ಪುಷ್ಪ ಚಿತ್ರದಲ್ಲಿ ಡಿ ಬಾಸ್ ಗಾಗಿ ಸುಕುಮಾರ್ ಬರೆದಿದ್ದರು ಒಂದು ಪಾತ್ರ; ಯಾವ ಪಾತ್ರಕ್ಕಾಗಿ ಡಿ ಬಾಸ್ ರವರಿಗೆ ಆಹ್ವಾನ ಮಾಡಲಾಗಿತ್ತು ಗೊತ್ತಾ..!?

ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರಾಗಿ ಕಾಣಸಿಗುತ್ತಾರೆ. ಹಾಗೆಂದಮಾತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಪರಭಾಷೆಗಳಲ್ಲಿ ಅಭಿಮಾನಿಗಳು ಇಲ್ಲ ಎಂದಲ್ಲ. ಆದರೆ ಕನ್ನಡ ಚಿತ್ರರಂಗದಲ್ಲಿ ಅದರಲ್ಲೂ ಕೂಡ ಮಾಸ್ ಅಭಿಮಾನಿಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಎಂದರೆ ಅದೇನೋ ಒಂಥರಾ ವಿಶೇಷವಾದ ಅಭಿಮಾನ ಎಂದು ಹೇಳಬಹುದಾಗಿದೆ.

ಇದುವರೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಯಾವುದೇ ಪರಭಾಷೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಇದ್ದರೂ ಕೂಡ ಪರಭಾಷೆಯಲ್ಲಿ ಹಲವಾರು ಅಭಿಮಾನಿಗಳು ದರ್ಶನ್ ರವರಿಗೆ ಇದ್ದಾರೆ. ದರ್ಶನ್ ರವರು ಯಾವುದೇ ಪಾತ್ರವನ್ನು ನೀಡಿದರೂ ಕೂಡ ನಿರ್ವಹಿಸಬಲ್ಲಂತಹ ಸವ್ಯಸಾಚಿ ನಟ. ಪುರಾಣ ಪಾತ್ರವೇ ಆಗಲಿ ಐತಿಹಾಸಿಕ ಪಾತ್ರವೇ ಆಗಲಿ ಅಥವಾ ಮಾಸ್ ಕ್ಲಾಸ್ ಯಾವುದೇ ಪಾತ್ರವಿರಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅದಕ್ಕೆ 100% ನ್ಯಾಯ ನೀಡಿ ನಟಿಸುತ್ತಾರೆ. ಪ್ರತಿಯೊಂದು ಪಾತ್ರದಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಪರಕಾಯ ಪ್ರವೇಶ ಮಾಡುತ್ತಾರೆ.

ಇನ್ನು ನಿಮಗೆಲ್ಲರಿಗೂ ಗೊತ್ತಿರಬಹುದು ಕಳೆದ ವರ್ಷ ಅತ್ಯಂತ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿರುವಂತಹ 350 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವಂತಹ ಚಿತ್ರವೆಂದರೆ ಅದು ಅಲ್ಲು ಅರ್ಜುನ್ ಹಾಗೂ ರಶ್ಮಿಕ ಮಂದಣ್ಣ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವಂತಹ ಪುಷ್ಪ ಚಿತ್ರ. ಪುಷ್ಪ ಚಿತ್ರ ಕೇವಲ ನಾಯಕ ಅಲ್ಲುಅರ್ಜುನ್ ಅಥವಾ ನಾಯಕಿ ರಶ್ಮಿಕ ಮಂದಣ್ಣ ನವರಿಂದ ಮಾತ್ರವಲ್ಲದೆ ಬಹುತೇಕ ಎಲ್ಲಾ ಪ್ರಮುಖ ಕಲಾವಿದರಿಂದ ಸೂಪರ್ ಹಿಟ್ ಆಗಿತ್ತು ಎಂದರೆ ತಪ್ಪಾಗಲಾರದು.

ಆದರೆ ನಿಮಗೆ ಗೊತ್ತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಕೂಡ ಪುಷ್ಪ ಚಿತ್ರದಲ್ಲಿ ಒಂದು ಪಾತ್ರದ ಆಫರ್ ಬಂದಿತ್ತು. ಇದಕ್ಕಾಗಿ ಸ್ವತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಭೇಟಿಯಾಗಲು ನಿರ್ದೇಶಕ ಸುಕುಮಾರ್ ಅವರೇ ಬೆಂಗಳೂರಿಗೆ ಬಂದಿದ್ದರು. ಆದರೆ ನಿಮಗೆಲ್ಲ ಗೊತ್ತಿರುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಪರಭಾಷೆಯಲ್ಲಿ ನಟಿಸುವುದಿಲ್ಲ ಹೀಗಾಗಿ ಪಾತ್ರವನ್ನು ನಿರಾಕರಿಸಿದ್ದರು. ಹಾಗಿದ್ದರೆ ಅವರು ನಟಿಸ ಬೇಕಾಗಿದ್ದ ಪಾತ್ರ ಯಾವುದು ಹಾಗೂ ಅದನ್ನು ಯಾರು ಅದನ್ನು ನಟಿಸಿದ್ದಾರೆ ಎಂಬುದನ್ನು ತಿಳಿಸುತ್ತೇವೆ ಬನ್ನಿ.

ಹೌದು ಗೆಳೆಯರೇ ಡಾಲಿ ಧನಂಜಯ್ ನಟಿಸಿರುವಂತಹ ಜಾಲಿ ರೆಡ್ಡಿ ಪಾತ್ರವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಟಿಸಬೇಕಾಗಿತ್ತು. ಆದರೆ ಅದು ಖಂಡಿತವಾಗಿಯೂ ದರ್ಶನ್ ರವರಿಗೆ ಹೇಳಿ ಮಾಡಿಸಿದ ಪಾತ್ರವಂತೂ ಅಲ್ಲ. ಹೀಗಾಗಿ ನಿಮಗೆ ತಿಳಿದಿರುವಂತೆ ಜಾಲಿ ರೆಡ್ಡಿ ಪಾತ್ರದಲ್ಲಿ ಡಾಲಿ ಧನಂಜಯ್ ರವರು ಈಗಾಗಲೇ ರಾಷ್ಟ್ರಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.


Leave a Reply

Your email address will not be published. Required fields are marked *