ಪ್ರೀತಿಯ ತಾಯಿಗಾಗಿ ಭವ್ಯ ಬಂಗಲೆ ಬಿಟ್ಟು ಬಂದ ನಟ ರವಿಚಂದ್ರನ್! ತಾಯಿಗಾಗಿ ಬಿಟ್ಟು ಕೊಟ್ಟ ಮನೆ ಎಷ್ಟು ಕೋಟಿ ಬೆಲೆ ಬಾಳುತ್ತೆ ಗೊತ್ತಾ.?

ಸುದ್ದಿ

ಚಂದನವನದ ಪ್ರೇಮಿಗಳ ಒಡೆಯ ನಟ ಕ್ರೀಜಿಸ್ಟಾರ್ ರವಿಚಂದ್ರನ್ ಅವರ ತಾಯಿ ಅಗಲಿದ್ದಾರೆ. ನಟ ರವಿಚಂದ್ರನ್ ಅವರು ಅವರ ತಾಯಿಯ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಮಾದರಿಯಾಗಿ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಹುಟ್ಟಿಸಿದ ತಂದೆ ತಾಯಿಯಾರನ್ನು ವೃದ್ಧಾಶ್ರಮಕ್ಕೆ ಬಿಟ್ಟು ತಮ್ಮ ಪಾಡಿಗೆ ತಾವು ಇರುವವರನ್ನು ಈ ಸಮಾಜದಲ್ಲಿ ನೋಡಿದ್ದೇವೆ. ಆದರೆ ನಟ ರವಿಚಂದ್ರನ್ ಅವರು ತಮ್ಮ ಪ್ರೀತಿಯ ತಾಯಿಗಾಗಿ ಏನೆಲ್ಲಾ ಮಾಡಿದ್ದಾರೆ ಹಾಗೂ ರವಿಚಂದ್ರನ್ ಅವರಿಗೆ ಅವರ ತಾಯಿ ಯಾವ ರೀತಿಯಲ್ಲಿ ಶಕ್ತಿಯಾಗಿದ್ದರು ಎಂಬುದರ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿಸುತ್ತೇವೆ ಬನ್ನಿ.

ನಟ ರವಿಚಂದ್ರನ್ ಅವರ ತಾಯಿ ಸುಮಾರು 10 ವರ್ಷಗಳ ಹಿಂದೆ ಒಂದು ಕಾಯಿಲೆಗೆ ಒಳಗಾಗಿದ್ದಾರೆ. ಸಾಮನ್ಯವಾಗಿ ಈ ಕಾಯಿಲೆ ಬಂದವರು ಆಗಾಗ ಎಲ್ಲವನ್ನು ಮರೆತು ಹೋಗುತ್ತಿರುತ್ತಾರೆ. ಆದರೆ ಈ ವಿಷಯವನ್ನು ರವಿಚಂದ್ರನ್ ಅವರು ಎಲ್ಲಿಯೂ ಹೇಳಿಕೊಂಡಿರಲಿಲ್ಲ ಮತ್ತು ಚಿಕ್ಕ ವಯಸ್ಸಿನಲ್ಲಿ ಒಬ್ಬ ತಾಯಿ ಮಗುವನ್ನು ಹೇಗೆ ನೋಡಿಕೊಳ್ಳುತ್ತಾರೋ ಆ ರೀತಿ ರವಿಚಂದ್ರನ್ ಅವರು ತಮ್ಮ ತಾಯಿಯನ್ನು ಅಷ್ಟು ಚನ್ನಾಗಿ ನೋಡಿಕೊಳ್ಳುತ್ತಿದ್ದರು.

