ಫೋಟೋಗ್ರಾಫರ್ ಮೇಲೆ ರವಿಚಂದ್ರನ್ ಮಗಳು ಕೆಂಡಾಮಂಡಲ.! ಅಷ್ಟಕ್ಕೂ ಅಲ್ಲಿ ನಡೆದಿದ್ದಾರು ಏನು ನೋಡಿ

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಮೊನ್ನೆ ತಾನೇ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮಗ ಮನು ರವಿಚಂದ್ರನ್ ಅವರ ಮದುವೆ ಅದ್ದೂರಿಯಾಗಿ ಎಲ್ಲರ ಸಮ್ಮುಖದಲ್ಲಿ ನಡೆಯಿತು ಅದಕ್ಕೆ ಸಾಕ್ಷಿಯಂತೆ ಸಾಕಷ್ಟು ಫೋಟೋಗಳನ್ನು ನೀವು ನೋಡೋರುತ್ತೀರ. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಮೂರು ಮಕ್ಕಳು ಇಬ್ಬರೂ ಗಂಡು ಮಕ್ಕಳು ಇಂದು ಹೆಣ್ಣು, ಇಬ್ಬರೂ ಗಂಡು ಮಕ್ಕಳು ಸಿನೆಮಾರಂಗದಲ್ಲಿ ಬ್ಯುಸಿ ಆಗಿದ್ದಾರೆ ಆದರೆ ಅವರ ಮಗಳು ಗೀತಾಂಜಲಿ ಅವರು ಕೊಂಚ ಸ್ವಾಭಿಮಾನಿ ಎಂದರೂ ತಪ್ಪಾಗಲಾರದು ಹಾಗಾಗಿ ಅವರೂ ಸಹ ತಮ್ಮದೇ ಆದ ಸ್ವಂತ ಉದ್ಯಮ ವನ್ನು ಹೊಂದಿದ್ದಾರೆ.

ಕಳೆದ ಎರಡು ವರ್ಷದ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗೀತಾಂಜಲಿ ಅವರು ಕುಟುಂಬದ ಜೊತೆ ಸಮಯ ಕಳೆಯುದಷ್ಟೇ ಅಲ್ಲದೇ ತಮ್ಮದೇ ಅದ ಸ್ವಂತ ಉದ್ಯಮವನ್ನು ಶುರು ಮಾಡಿ ಸಾಕಷ್ಟು ಹೆಸರು ಮಾಡಿದ್ದಾರೆ. ಹೌದು ರವಿಚಂದ್ರನ್ ಅವರ ಮಗಳು ಓದುತ್ತಿರುವಾಗಲೇ ತಮ್ಮದೇ ಆದ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದನ್ನು ಶುರು ಮಾಡಿದ್ದರು. ಪುಟ್ಟ ಕಂಪನಿ ಮಾಡಿಕೊಂಡು ಅದರಲ್ಲಿ ಬರುತ್ತಿದ್ದ ಆದಾಯದಲ್ಲಿ ತಮ್ಮ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದರು.

ಅಷ್ಟೇ ಅಲ್ಲದೇ ಅಪ್ಪ ಅಮ್ಮನಲ್ಲಿ ಹಣ ಕೂಡ ಕೇಳುತ್ತಿರಲಿಲ್ಲ. ರವಿಚಂದ್ರನ್ ಅವರು ತಮ್ಮ ಸ್ನೇಹಿತರ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವ ಅವಕಾಶ ಕೊಡಿಸಲು ಕೇಳಿದರೂ ಸಹ ತನಗೆ ಬೇಡ ತನ್ನ ಕೈಲಾದಷ್ಟು ನಾನು ಮಾಡುವೆ ಎಂದು ಎಲ್ಲಿಯೂ ಸಹ ತಾನು ಅಪ್ಪನ ಹೆಸರನ್ನು ಉಪಯೋಗಿಕೊಳ್ಳದೆ ತನ್ನ ಸ್ವಂತ ಶ್ರಮದಿಂದ ತಮ್ಮ ಉದ್ಯಮ ನಡೆಸಿಕೊಂಡು ಹೋಗುತ್ತಿದ್ದಾರೆ ಗೀತಾಂಜಲಿ.

ತದನಂತರ ತಮ್ಮ ವಿದ್ಯಾಭ್ಯಾಸವೆಲ್ಲಾ ಮುಗಿದ ನಂತರ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಜೊತೆಗೆ ಸೀರೆ ಉದ್ಯಮವನ್ನೂ ಸಹ ಶುರು ಮಾಡಿದ್ದರು. ತಮ್ಮದೇ ಆದ ಸ್ವಂತ ಸೀರೆ ಕಾರ್ಖಾನೆ ತೆರೆದು ಮೊದಲು ರೆಡಿ ಆದ ಸೀರೆಯನ್ನು ರವಿಚಂದ್ರನ್ ಅವರು ಕೊಡಿಸಿದ್ದು ಮತ್ಯಾರಿಗೂ ಅಲ್ಲ ನಟಿ ತಾರಾ ಅವರಿಗೆ, ರವಿಚಂದ್ರನ್ ಅವರ ಹಿರಿಯ ಮಗ ಮನೋರಂಜನ್ ಅವರ ಮದುವೆಯೂ ಅದ್ದೂರಿಯಾಗಿ ನಡೆದಿತ್ತು.

ಮನು ಅವರು ಸಂಗೀತಾ ಅವರ ಜೊತೆ ಆಗಸ್ಟ್ 21ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇನ್ನು ನಟ ಮನೋರಂಜನ್ ಅವರ ಸಿನಿ ಕೇರಿಯರ್ ಬಗ್ಗೆ ಹೇಳುವುದಾದರೆ, ಕನ್ನಡ ಸಿನೆಮಾರಂಗದಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ. ಹೌದು, 2017 ರಲ್ಲಿ ಸಾಹೇಬ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ರವಿಚಂದ್ರನ್ ಅವರ ಮಗಳು ಗೀತಾಂಜಲಿ ಅವರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ತುಂಬಾ ಕಡಿಮೆ.

ರವಿಚಂದ್ರನ್ ಪತ್ನಿ ಯಾವ ರೀತಿ ಇದ್ದರೋ ಆ ರೀತಿಯೇ ಅವರ ಮಗಳು ಕೂಡ ಇದ್ದಾರೆ. ಸ್ವಲ್ಪ ನಾಚಿಕೆ ಸ್ವಭಾವ ದವರು. ಹೀಗಾಗಿ ಇವರಿಬ್ಬರು ಯಾವ ವೇದಿಕೆಗಳಲ್ಲೂ ಕೂಡ ಹೆಚ್ಚಾಗಿ ಕಾಣಿಕೊಳ್ಳುವುದಿಲ್ಲ. ಮೊನ್ನೆ ಅಣ್ಣನ ಮದುವೆಯಲ್ಲಿ ಫೋಟೋಗ್ರಾಫರ್ ಗೆ ಗೀತಾಂಜಲಿ ಬೈದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈ’ರಲ್ ಆಗಿತ್ತು, ಫೋಟೋಗ್ರಾಫರ್ ಅವರ ಮುಂದೆ ಬಂದು ಫೋಟೋ ತೆಗೆಯುವಾಗ ಹೆಣ್ಣುಮಕ್ಕಳು ಮುಂದೆ ಬಂದಾಗ ಯಾವಾಗ್ಲೂ ಹೀಗೆ ಬರ್ತೀರಾ ಎಂದು ಕೋಪಗೊಂಡು ಬೈದಿದ್ದಾರೆ.

ಇದನ್ನು ನೋಡಿದ ಅಭಿಮಾನಿಗಳು ನಿಮಗೋಸ್ಕರ ಫೋಟೋಗ್ರಾಫರ್ ನಿಮ್ಮ ಫೋಟೋ ಚನ್ನಾಗಿ ಬರಲಿ, ಅಂತ ಒಳ್ಳೆ ಮೂಮೆಂಟ್ ಗೋಸ್ಕರ ಕಾಯುತ್ತಿರುತ್ತಾರೆ.. ನೀವು ತೊಂದರೆ ಕೊಡುತ್ತಲೇ ನೋಡ್ಕೊಂಡು ಓಡಾಡಬೇಕು ಎಂದು ಹಾಗೂ ಇನ್ನು ಕೆಲವರು ಸರಿಯಾಗಿ ಮಾಡಿದ್ದಾರೆ. ಫೋಟೋಗ್ರಾಫರ್ ಅಂತ ಹೆಣ್ಣುಮಕ್ಕಳು ಮೇಲೆ ಹೋಗೋದ, ಎಂದು ಹಲವಾರು ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡಿದ್ದಾರೆ.


Leave a Reply

Your email address will not be published. Required fields are marked *