ಪುನೀತ್ ರಾಜ್ ಕುಮಾರ್ ದುಬಾರಿ ಬಟ್ಟೆ ಧರಿಸ್ತಾ ಇರ್ಲಿಲ್ಲ ಯಾಕೆ ಗೊತ್ತಾ? ಅಪ್ಪು ಬದಲಾಗಿದ್ದು ಹೇಗೆ ನೋಡಿ! ನಿಜವಾಗ್ಲೂ ಇಂತಹ ಮನುಷ್ಯನನ್ನು ಪಡೆದ ನಾವೇ ಪುಣ್ಯವಂತರು

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ, ಕನ್ನಡಿಗರು ಕಣ್ಮಣಿ, ಅಭಿಮಾನಿಗಳನ್ನು ದೇವರೆಂದು ಕರೆದ ದೊಡ್ಮನೆ ರಾಜ ಡಾ. ರಾಜ್ ಕುಮಾರ್ ಅವರು ಎಂದಿಗೂ ಜನರಿಗೆ ತಪ್ಪು ದಾರಿಯನ್ನು ತೋರಿಸಿದವರಲ್ಲ. ರಾಜ್ ಕುಮಾರ್ ಅವರ ಸಿನೆಮಾಗಳಲ್ಲಿ ಕುಡಿತದ ಸನ್ನಿವೇಶಗಳು ಇರುತ್ತಿರಲಿಲ್ಲ, ಹೆಣ್ಣುಮಕ್ಕಳನ್ನು ಚೂಡಾಯಿಸುವ ಸನ್ನಿವೇಶಗಳು ಇರುತ್ತಿರಲಿಲ್ಲ ಏಕೆಂದರೆ ಅಭಿಮಾನಿಗಳು ಒಂದು ವೇಳೆ ಅದನ್ನು ಫಾಲೋ ಮಾಡಿದರೆ ಅದು ಜನರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ಡಾ. ರಾಜ್ ಕುಮಾರ್ ಅವರ ಯಾವ ಸಿನೆಮಾಗಲ್ಲಿಯೂ ಈ ರೀತಿಯ ಸನ್ನಿವೇಶ ದೃಶ್ಯಗಳು ಇರುತ್ತೀರಾಲಿಲ್ಲ. ಇದರ ಜೊತೆಗೆ ರಾಜ್ ಕುಮಾರ್ ಅವರು ಸಮಾಜದಲ್ಲಿ ಎಷ್ಟು ಸರಳತೆಯಿಂದ ಇರುತ್ತಿದ್ದರು ಹಾಗೂ ಕಾಣಿಸಿಕೊಳ್ಳುತ್ತಿದ್ದರು.

ಅಣ್ಣಾವ್ರು ಸಾರ್ವಜನಿಕ ವೇದಿಕೆಯಲ್ಲಿ ಮೊದಮೊದಲು ಒಂದು ಶರ್ಟ್ ಹಾಗೂ ಸಾಮಾನ್ಯವಾದ ಪ್ಯಾಂಟ್ ಧರಿಸಿ ಬರುತ್ತಿದ್ದರು. ಆದರೆ ಹೋಗುತ್ತೀದ್ದಂತೆ ಬಳಿ ಬಣ್ಣದ ಶರ್ಟ್ ಹಾಗೂ ಬಿಳಿ ಬಣ್ಣದ ಪಂಚೆಗೆ ಸಿಮಿತವಾಗಿದ್ದರು. ಪುನೀತ್ ರಾಜ್ ಕುಮಾರ್ ಅವರು ಮೊದಲಿನಿಂದಲೂ ರಾಜ್ ಕುಮಾರ್ ಅವರು ಯಾವ ರೀತಿ ಇದ್ದರೋ ಅದನ್ನು ಹತ್ತಿರದಿಂದ ನೋಡಿದ್ದರು ಹಾಗೂ ಅವರ ಎಲ್ಲಾ ಗುಣಗಳನ್ನು ಇವರು ಅಳವಡಿಸಿಕೊಂಡಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರು ಕೂಡ ಮೊದಮೊದಲು ದುಬಾರಿ ಬಟ್ಟೆಯನ್ನು ಧರಿಸಿ ಮೋಜು ಮಾಸ್ತಿ ಮಾಡಿಕೊಂಡು ಇದ್ದರು. ಆದರೆ ದಿನಗಳು ಕಳೆದಂತೆ ಅವರಲ್ಲಿ ಪ್ರಬುದ್ಧತೆ ಬಂದು ಬದಲಾಗಲು ಶುರುಮಾಡುತ್ತಾರೆ. ಒಂದು ದಿನ ಪುನೀತ್ ರಾಜ್ ಕುಮಾರ್ ಅವರು ಸಾರ್ವಜನಿಕ ವೇದಿಕೆಯಲ್ಲಿ ದುಬಾರಿ ಬ್ರಾಂಡ್ ನ ಬಟ್ಟೆಯನ್ನು ಧರಿಸಿದ್ದರು, ಇದನ್ನು ಕಂಡ ಅವರ ಅಭಿಮಾನಿ ಪುನೀತ್ ರಾಜ್ ಕುಮಾರ್ ಧರಿಸಿದ್ದ ಅದೇ ಬಣ್ಣದ ಅದೇ ಬ್ರಾಂಡ್ ನ ಬಟ್ಟೆಯನ್ನು ಧರಿಸಿದ್ದರು.