ಇನ್ನು ರವಿಚಂದ್ರನ್ ಅವರಿಗಿಂತ ಅವರ ಹೆಂಡತಿ ಸುಮತಿ ಅವರು ಇನ್ನೂ ಚನ್ನಾಗಿ ತಮ್ಮ ಅತ್ತೆಯನ್ನು ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ರವಿಚಂದ್ರನ್ ಅವರ ಪತ್ನಿ ಸುಮತಿಯವರು ರವಿಚಂದ್ರನ್ ಅವರ ತಾಯಿಯನ್ನು ಅತ್ತೆಯಾಗಿ ನೋಡಿಕೊಳ್ಳುತ್ತಿರಲಿಲ್ಲ ಬದಲಾಗಿ ಅವರ ಸ್ವಂತ ತಾಯಿಯಂತೆ ನೋಡಿಕೊಳ್ಳುತ್ತಿದ್ದರು. ನಟ ರವಿಚಂದ್ರನ್ ಅವರು ಕೋಟಿ ಕೋಟಿ ಖರ್ಚು ಮಾಡಿ ಮನೆ ಕಟ್ಟಿಸಿದರು ಆ ಮನೆಯನ್ನು ಬಿಟ್ಟು ತಮ್ಮ ಹೇಳೇ ಮನೆಗೆ ಬರುತ್ತಾರೆ. ಏಕೆಂದರೆ ಆ ಮನೆಯಲ್ಲಿ ಅವರ ತಂದೆಯ ನೆನಪುಗಳು ಅವರ ತಾಯಿಗೆ ಹೆಚ್ಚಾಗಿದ್ದ ಕಾರಣ ಹೇಳೆಯ ನೆನಪುಗಳಿಗಾಗಿ ಹಳೆಯ ಮನೆಗೆ ವಾಪಾಸ್ ಆಗುತ್ತಾರೆ.

ಹೌದು ರವಿಚಂದ್ರನ್ ಅವರ ತಾಯಿಗೆ ಕೊನೆಯ ದಿನಗಳಲ್ಲಿ ಅವರ ಮೆದುಳು ಕೂಡ ಕಾರ್ಯ ಮಾಡುವುದನ್ನು ನಿಲ್ಲಿಸುತ್ತದೆ. ಆಗ ಮಗ ರವಿಚಂದ್ರನ್ ಅವರನ್ನು ಬಿಟ್ಟರೆ ಬೇರೆ ಯಾರನ್ನು ಸಹ ಅವರ ತಾಯಿ ಗುರುತಿಸುತ್ತಿರಲಿಲ್ಲ. ಇನ್ನೂ ರವಿಚಂದ್ರನ್ ಅವರಿಗೆ ತಾಯಿ ಎಂದರೆ ಪಂಚಪ್ರಾಣ ದಿನ ಬೆಳಗಾದರೆ ರವಿಚಂದ್ರನ್ ಅವರು ತನ್ನ ತಾಯಿಯ ಮುಖವನ್ನು ನೋಡಿ ನಮಸ್ಕರಿಸಿ ನಂತರ ತಮ್ಮ ದಿನದ ಕೆಲಸಕ್ಕೆ ಹೋಗುತ್ತಿದ್ದರು.

ರವಿಚಂದ್ರನ್ ಅವರ ತಂದೆಯ ನಿಧಾನದ ನಂತರ ದೊಡ್ಡ ಶಕ್ತಿಯಾಗಿ, ಬೆನ್ನೆಲುಬಾಗಿ ನನ್ನ ಅಮ್ಮ ನಿಂತಿದ್ದರು ಎಂದು ನಟ ರವಿಚಂದ್ರನ್ ಅವರು ಹಲವಾರು ವೇದಿಕೆಯಲ್ಲಿ ಹೇಳಿಕೊಂಡು ಭಾವುಕರಗಿದ್ದರು.
ತಂದೆ ತಾಯಿಯ ಪ್ರೀತಿ ಮುಂದೆ ಎಲ್ಲವೂ ಶೂನ್ಯ ಹೆತ್ತ ತಂದೆ ತಾಯಂದಿರು ನಮ್ಮ ಜೊತೆಗೆ ಇದ್ದಾರೆ ನೂರಾನೆ ಬಲ ಎಷ್ಟೋ ಜನರಿಗೆ ಅದರ ಬೆಲೆನೇ ತಿಳಿಯದೆ ಹೆತ್ತ ತಂದೆ ತಾಯಿಯನ್ನು ಚನ್ನಾಗಿ ನೋಡಿಕೊಳ್ಳದೆ ಮನೆಯಿಂದ ಹೊರಹಾಕಿ ವೃದ್ಧಾಶ್ರಮಕ್ಕೆ ಸೇರಿರೋದು ಹಲವಾರು ಉದಾಹರಣೆಗಳು ಇದೇ. ಎಲ್ಲಾ ಪೋಷಕರ ಮಕ್ಕಳು ನಟ ರವಿಚಂದ್ರನ್ ಅವರನ್ನು ನೋಡಿ ಕಲಿಯಬೇಕು.ಈ ಮಾಹಿತಿ ನಿನಗೆ ಇಷ್ಟ ವಾಗಿದ್ದರೆ ತಪ್ಪದೇ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *