ಕನ್ನಡಿಗರ ಜನತೆಯ ಮನ ಗೆದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಮತ್ತು ಬಹುನಿರೀಕ್ಷಿತ ಚಿತ್ರ ಜೇಮ್ಸ್ ಮಾರ್ಚ್ 17 ರಂದು ವಿಶ್ವದಾದ್ಯಂತ ಬಿಡುಗಡೆಗೊಂಡಿತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಸಿನಿಮಾ ಎಲ್ಲಾ ಕಡೆ ಭರ್ಜರಿ ಪ್ರದರ್ಶನ ಗೊಂಡಿದೆ. ಮೊದಲ ದಿನ ಸಾವಿರಾರು ಶೋಗಳು ಹೌಸ್ ಫುಲ್ ಆಗಿದೆ. ಅದರ ಪರಿಣಾಮ ಒಳ್ಳೆಯ ಕಲೆಕ್ಷನ್ ಆಗಿದೆ. ಈ ಚಿತ್ರ ಬರೋಬ್ಬರಿ 30 ಕೋಟಿ ಅಧಿಕ ಕಲೆಕ್ಷನ್ ಮಾಡಿದೆ. ಆ ಮೂಲಕ ಕೆಜಿಎಫ್ ಚಾಪ್ಟರ್ 1 ಚಿತ್ರದ ದಾಖಲೆಯನ್ನು ದುಳಿಪಟ ಮಾಡಿದೆ. ಕರ್ನಾಟಕ ಮಾತ್ರ ವಲ್ಲದೆ ಹೊರ ರಾಜ್ಯದಲ್ಲೂ ಕೂಡ ಜೇಮ್ಸ್ ಉತ್ತಮ ಪ್ರದರ್ಶನ ಕಾಣುತ್ತಿದೆ.
ಪುನೀತ್ ರಾಜಕುಮಾರ್ ಅವರ ಕೊನೆ ಚಿತ್ರ ಎಂಬ ಕಾರಣಕ್ಕೆ ಅಭಿಮಾನಿಗಳು ಮುಗಿಬಿದ್ದು ಈ ಚಿತ್ರವನ್ನು ನೋಡಿದ್ದರೆ. ಅಭಿಮಾನಿಗಳಿಗೆ ಪಾಲಿಗೆ ಇದೊಂದು ಎಮೋಷನ್ ಆಗಿದೆ. ಈ ಚಿತ್ರಕ್ಕೆ ಸಿಗುತ್ತಿರುವ ಯಶಸ್ಸುನ್ನು ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಖುಷಿಯನ್ನು ಸವಿಯಲು ಅಪ್ಪು ನಮ್ಮ ಜೊತೆ ಇಲ್ಲ ಎಂಬ ನೀವು ನಮ್ಮನೆಲ್ಲ ಕಾಡುತ್ತಿದೆ.
ಚೇತನ್ ಕುಮಾರ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಅಪ್ಪು ಅವರಿಗೆ ನಾಯಕಿಯಾಗಿ ಪ್ರಿಯಾ ಆನಂದ್ ಅವರು ಜೊತೆಯಾಗಿದ್ದಾರೆ. ಕಿಶೋರ್ ಪತ್ತಿಕೊಂಡ ಅವರು ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಿರ್ಮಾಪಕರಿಗೆ ಜೇಮ್ಸ್ ಚಿತ್ರದಿಂದ ಭರ್ಜರಿ ಲಾಭಗಳಿಗೆ ಮಾಡಿದೆ ಎಂದು ಹೇಳಿದ್ದಾರೆ. ಚಿತ್ರ ಬಿಡುಗಡೆಯಾಗಿ ಯಲ್ಲ ಕಡೆ ಹೌಸ್ ಫುಲ್ ಆಗಿ ಭರ್ಜರಿ ಓಪನ್ನಿಂಗ್ ಪಡೆದುಕೊಂಡಿದೆ. ಅನೇಕ ಮಲ್ಟಿಫ್ಲೆಕ್ಸ್ಗಳಲ್ಲಿ ಯಲ್ಲಾ ಟಿಕೆಟ್ಗಳು ಸೋಲ್ಡ್ ಔಟ್ ಆಗಿತ್ತು ಹಾಗಾಗಿ ಚಿತ್ರಕ್ಕೆ ಉತ್ತಮ ಗಳಿಕೆ ಮಾಡಿದೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಕಡೆ ಸಿನಿಮಾ ಜೇಮ್ಸ್ ಗೆ ಅಭಿಮಾನಿಗಳು ಹರ್ಷೋದ್ದಾರ ಮುಗಿಲು ಮುಟ್ಟಿದೆ. ಅಪ್ಪು ಇಲ್ಲ ಅನ್ನೋ ನೋವಿಗೆ ಅವರ ಚಿತ್ರವನ್ನು ಸೆಲೆಬ್ರೇಷನ್ ಮಾಡಿದ್ದಾರೆ. ಹಲವು ವಿಚಾರದಲ್ಲಿ ಹಲವು ದಾಖಲೆ ಬರೆದಿರುವ ಅಪ್ಪು ಸಿನಿಮಾ ಇದೀಗ ಮತ್ತೊಂದು ದಾಖಲೆ ಬರೆಯಲು ಸಜ್ಜಗಿದೆ. ಸಿನಿಮಾ ಲಿರಿಸ್ ಗೂ ಮುನ್ನ ಯಲ್ಲಾ ಚಿತ್ರ ಮಂದಿರದಲ್ಲಿ ಸೋಲ್ಡ್ ಔಟ್ ಆಗಿತ್ತು. ಬಿದಿಗಡೆಯದ ಮೊದಲ ದಿನದ ಕಲೆಕ್ಷನ್ ಎಲ್ಲರನ್ನು ದಂಗಗಿಸುವಂತೆ ಮಾಡಿದೆ. ಸುಮಾರು 4 ಸಾವಿರಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗಿ ಉತ್ತಮ ಪ್ರದರ್ಶನಗೊಂಡಿತು.
376 ಸಿಂಗಲ್ ಸ್ಕ್ರೀನ್ ಹಾಗೂ 180ಕ್ಕೂ ಹೆಚ್ಚು ಮಲ್ಟಿ ಫ್ಲೆಕ್ಸ್ ನಲ್ಲಿ ಚಿತ್ರ ತೆರೆಕಂಡಿತು. ಬಿಡುಗಡೆಯದ ಮೊದಲ ದಿನವೇ 25 ರಿಂದ 30ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಬಿಡುಗಡೆಗೊಂಡ ಒಂದು ವಾರದಲ್ಲಿ 100 ಕೋಟಿ ದಾಟಿದೆ ಎಂದು ಎಂದು ಗಾಂಧಿನಗರದ ಪಂಡಿತರು ಹೇಳಿದ್ದಾರೆ. ಈಗಾಗಲೇ ಸ್ಯಾಟಲೈಟ್ ರೈಟ್ಸ್ ಕೂಡ ಭರ್ಜರಿ ಮೊಟ್ಟಕ್ಕೆ ಸೇಲ್ ಆಗಿದೆ. 13ಕೋಟಿಗೂ ಹೆಚ್ಚು ಮೊತ್ತ ಪಡೆದಿದೆ ಎನ್ನಲಾಗಿದೆ. ಹೀಗೆ ಹಲವು ದಾಖಲೆ ಮಾಡಿದ ಅಪ್ಪು ಅಭಿನಯದ ಜೇಮ್ಸ್ ಚಿತ್ರ ಅವರು ಅಭಿನಯಿಸಲು ಸುಮಾರು 7 ರಿಂದ 8 ಕೋಟಿ ಸಂಭಾವನೆ ಪಡೆದಿರಬಹುದು ಎಂದು ಹೇಳಲಾಗುತ್ತಿದೆ. ನಮ್ಮ ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದರೆ ನಿಮ್ಮ ಅನಿಸಿಕೆ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಶೇರ್ ಮಾಡಿ.