ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸುದ್ದಿಗಳನ್ನು ಕೇಳಿದರೆ ನಮಗೆ ಕೂಡ ನಂಬಲು ಸಾಧ್ಯವಾಗುವುದಿಲ್ಲ ಆ ಮಟ್ಟಿಗೆ ಅವುಗಳು ವಿಚಿತ್ರವಾಗಿರುತ್ತವೆ. ಲಾಕ್ಡೌನ್ ಪ್ರಾರಂಭವಾದ ಮೇಲಿನಿಂದ ಕೆಲವೊಂದು ಸಂಬಂಧಗಳಿಗೆ ನಿಜವಾಗಿಯೂ ಕೂಡ ಬೆಲೆ ಇಲ್ಲ ಎನ್ನುವುದು ಅರ್ಥಪೂರ್ಣವಾಗಿ ಜನರಿಗೆ ತಿಳಿಯುವುದಕ್ಕೆ ಆರಂಭವಾಗಿದೆ. ಇಂದು ನಾವು ಮಾತನಾಡಲು ಹೊರಟಿರುವ ವಿಚಾರ ಕೂಡ ಮಾನವೀಯ ಮೌಲ್ಯಕ್ಕೆ ತದ್ವಿರುದ್ಧವಾಗಿದೆ.
ಹೌದು ಈ ಘಟನೆ ನಡೆದಿರುವುದು ದೇವರ ನಾಡೆಂದು ಖ್ಯಾತವಾಗಿರುವ ಕೇರಳದ ತಿರುವನಂತಪುರಂ ನಲ್ಲಿ. ಇಂತಹ ಅಮಾನವೀಯ ಘಟನೆಗಳು ನಡೆಯುವುದು ಆ ಪ್ರದೇಶದಲ್ಲಿ ಅಲ್ಲವೇ. ತಿರುವನಂತಪುರಂನ ಹೋಟೆಲೊಂದರಲ್ಲಿ ಗಾಯತ್ರಿ ಎನ್ನುವ ಹುಡುಗಿ ನಿರ್ಜೀವ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ. ಅದು ಕೂಡ ಅಲ್ಲಿನ ಹೋಟೆಲೊಂದರಲ್ಲಿ. ಈ ಪ್ರಕರಣದ ಕುರಿತಂತೆ ತನಿಖೆ ನಡೆಸಿರುವ ಪೊಲೀಸರಿಗೆ ನಿಜವಾದ ವಿಚಾರ ಏನೆಂಬುದು ತಿಳಿದುಬಂದಿದೆ.
ಗಾಯತ್ರಿ ಎನ್ನುವಾಕೆ ಪ್ರವೀಣ್ ಎನ್ನುವವರೊಂದಿಗೆ ಚಿನ್ನದ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದಳು. ಇಬ್ಬರು ಕೂಡ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಶನಿವಾರವಷ್ಟೇ ಮಧ್ಯಾಹ್ನದಲ್ಲಿ ಪ್ರವೀಣ್ ಗಾಯತ್ರಿಯನ್ನು ಹೋಟೆಲ್ ರೂಮೊಂದಕ್ಕೆ ಕರೆಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ರಾತ್ರಿಯಲ್ಲಿ ಹೋಟೆಲ್ ಅವರಿಗೆ ಕರೆ ಮಾಡಿ 23ವರ್ಷದ ಗಾಯತ್ರಿ ಮರಣ ಹೊಂದಿದ್ದಾರೆ ಎಂಬುದಾಗಿ ತಿಳಿಸಿದ್ದಾನೆ. ಹೋಟೆಲ್ ಸಿಬ್ಬಂದಿ ಹಾಗೂ ಪೊಲೀಸರು ಬಂದು ನೋಡಿದಾಗ ನಾಪತ್ತೆಯಾಗಿದ್ದಾನೆ.
ಮೂಲಗಳ ಪ್ರಕಾರ ನೈಜ ವಿಚಾರವೇನೆಂದರೆ ಪ್ರವೀಣನಿಗೆ ಈಗಾಗಲೇ ಮದುವೆಯಾಗಿದ್ದು ಗಾಯತ್ರಿ ಜೊತೆಗೆ ಬೇಡದ ಸಂಬಂಧವನ್ನು ಇಟ್ಟುಕೊಂಡಿದ್ದ. ಈ ವಿಚಾರ ಪ್ರವೀಣನ ಮನೆಯವರಿಗೆ ತಿಳಿದು ಮನೆಯಲ್ಲಿ ಸಾಕಷ್ಟು ಜಗಳ ನಡೆದಿದೆ. ಇದನ್ನು ಬಗೆಹರಿಸುವ ಪ್ರಯತ್ನವಾಗಿ ಗಾಯತ್ರಿಯನ್ನು ರೂಮಿಗೆ ಕರೆಸಿಕೊಂಡಿದ್ದ. ಇಲ್ಲಿ ನಡೆದಿರುವ ಕೆಲವೊಂದು ಅಹಿತಕರ ಘಟನೆ ಯಿಂದಾಗಿ ಗಾಯತ್ರಿಯ ಪ್ರಾಣ ಹಾರಿ ಹೋಗಿದೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಪ್ರವೀಣ್ ತಲೆಮರೆಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
