ಪುನೀತ್ ರಾಜ್ ಕುಮಾರ್ ಅದ್ದೂರಿ ಫಲಪುಷ್ಪ ಪ್ರದರ್ಶನಕ್ಕೆ ತಗುಲಿದ ಒಟ್ಟು ವೆಚ್ಚ ಎಷ್ಟು ಕೋಟಿ ಗೊತ್ತಾ? ಅಬ್ಬಾ ಇಷ್ಟೊಂದಾ, ನಿಜಕ್ಕೂ ಗ್ರೇಟ್

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ನಾಡು ಕಂಡ ನೆಚ್ಚಿನ ನಟ ಕನ್ನಡಿಗರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮ ಜೊತೆ ಇಲ್ಲದೆ ಹಲವು ತಿಂಗಳುಗಳೆ ಕಳೆದಿದೆ. ಕನ್ನಡ ಪವರ್ ಸ್ಟಾರ್ ಹಾಗೂ ದೊಡ್ಮನೆ ಕುಟುಂಬದ ಮುದ್ದಿನ ಮಗ ಪುನೀತ್ ರವರನ್ನು ನೆನಪಿಸಿಕೊಳ್ಳದ ಅಭಿಮಾನಿಗಳು ಇಲ್ಲ. ಹೌದು, ಅಪ್ಪುವಿನ ಹೆಸರಿನಲ್ಲಿ ಅವರ ಅಭಿಮಾನಿಗಳು ಕೂಡ ಸಾಮಾಜಿಕ ಕಾರ್ಯವನ್ನು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡ ರಸ್ತೆಗೆ ಅವರ ಹೆಸರಿಟ್ಟಿದೆ. ಪುನೀತ್ ಅಗಲಿಕೆಯ ನಂತರ ಅಭಿಮಾನಿಗಳು ಅವರನ್ನು ಯಾವಾಗಲು ನೆನಪಿಸಿಕೊಕೊಳ್ಳುತ್ತಿದ್ದಾರೆ.

ಅಂದಹಾಗೆ, ಆಗಸ್ಟ್ 5 ರಂದು ಸಸ್ಯ ಕಾಶೀ ಲಾಲ್ ಬಾಗ್ ನಲ್ಲಿ ದಿ-ವಂ-ಗ-ತ ನಟ ಪುನೀತ್ ರಾಜ್ ಕುಮಾರ್ ಫಲ ಪುಷ್ಪ ಪ್ರದರ್ಶನ ಅದ್ದೂರಿಯಾಗಿ ನಡೆದಿತ್ತು. ಇನ್ನು ಅಪ್ಪು ಅವರ ಹೆಸರಲ್ಲಿ ಅದ್ದೂರಿಯಾಗಿ ನಡೆದ ಈ ಫಲ ಪುಷ್ಪ ಪ್ರದರ್ಶನಕ್ಕೆ ಖರ್ಚು ಆದ ಒಟ್ಟು ಲೆಕ್ಕಾಚಾರದ ಬಗ್ಗೆ ನೀವು ಕೇಳಿದರೆ ಖಂಡಿತ ಆಶ್ಚರ್ಯವಾಗುತ್ತದೆ. ಈ ಅದ್ದೂರಿ ಫಲ ಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆಯ ಸಚಿವರು ಮುನಿರತ್ನ ಘೋಷಿಸಿದ್ದರು.

ಹಾಗಾಗಿ ಈ ಕಾರ್ಯಕ್ರಮಕ್ಕೆ ಪುನೀತ್ ರಾಜ್ ಕುಮಾರ್ ಹಾಗೂ ಶಿವಣ್ಣ ಮನೆಗೆ ಹೋಗಿ ಕುಟುಂಬಕ್ಕೆ ಅಹ್ವಾನ ನೀಡಿದ್ದರು. ಡಾ. ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ನೆನಪಿನಲ್ಲಿ ಹಾಗೂ ಅವರ ಜೀವನ ಆಧಾರಿತ ವಿಶೇಷ ಫಲಪುಷ್ಪ ಪ್ರದರ್ಶನವನ್ನು ಸಾರ್ವಜನಿಕರಿಗೆ ಆಯೋಜಿಸಲಾಗಿತ್ತು. ಹೀಗಾಗಿ ಕುಟುಂಬದವರಿಂದ ಕೆಲ ಸಲಹೆಗಳನ್ನು ಪಡೆದುಕೊಳ್ಳಲು ಅಧಿಕಾರಿಗಳು ಮನೆಗೆ ತೆರಳಿದ್ದರು. ಈ ವಿಚಾರದ ಕುರಿತು ಚರ್ಚೆ ನಡೆಸಿ ಅವರ ಜೊತೆಗೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ, ಸಹೋದರರಾದ ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್ ಅವರ ಮನೆಗೆ ಹೋಗಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದರು ಅವರ ಸಲಹೆಯನ್ನು ತಗೆದುಕೊಂಡಿದ್ದರು.

ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಆಗಸ್ಟ್ 5ಕ್ಕೆ ಪ್ರಾರಂಭವಾಗಿ ಆಗಸ್ಟ್ 15ರ ವರೆಗೆ ಅದ್ದೂರಿಯಾಗಿ ನಡೆಯಿತು. ರಾಜ್ಯದ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಈ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ್ದರು. ಲಾಲ್ ಬಾಗ್ ನಲ್ಲಿ ನಡೆದ ಈ ಫಲ ಪುಷ್ಪ ಪ್ರದರ್ಶನದಲ್ಲಿ ಪುನೀತ್ ರಾಜ್ ಕುಮಾರ್ ಅವರ ಜೀವನ ಆಧಾರಿತ ಪುಷ್ಪ ಪ್ರದರ್ಶನ ಅತ್ಯಂತ ಆಕರ್ಷಕವಾಗಿತ್ತು. ಈ ಫಲ ಪುಷ್ಪ ಪ್ರದರ್ಶನಕ್ಕೆ ಲಕ್ಷಾಂತರ ಪುಷ್ಪಗಳಲ್ಲಿ ಗಾಜುನೂರಿನ ಮನೆ ಮುಂದೆ ಮಯೂರ ಚಿತ್ರದ ಡಾ. ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ನಗು ಮುಖದ ಪ್ರತಿಮೆಗಳು ಗಮನ ಸೆಳೆಯುತ್ತಿದೆ.

ಅದರ ಜೊತೆಗೆ, ಲಾಲ್ ಬಾಗ್ ನ ಗಾಜಿನ ಮನೆಯಲ್ಲಿಯೇ ಡಾ. ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಪ್ರತಿಮೆಗಳು ಜನರನ್ನು ಸೆಳೆಯುತ್ತಿತ್ತು. ಗಾಜುನೂರಿನ ಮನೆಯ ಹಿಂಭಾಗದಲ್ಲಿ ಡಾ. ರಾಜ್ ಆಲದ ಮರದ ಕೆಳಗೆ ಕುಳಿತು ಧ್ಯಾನ ಮಾಡುತ್ತಿರುವಂತ ಪ್ರತಿಮೆ, ಅದರ ಎಡ ಭಾಗದಲ್ಲಿ ರಾಜ್ ಅವರ ಆರಾಧ್ಯ ದೈವ ರಾಘವೇಂದ್ರ ಸ್ವಾಮಿ ಯವರ ಪ್ರತಿಮೆ ಆಕರ್ಷಣೆಯಾಗಿತ್ತು.

ಗಾಜಿನ ಮನೆಯ ಹಿಂಭಾಗದ ಹೂ ರಾಶಿಯಲ್ಲಿ ಡಾ. ರಾಜ್ ಹಾಗೂ ಬಾಲನಟನಾಗಿ ಅಪ್ಪು ಅಭಿನಯಿಸಿದ್ದ “ಭಕ್ತ ಪ್ರಹ್ಲಾದ” ದೃಶ್ಯವು ಮತ್ತೊಂದು ಆಕರ್ಷಣೆಯಾಗಿತ್ತು. ಅದರ ಮುಂಭಾಗದಲ್ಲಿ ಡಾ. ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಪ್ರತಿಮೆಗಳು ಮತ್ತಷ್ಟು ಮೆರುಗು ತಂದುಕೊಟ್ಟಿತು. ಅದರ ಜೊತೆಗೆ “ಬೇಡರ ಕಣ್ಣಪ್ಪ ” ಚಿತ್ರದಲ್ಲಿ ಅಣ್ಣಾವ್ರು ಶಿವನಿಗೆ ಕಣ್ಣು ನೀಡುತ್ತಿರುವ ದೃಶ್ಯವನ್ನೇ ವರ್ಟಿಕಲ್ ಗಾರ್ಡನ್ ನಲ್ಲಿ ಮರು ಸೃಷ್ಟಿ ಮಾಡಿದ್ದರು. ಅದರ ಜೊತೆಗೆ, ಮೈಸೂರಿನ ‘ಶಕ್ತಿಧಾಮ’ದ ಪ್ರಕೃತಿಯನ್ನು 1.6 ಲಕ್ಷ ಗುಲಾಬಿ, ಸೇವಂತಿಗೆ ಮೊದಲಾದ 40 ಸಾವಿರ ಹೂಗಳಿಂದ ಸುಂದರವಾಗಿ ಸೃಷ್ಟಿಸಿದ್ದರು.

ಇದೆಲ್ಲವೂ ಲಕ್ಷಾಂತರ ಜನರಿಂದ ವೀಕ್ಷಣೆಗೊಂಡು ದಾಖಲೆಯನ್ನು ಸೃಷ್ಟಿಸಿದೆ. ಅಂದಹಾಗೆ, ಲಾಲ್ ಬಾಗ್ ನಲ್ಲಿ ನಡೆಯುತ್ತಿರುವ ಫಲ ಪುಷ್ಪ ಪ್ರದರ್ಶನಕ್ಕೆ ಖರ್ಚು ಆಗಿರುವ ಒಟ್ಟು ಮೊತ್ತ ಬರೋಬ್ಬರಿ ಎರಡು ಕೋಟಿ ರೂಪಾಯಿ. ಆದರೆ ಈ ಫಲಪುಷ್ಪ ಪ್ರದರ್ಶನಕ್ಕೆ ಬಂದು ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆ ಹಾಗೂ ಹೂಗಳ ಸೌಂದರ್ಯವನ್ನು ಕಣ್ತುಂಬಿಕೊಂಡು ಹೋಗಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *