ಕೆಜಿಎಫ್ ಚಿತ್ರದ ಮೂಲಕ ಇಡೀ ದೇಶವೇ ತಿರುಗಿ ನೋಡುವ ಹಾಗೇ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್, ಪ್ರಶಾಂತ್ ನೀಲ್ ಅವರು ದೇಶ ಕಂಡ ಅತ್ಯದ್ಭುತ ನಿರ್ದೇಶಕರಲ್ಲಿ ಒಬ್ಬರು ಎಂದರು ತಪ್ಪಾಗಲ್ಲ. ಅವರ ಮೊದಲು ಸಿನಿಮಾ ಉಗ್ರಂ ಚಿತ್ರದಿಂದ ತಮ್ಮ ಸಿನಿ ಜರ್ನಿಯನ್ನು ಶುರುಮಾಡಿದ್ರು. ನಂತರ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಕೆಜಿಎಫ್ ನಿರ್ದೇಶನ ಮಾಡಿದ ನಂತರ ಇಡೀ ದೇಶವೇ ಅವರನ್ನು ಗುರುತಿಸಿತು ಈಗ ಪ್ರಶಾಂತ್ ನೀಲ್ ಒಬ್ಬ ಸ್ಟಾರ್ ನಿರ್ದೇಶಕರು ಹೌದು..
ಕೆಜಿಎಫ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಿ ದೊಡ್ಡ ಮಟ್ಟದ ಜಯವನ್ನು ಕಂಡಿದೆ. ಕೆಜಿಎಫ್ ಚಾಪ್ಟರ್ 2 ಬಾಕ್ಸ್ ಆಫೀಸ್ ಕಲೆಕ್ಷನ್ ಧೂಳ್ ಎಬ್ಬಿಸಿದ್ದು ಸುಮಾರು 1000 ಕೋಟಿಗೂ ಹೆಚ್ಚು ನಿರ್ಮಾಪಕರು ಬಚ್ಚಿಕೊಂಡಿದ್ದಾರೆ. ನಮ್ಮ ದೇಶದಲ್ಲಿ ಯಾವ ನಟರ ಸಿನಿಮಾಗಳು ಕೂಡ ಈ ಗಳಿಕೆ ಮಾಡಿಲ್ಲ. ಇದು ಕನ್ನಡಿಗರು ನಿಜಕ್ಕೂ ಹೆಮ್ಮೆ ಪಡುವ ವಿಷಯ.
ಇನ್ನು ಕೆಜಿಎಫ್ 2 ನಂತರ ಪ್ರಶಾಂತ್ ನೀಲ್ ಅವರು ಡಾರ್ಲಿಂಗ್ ಪ್ರಭಾಸ್ ಅವರ ಜೊತೆಗೆ ಸಾಲಾರ್ ಚಿತ್ರವನ್ನು ನಿರ್ದೇಶನ ಮಾಡುತಿದ್ದರೆ. ಕೆಜಿಎಫ್ 2 ಬಿಡುಗಡೆಯದ ನಂತರ ಕೆಜಿಎಫ್ 2 ಕ್ಲೈಮಾಕ್ಸ್ ನೋಡಿ ಜನರು ಸಲಾರ್ ಚಿತ್ರವೇ ಕೆಜಿಎಫ್ ಚಾಪ್ಟರ್ 3 ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾದವು.
ಅದಕ್ಕೆ ತಕ್ಕಂತೆ ಎನ್ನುವಂತೆ ಕೆಜಿಎಫ್ 2 ಚಿತ್ರದಲ್ಲಿ ಅಭಿನಯಿಸಿದ ಒಬ್ಬ ಮು-ಸ್ಲಿಂ ಹುಡುಗ ಮುಂದೆ ಪ್ರಭಾಸ್ ಆಗುತ್ತಾನೆ, ಅಂದರೆ ಸಾಲಾರ್ ಚಿತ್ರದ ಹೀರೊ ಆಗುತ್ತಾನೆ ಎಂಬಂತೆ. ನಮಗೆ ತಿಳಿದುರುವ ಹಾಗೇ ಸಾಲಾರ್ ಎನ್ನುವುದು ಒಂದು ಉರ್ದು ಪದ! ಅದರ ಅರ್ಥ ರಾಜನ ಬಲಗೈ ಬಂಟ ಎಂದು ತಿಳಿದು ಬಂದುದೇ. ಹೀಗೆ ಸಾಕಷ್ಟು ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚ್ ಆಗುತ್ತಲೇ ಇದೇ.
ಇದಕ್ಕೆ ಪ್ರಶಾಂತ್ ನೀಲ್ ಅವರು ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಒಂದು ಮಾಧ್ಯಮದ ಸಂದರ್ಶದಲ್ಲಿ ಪ್ರಶಾಂತ್ ನೀಲ್ ಅವರಿಗೆ ಪ್ರಭಾಸ್ ಅವರ ಸಾಲಾರ್ ಚಿತ್ರದಲ್ಲಿ ಯಶ್ ಇರುತ್ತರ. ಎಂದು ಪ್ರೆಶ್ನೆ ಕೇಳುತ್ತಾರೆ. ಅದಕ್ಕೆ ನೀಲ್ ಅವರು ಕೊಟ್ಟ ಉತ್ತರ ಈಗ ಸೋಷಿಯಲ್ ಮೀಡಿಯಾ ದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಕೊಟ್ಟ ಉತ್ತರವೇನು ಗೊತ್ತಾ.?
“ಸಾಲಾರ್ ಒಂದು ಉರ್ದು ಪದ ಆದರ ಅರ್ಥ ರಾಜನ ಬಲಗೈ ಬಂಟ ಎಂದು” ನಾನು ಇದನ್ನು ಬಿಟ್ಟು ಸಿನಿಮಾ ಬಗ್ಗೆ ನಿಮಗೆ ಬೇರೇನೂ ಹೇಳಲಾರೆ. ಎಂದು ಹೇಳಿದ್ದಾರೆ. ಇದರ ಅರ್ಥ ಸಾಲಾರ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಇದ್ದೆ ಇರುತ್ತಾರೆ ಪಕ್ಕ. ಅವರ ಬಲಗೈ ಬಂಟರಾಗಿ ಪ್ರಭಾಸ್ ಇರುತ್ತಾರೆ ಎನ್ನುವುದು ಅವರ ಮೂಲಕ ಬಹುತೇಕ ಖಚಿತವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಪ್ರಭಾಸ್ ನಟನೆಯ ಸಾಲಾರ್ ಚಿತ್ರದ ಫ್ಯಾನ್ ಮೆಡ್ ಟ್ರೈಲರ್, ಟೀಸರ್ ಸಾಕಷ್ಟು ವೈರಲ್ ಆಗಿದೆ. ಅಭಿಮಾನಿಗಳು ಸಾಲಾರ್ ಚಿತ್ರ ಯಾವಾಗ ಬಿಡುಗಡೆಯಗುತ್ತೆ ಆದಷ್ಟು ಬೇಗ ಬಿಡುಗಡೆ ಮಾಡಿ ಎಂದು ಪ್ರಶಾಂತ್ ನೀಲ್ ಅವರಿಗೆ ಕಾಮೆಂಟ್ ಮೂಲಕ ಕೇಳುತಿದ್ದರೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಹೈದ್ರಾಬಾದ್ ಗೆ ಹೋಗಿದ್ದು ಇದೇ ವಾರದಿಂದ ಸಾಲಾರ್ ಚಿತ್ರದ ಶೋಟಿಂಗ್ ಅನ್ನು ಪ್ರಭಾಸ್ ಅವರ ಜೊತೆಗೆ ಶುರು ಮಾಡಲಿದ್ದಾರೆ.
ಎಂದು ತಿಳಿದು ಬಂದಿದೆ. ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸಾಲಾರ್ ಚಿತ್ರ ಬರೋಬ್ಬರಿ ಇನ್ನೂರು ಕೋಟಿಗಳು ಎನ್ನಲಾಗಿದೆ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದೆ. ಈ ಸಂಸ್ಥೆ ಯಿಂದ ಮತ್ತಷ್ಟು ಚಿತ್ರಗಳು ಬರಲಿ ಅನ್ನೋದೇ ನಮ್ಮ ಹಾಗೂ ಅಭಿಮಾನಿಗಳ ಆಸೆ. ನಿಮಗೆ ನಮ್ಮ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ಧನ್ಯವಾದಗಳು.