಬೇಕು ಎಂದು ಪಾರ್ವತಮ್ಮನವರು ಕೇಳಿದಾಗ ರಾಜ್ ಕುಮಾರ್ ಅವರು ಹೇಳಿದ ಮೊದಲ ಹೆಸರೇ ಲೋಹಿತಾಶ್ವ ಎಂಬ ಹೆಸರು ತುಂಬಾ ಓಲ್ಡ್ ಆದ ಕಾರಣ ಲೋಹಿತ್ ಎಂಬ ಹೆಸರನ್ನು ನಾಮಕರಣ ಮಾಡುತ್ತಾರೆ.

ಈ ಸಂದರ್ಭದಲ್ಲಿ ರಾಜ್ ಕುಮಾರ್ ಅವರ ಮನೆಗೆ ಬಂದ ಅವರ ಹತ್ತಿರದವರು ಲೋಹಿತ್ ಎಂಬ ಹೆಸರನ್ನು ಇಟ್ಟರೆ ಮುಂದಿನ ದಿನಗಳಲ್ಲಿ ಸಂಕಟ ಎದುರಾಗುತ್ತದೆ ಹಾಗೂ ಪ್ರಾಣಕ್ಕೂ ಕುತ್ತು ಬರುತ್ತದೆ ಎಂದು ಹೇಳಿದಾಗ ಪುನೀತ್ ಎಂಬ ಹೆಸರನ್ನು ಮನೆಯವರು ಬದಲಾಯಿಸುತ್ತಾರೆ. ರಾಜ್ ಕುಮಾರ್ ಅವರ ಮಗನಾಗಿದ್ದ ಕಾರಣ ಪುನೀತ್ ರಾಜ್ ಕುಮಾರ್ ಎಂಬ ಹೆಸರು ದೇಶ ದೇಲ್ಲೆಡೆ ಪ್ರಖ್ಯಾತಿ ಪಡೆದುಕೊಳ್ಳುತ್ತದೆ.

ಹೌದು ನಿಮಗೆ ಗೊತ್ತಿರುವ ಹಾಗೆ ದೇಶದ ಮೂಲೆ ಮೂಲೆಯಲ್ಲೂ ಅವರು ಅಭಿಮಾನಿಗಳನ್ನು ಹೊಂದಿದ್ದರು. ಎಳೆ ವಯಸ್ಸಿನ ಕಂದಮ್ಮ ನಿಂದ ಹಿಡಿದು ಇಳಿ ವಯಸ್ಸಿನವರಿಗೂ ಕೂಡ ಅಪ್ಪು ಎಂದರೆ ಬಾಲು ಪ್ರೀತಿ. ಪುನೀತ್ ರಾಜ್ ಕುಮಾರ್ ಅವರನ್ನು ಏಕೆ ಎಲ್ಲರು ಇಷ್ಟಪಡುತ್ತಾರೆ ಎಂದರೆ ಅವರು ನಡೆದು ಬಂದ ದಾರಿ, ಸರಳತೆ ಹಾಗೂ ಸೌಹಾರ್ದತೆಯನ್ನು ಇಟ್ಟುಕೊಂಡಿದ್ದ ಕಾರಣ ಪುನೀತ್ ರಾಜ್ ಕುಮಾರ್ ಅವರನ್ನು ಇಂದಿಗೂ ಎಲ್ಲರೂ ಹೃದಯದಲ್ಲಿ ಪೂಜಿಸುತ್ತಿದ್ದಾರೆ ಎಂದರೆ ಖಂಡಿತ ತಪ್ಪಾಗಲಾರದು. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *