ಪುನೀತ್ ಮಗಳ ವಂದಿತಾ ಹುಟ್ಟುಹಬ್ಬಕ್ಕೆ ರಾಘಣ್ಣ ಕೊಟ್ಟ ದುಬಾರಿ ಉಡುಗೊರೆಯನ್ನು ನೋಡಿ ಅಶ್ವಿನಿ ಭಾವುಕ! ಆ ಉಡುಗೊರೆ ಏನು ನೋಡಿ

ಸುದ್ದಿ

ಕರ್ನಾಟಕದಲ್ಲಿ ರಾಜರತ್ನ ಪುನೀತ್ ರಾಜ್ ಕುಮಾರ್ ಇಲ್ಲದೆ ಸರಿ ಸುಮಾರು 6ತಿಂಗಳು ಕಳೆದಿದೆ. ಅಪ್ಪು ಇಲ್ಲದ ನೋವು ಯಾರಿಂದಲೂ ಮರೆಯೋಕ್ಕೆ ಸಾಧ್ಯವಿಲ್ಲ. ಅಪ್ಪು ಕಂಡಂತಹ ಕನುಸು ಬೆಟ್ಟದಷ್ಟು. ಆ ಕನಸುಗಳನ್ನು ಒಂದೊಂದಾಗಿ ನನಸು ಮಾಡುತ್ತ ಇದ್ದರು ಆ ಸಮಯದಲ್ಲೇ ಆಗಬಾರದೆ ಆಗಿ ಹೋಯಿತು ನಿಜಕ್ಕೂ ನೋವಿನ ವಿಷಯ. ಆ ದೇವರು ಸ್ವಲ್ಪ ಕನಿಕರ ತೋರಬೇಕಿತ್ತು. ಅದೆಷ್ಟೋ ಜನರಿಗೆ ಆಶಾಕಿರಣ ಅವಾಗಿರುವ ಅವರು ಅವರನ್ನೇ ದೇವರು ಎಂದು ಪೂಜಿಸುವ ಅದೆಷ್ಟೋ ಜನ ಅವರು ಹೋದ ಮೇಲೆ ಗೊತಾಗಿದ್ದು.
ಆದರೆ ವಿಧಿಯ ಬರಹ ಈಗ ಏನು ಮಾಡಲು ಸಾಧ್ಯವಿಲ್ಲ. ಅಪ್ಪು ಅವರ ಕನಸನ್ನು ಹೊತ್ತು ತಂದ ಪಿ. ಆರ್. ಕೆ ಸಂಸ್ಥೆ ಅಪ್ಪು ಶುರು ಮಾಡಿದರು. ಅಪ್ಪು ಇಲ್ಲವಾದ ಮೇಲೆ ಈಗ ಆ ಎಲ್ಲ ಕನಸುಗಳನ್ನು ನನಸು ಮಾಡುವ ಜವಾಬ್ದಾರಿಯನ್ನು ಪತ್ನಿ ಅಶ್ವಿನಿ ಅವರ ಹೆಗಲ ಮೇಲಿದೆ. ಪತಿಯೂ ಕಂಡ ಕನಸನ್ನು ಒಂದೊಂದಾಗಿ ಮಾಡುತ್ತಾ ಬರುತ್ತಾದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್.

ಪುನೀತ್ ರಾಜ್ ಕುಮಾರ್ ಅವರ ದೊಡ್ಡ ಕನಸಾಗಿದ್ದ ಅವರ ಅಭಿನಯದ ಗಂಧದಗುಡಿ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿದರು ಟೀಸರ್ ಗೆ ಅದ್ಭುತ ರೆಸ್ಪೋನ್ಸ್ ಸಿಕ್ಕಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಜೊತೆಗೆ ಅಪ್ಪು ಅವರ ಹುಟ್ಟುಹಬ್ಬದ ಹಬ್ಬದ ದಂದು ಚೇತನ್ ಕುಮಾರ್ ನಿರ್ದೇಶನದ ಅಪ್ಪು ಅಭಿನಯದ ಜೇಮ್ಸ್ ಚಿತ್ರ ಬಿಡುಗಡೆಯಯಿತು.
ಅಪ್ಪು ಇಲ್ಲದ ನೀವು ಅವರ ಅಭಿಮಾನಿಗಳಲ್ಲಿ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ಅವರ ಕುಟುಂಬದವರಿಗೂ ಕೂಡ ಇದೆ. ಅಪ್ಪು ಪತ್ನಿ ಅಶ್ವಿನಿ ಮಕ್ಕಳಾದ ದೃತಿ ಮತ್ತು ವಂದಿತಾ, ಹಾಗೂ ಅವರ ಅಣ್ಣಂದಿರು ಹಾಗೂ ಕುಟುಂಬದವರು ಯಾರು ಕೂಡ ಪುನೀತ್ ಅವರನ್ನು ನೆನೆಯದೆ ಇರುವ ದಿನ ಇಲ್ಲ. ನಿನ್ನೆ ಅಪ್ಪು ಅವರ ಚಿಕ್ಕ ಮಗಳು ವಂದಿತಾ ಅವರ ಹುಟ್ಟುಹಬ್ಬ, ಅಪ್ಪ ಇಲ್ಲದೆ ಮೊದಲ ಬಾರಿಗೆ ಹುಟ್ಟುಹಬ್ಬ ವನ್ನು ಆಚರಿಸಲು ಆ ಪುಟ್ಟ ಜೀವಕ್ಕೆ ಅದೆಷ್ಟು ನೋವಾಗಿರಬಹುದು ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ.

ಪುನೀತ್ ರಾಜ್ ಕುಮಾರ್ ಇದ್ದಿದರೆ ಮುದ್ದು ಮಗಳ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಸಂಭ್ರಮಣೆಯಿಂದ ಆಚರಿಸುತಿದ್ದರು. ಆದರೆ ಈ ಬಾರಿ ಅಪ್ಪು ಇಲ್ಲ. ಆ ನೋವಿನಲ್ಲಿ ಮನಸ್ಸಿನಲ್ಲಿ ವಂದಿತಾ ಹುಟ್ಟುಹಬ್ಬ ನಡೆದಿದೆ. ರಾಘಣ್ಣ ಅವರು ತಮ್ಮನ ಮಗಳಿಗೆ ವಿಶ್ ಮಾಡಿ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಶೇರ್ ಮಾಡಿಕೊಂಡಿದ್ದಾರೆ ರಾಘಣ್ಣ
ಹುಟ್ಟುಹಬ್ಬ ಶುಭಾಶಯಗಳು ವಂದಿತಾ ಮಗಳೇ.. ಅಪ್ಪ, ತಾತ ಹಾಗೂ ಅಜ್ಜಿಯ ಆಶೀರ್ವಾದ ಸದಾ ನಿನ್ನ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ ರಾಘಣ್ಣ. ಇದರ ಜೊತೆಗೆ ಅಪ್ಪು ಅವರ ಮನೆಯಲ್ಲಿ ಸರಳವಾಗಿ ವಂದಿತಾ ಅವರ ಹುಟ್ಟುಹಬ್ಬವನ್ನು ಆಚರಿಸಿದರು. ರಾಘಣ್ಣ ಅವರು ಅಪ್ಪು ಮಗಳಿಗೆ ಒಂದು ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ಫೋಟೋ ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗಿದ್ದು ವಂದಿತಾ ಈಗ 10ನೇ ತರಗತಿಯಲ್ಲಿ ಓದುತ್ತಿದ್ದಾರೆ. ಅವರ ಅಕ್ಕನ ಹಾಗೇ ಅವಳು ಕೂಡ ಚನ್ನಾಗಿ ಓದಲಿ ಒಳ್ಳೆಯ ವಿದ್ಯಾಭ್ಯಾಸ ಮಾಡಲಿ, ಅಪ್ಪ ಹೇಳಿಕೊಟ್ಟ ಧರಿಯಲ್ಲೇ ಸಾಗಬೇಕು ಹೋಗಬೇಕು ಅಂದರು. ಇನ್ನು ಮಗಳ ಹುಟ್ಟುಹಬ್ಬದ ಆಚರಣೆಯಲ್ಲಿ ಅಪ್ಪು ಅನ್ನು ನೆನೆದು ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಭಾವುಕರಾಗಿದ್ದಾರೆ.
ಮಗಳ ಹುಟ್ಟುಹಬ್ಬ ಹಬ್ಬಕ್ಕೆ ಅಶ್ವಿನಿ ಅವರು ಮಗಳಿಗೆ ಒಂದು ವಜ್ರದ ನೆಕ್ ಲೆಸ್ ಉಡುಗೊರೆಯಾಗಿ ನೀಡಿದ್ದಾರೆ. ಎಷ್ಟಾದರೂ ಅಪ್ಪ ಇಲ್ಲದ ನೋವು ಯಲ್ಲ ಮಕ್ಕಳಿಗೂ ಕಾಡುತ್ತೆ ಆ ನೋವು ಆದಷ್ಟು ಬೇಗ ದೂರವಾಗಲಿ. ಧನ್ಯವಾದಗಳು


Leave a Reply

Your email address will not be published. Required fields are marked *