ಇದನ್ನು ಕಂಡ ಪುನೀತ್ ರಾಜ್ ಕುಮಾರ್ ಅವರಿಗೆ ತಾನು ದುಬಾರಿ ವೆಚ್ಚದ ಬೆಟ್ಟೆಯನ್ನು ಧರಿಸಿದ್ದನ್ನು ಕಂಡು ಅಭಿಮಾನಿಗಳು ಧರಿಸುವುದು ಎಷ್ಟು ಸರಿ, ಒಂದು ವೇಳೆ ಅವನ ಬಳಿ ಹಣ ಇತ್ತೋ, ಇಲ್ಲವೋ ಅಥವಾ ಸಾಲ ಮಾಡಿ ಆ ಬಟ್ಟೆಯನ್ನು ಖರೀದಿ ಮಾಡಿದ್ದನೋ ಎಂಬ ಯೋಚನೆ ಪುನೀತ್ ಅವರಲ್ಲಿ ಮೂಡುತ್ತದೆ, ಇದೇ ರೀತಿ ಎಲ್ಲಾ ಅಭಿಮಾನಿಗಳು ಮಾಡಲು ಶುರುವಾದರೆ ಪರಿಸ್ಥಿತಿ ಏನಾಗಬಹುದು ಮತ್ತು ತಾನು ಯಾವ ಸಂದೇಶವನ್ನು ನನ್ನ ಪ್ರೀತಿಸುವ ಅಭಿಮಾನಿಗಳಿಗೆ ನೀಡುತ್ತಿದ್ದೇನೆ ಎಂಬ ಯೋಚನೆ ಪುನೀತ್ ಅಗರಿಗೆ ಬರುತ್ತದೆ.

ಈ ಘಟನೆ ನಡೆದ ನಂತರ ಪುನೀತ್ ಅವರು ಬಟ್ಟೆ ವಿಚಾರದಲ್ಲಿ ತುಂಬಾ ಸರಳತೆಯನ್ನು ರೂಡಿಸಿಕೊಂಡರು. ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಳ್ಳುವಾಗ ಸಾಧಾರಣದ ಬಟ್ಟೆಯನ್ನು ಧರಿಸುತ್ತಿದ್ದರು. ಪುನೀತ್ ರಾಜ್ ಕುಮಾರ್ ಅವರು ಈ ರೀತಿ ಬಟ್ಟೆಯನ್ನು ಧರಿಸಲು ಏನು ಕಾರಣ ಎಂದರೆ ಅವರನ್ನು ಫಾಲೋ ಮಾಡುತ್ತಿರುವ ಕೋಟ್ಯಂತರ ಅಭಿಮಾನಿಗಳಿಗೋಸ್ಕರ
ಅಭಿಮಾನಿಗಳ ರೀತಿಯೇ ಪುನೀತ್ ರಾಜ್ ಕುಮಾರ್ ಅವರು ಕೂಡ ಸಾಧಾರಣವಾದ ಬಟ್ಟೆಯನ್ನೇ ಧರಿಸುತ್ತಿದ್ದರು. ಇದು ದೊಡ್ಮನೆ ವಂಶದ ರಾಜನ ಮಗನ ಗುಣ ಅದುಕ್ಕೆ ಇಂದು ಅಭಿಮಾನಿಗಳು ಅವರನ್ನು ದೇವರೆಂದು ಪೂಜೆ ಮಾಡುತ್ತಿರುವುದು. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *