ಪುನೀತ್ ರಾಜ್ ಕುಮಾರ್ ಅಭಿನಯಿಸಬೇಕಿದ್ದ ಚಿತ್ರದಲ್ಲಿ ನಟಿಸುತ್ತಿದ್ದಾರಾ? ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್.! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸುದ್ದಿ

ನಮಸ್ತೆ ಪ್ರೀತಿಯ ಓದುಗರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೇ ಪುನೀತ್ ರಾಜ್ ಕುಮಾರ್ ಅವರ ಹೆಸರು ಕೇಳಿದರೆ ಕಣ್ಣಂಚ್ಚಲ್ಲಿ ಎಲ್ಲರಿಗೂ ನೀರು ತುಂಬುವುದು ಖಂಡಿತ. ಕರ್ನಾಟಕದ ಯುವರತ್ನ ಅಪ್ಪು ನಮ್ಮನ್ನೆಲ್ಲ ಅಗಲಿ ಏಳು ಮಾಸಗಳೇ ಕಳೆದಿದೆ. 7 ಜನುಮ ಕಳೆದರು ಅಪ್ಪು ನೆನೆಪು ಮಾತ್ರ ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ನಮ್ಮ ಕನ್ನಡಿಗರ ಮನಸ್ಸಲ್ಲಿ ಎಂದಿಗೂ ಅಪ್ಪು ಅಜರಾಮರ. ಅಪ್ಪು ಎಂದರೆ ಎಲ್ಲರಿಗೂ ಎಷ್ಟು ಇಷ್ಟ ಅಂದರೆ ಅವರು ಹೋದಾಗಿನಿಂದಲು ಯಾವಾ ಸಭೆ ಸಮಾರಂಭಗಳಲ್ಲಿ ಅವರ ಫೋಟೋ ಇಟ್ಟು ಪೂಜೆ ಮಾಡಿ ನಂತರ ಮುಂದಿನ ಕಾರ್ಯಕ್ಕೆ ಚಾಲನೆ ನೀಡುತ್ತಾರೆ.

ಇನ್ನು ಬಿಡುಗಡೆಯಗುವ ಹಾಡು, ಟ್ರೈಲರ್, ಸಿನೆಮಾ ಯಾವುದೇ ಆದರು ಮೊದಲಿಗೆ ಇವರಿಗೆ ನಮನ ಸಲ್ಲಿಸುತ್ತಾರೆ. ನಿಮಗೆ ಗೊತ್ತಿರುವ ಹಾಗೇ ಅಪ್ಪು ಅವರ ಕೊನೆಯ ಚಿತ್ರ “ಜೇಮ್ಸ್” ಸಂಪೂರ್ಣ ಶೂಟಿಂಗ್ ಮುಗಿಯದೆ ಇರುವ ಕಾರಣಕ್ಕೆ ಹಲವಾರು ತಂತ್ರಜ್ಞಾನ ವನ್ನು ಉಪಯೋಗಿಸಿಕೊಂಡು ಅಪ್ಪು ಅವರ ಜೇಮ್ಸ್ ಚಿತ್ರವನ್ನು ಬಿಡುಗಡೆ ಮಾಡಲಾಯಿತು.

ಅಪ್ಪು ಅವರ ಡೇಟ್ಸ್ ಗಾಗಿ ಅದೆಷ್ಟೋ ಜನ ನಿರ್ದೇಶಕರು ಅಪ್ಪು ಅವರಿಗಾಗಿ ಕಥೆಗಳನ್ನು ಬರೆದುಕೊಂಡು ಕಾಯುತ್ತಿದ್ದವರಿಗೆ ಅವರ ಈ ಅಕಾಲಿಲ ಮರಣ ಇಡೀ ಚಿತ್ರರಂಗಕ್ಕೆ ಅಘತವನ್ನು ತಂದಿತ್ತು. ಆ ನಿರ್ದೇಶಕರ ಪೈಕಿ ಕೃಷ್ಣ ಅವರು ಸೇರ್ಪಡೆಯಾಗುತ್ತರೆ. ಹೌದು! ಕೃಷ್ಣ ಅವರು ಪುನೀತ್ ರಾಜಕುಮಾರ್ ಅವರಿಗಾಗಿ ಕಥೆಯೊಂದನ್ನು ತಯಾರುಸಿ ಬಹಳ ವರ್ಷಗಳಿಂದ ಅವರ ಡೇಟ್ಸ್ ಗಾಗಿ ಕಾಯುತ್ತಿದ್ದರು.
ಎಲ್ಲವೂ ಸರಿಯಿದ್ದಿದ್ದಾರೆ ಈ ವರ್ಷದ ಮೇ ತಿಂಗಳಿನಲ್ಲಿ ಚಿತ್ರ ಬಿಡುಗಡೆಯಗುತ್ತಿತ್ತು. ಆದರೆ ಘೋರ ವಿಧಿಯ ಕೈವಾಡ ಬೇರೇನೇ ಆಗಿತ್ತು. ನಾವು ಅಂದುಕೊಂಡಂತೆ ಯಾವುದು ಇಲ್ಲ. ಎಲ್ಲಾ ಅವನ ಇಚ್ಛೆ. ಇತ್ತೀಚಿಗೆ ಅಪ್ಪು ಅವರ ಹೆಸರಿನೊಂದಿಗೆ ಅಭಿಷೇಕ್ ಅಂಬರೀಷ್ ಅವರ ಹೆಸರು ಕೇಳಿಬರುತ್ತಿತ್ತು. ಆ ಕಾರಣ ಏನೆಂದು ನಿಮಗೆಲ್ಲರಿಗೂ ತಿಳಿದೇ ಇದೇ.

ಕೃಷ್ಣ ಅವರು ಅಪ್ಪುಗಾಗಿ ಮಾಡಿದ ಕಥೆಯನ್ನು ಅಭಿಷೇಕ್ ಅಂಬರೀಷ್ ಅವರಿಗೆ ನೀಡಿದ್ದಾರೆ. ಎಂಬ ಊಹೆ ಪುಹೆಗಳು ಹರಿದಾಡುತ್ತಿತ್ತು. ಆದರೆ ಈ ವಿಚಾರ ಸುಳ್ಳು ಎಂದಿದ್ದಾರೆ ನಿರ್ದೇಶಕ ಕೃಷ್ಣ ಅವರು ಬರೆದಿರುವ ಕಥೆಯನ್ನು ಅಪ್ಪುಗಾಗಿಯೇ ಮಾಡಿದ್ದರಿಂದ ಆ ಪಾತ್ರವನ್ನು ಬೇರೊಬ್ಬರೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಮಾಹಿತಿಯಾ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *