ಬಂತು ನೋಡಿ ಅತಿದೊಡ್ಡ ಬ್ರೇಕಿಂಗ್ ನ್ಯೂಸ್, ಸದ್ಯದಲ್ಲೇ ಸೆಟ್ಟೇರಲಿದೆ ಡಿಬಾಸ್ ಹಾಗೂ ಸುಕ್ಕಾ ಸೂರಿ ಕಾಂಬಿನೇಶನ್ ನಲ್ಲಿ ಹೊಸ ಸಿನೆಮಾ! ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡೋದು ಪಕ್ಕ

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಪ್ಯಾನ್ ಇಂಡಿಯಾ ಸಿನೆಮಾಗಳು ಒಂದರ ಹಿಂದೆ ಒಂದು ಬಂದು ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ಕೆಜಿಎಫ್ ಸಿನೆಮಾ ನಂತರ ಪುಷ್ಪ ಹಾಗೂ ಆರ್ ಆರ್ ಆರ್ ಚಿತ್ರಗಳು ಬ್ಯಾಕ್ ಟು ಬ್ಯಾಕ್ ಬಂದು ಸಿನಿ ಪ್ರಿಯರಿಗೆ ಹಬ್ಬದ ವಾತಾವರಣ ಕೊಟ್ಟಿದೆ. ಇದೀಗ ಚಿತ್ರ ಪ್ರೇಮಿಗಳಿಗೆ ಮತ್ತೊಂದು ಪ್ಯಾನ್ ಇಂಡಿಯಾ ಸಿನೆಮಾ ಬರಲಿದೆ. ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ಸುಕ್ಕ ಸೂರಿ ಹಾಗೂ ಡಿಬಾಸ್ ದರ್ಶನ್ ಕಾಂಬಿನೇಶನ್ ನಲ್ಲಿ. ಸುಕ್ಕ ಸೂರಿ ಎಂದೇ ಕರೆಯಲ್ಪಡುವ ಕನ್ನಡಿಗರು ಕಂಡ ಸ್ರೇಷ್ಟ ನಿರ್ದೇಶಕ.
ಇವರ ಮೊದಲು ಚಿತ್ರ ದುನಿಯಾ ದೊಡ್ಡ ಮಟ್ಟದ ಯಶಸ್ಸಿನ ನಂತರ ಅವರನ್ನು ದುನಿಯಾ ಸೂರಿ ಎಂದು ಕರೆಯುತ್ತಿದ್ದರು. ಅವರ ಮೊದಲು ಚಿತ್ರ ನಿರ್ದೇಶನದ ದುನಿಯಾ ಚಿತ್ರ ಭರ್ಜರಿ ಹಿಟ್ ಆದಮೇಲೆ ಸೂರಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಅವರ ಎರಡನೇ ಚಿತ್ರ ಇಂತಿ ನಿನ್ನ ಪ್ರೀತಿಯ ಈ ಚಿತ್ರ ಅವರಿಗೆ ಅಷ್ಟು ಕೈ ಹಿಡಿಯಲಿಲ್ಲ. ಅದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆಗಿನ ಜಾಕಿ ಮಾತ್ರ ಇಡೀ ಚಿತ್ರರಂಗವೇ ಸೂರಿ ಕಡೆಗೆ ತಿರುಗಿ ನೋಡೋ ಹಾಗೇ ಮಾಡಿತು ಅಷ್ಟು ದೊಡ್ಡ ಮಟ್ಟಿಗೆ ಯಶಸ್ಸನ್ನು ಕೊಟ್ಟಿತು.

ಮತ್ತೆ ಪುನೀತ್ ಅವರ ಜೊತೆ ಅಣ್ಣ ಬಾಂಡ್ ಚಿತ್ರ ನಿರ್ದೇಶನ ಮಾಡಿ ಆ ಚಿತ್ರ ಕೂಡ ಬ್ಲಾಕ್ ಬಸ್ಟರ್ ಹಿಟ್ ಸಾಲಿಗೆ ಸೇರಿತು. ಸುಕ್ಕ ಸೂರಿ ಅವರ ನಿರ್ದೇಶನದ ಎಲ್ಲಾ ಚಿತ್ರಗಳು ಮುಖ್ಯವಾಗಿ ಅತ್ಯುತ್ತಮ ಕಲಾಕೃತಿಗಳಿಗೆ ಹೆಸರುವಾಸಿಯಾಗಿವೆ. ಇನ್ನು ಕನ್ನಡ ಪ್ರೇಕ್ಷಕರಿಗೆ ಸೂರಿ ನಿರ್ದೇಶನದ ಚಿತ್ರಗಳು ಎಂದರೆ ಸಾಕಷ್ಟು ನಿರೀಕ್ಷೆಗಳು ಹುಟ್ಟು ಹಾಕುತ್ತದೆ.

ವಿಜಯ್, ಪುನೀತ್ ರಾಜಕುಮಾರ್, ವಿಕ್ಕಿ ವರುಣ್, ಶಿವಣ್ಣ, ಡಾಲಿ ಧನಂಜಯ್, ಹೀಗೆ ಹಲವಾರು ನಾಯಕರ ಜೊತೆ ಸಿನೆಮಾ ಮಾಡಿದ ಸೂರಿ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಅಂದರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿದು ಹಬ್ಬ ಮಾಡೋದು ಕಂಡಿತಾ.

ದರ್ಶನ್ ಅವರಿಗೆ ಸಿನೆಮಾ ಕ್ಷೇತ್ರದಲ್ಲಿ ಅದು ಪ್ರೇಕ್ಷಕ ಬಳಗದಲ್ಲಿ ಒಂದು ವಿಶೇಷ ರೀತಿಯ ಸ್ಥಾನ ಇದೇ. ಹಾಗಾಗಿ ದರ್ಶನ್ ಅವರ ಸಿನೆಮಾಗಳಿಗಾಗಿ ಸಾಕಷ್ಟು ಅಭಿಮಾನಿಗಳು ಕಾಯುತ್ತಿರುತ್ತಾರೆ. ಅಂತೆಯೇ ದರ್ಶನ್ ಅವರನ್ನು ಹೊಸ ಲುಕ್ ಹಾಗೂ ಹೊಸ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಾರೆ.
ಅದು ದರ್ಶನ್ ಮತ್ತು ಸೂರಿ ಕಾಂಬಿನೇಶನ್ ನಲ್ಲಿ ಸಿನೆಮಾ ಬರ್ತಿದೆ ಅಂದರೆ ಕೇಳ್ಬೇಕಾ ಹೇಳ್ಬೇಕು ಅಂದರೆ ಸುಕ್ಕ ಸೂರಿ ಮೊದಲೇ ನಿರ್ದೇಶನದಲ್ಲಿ ರಾಕ್ಷಸ ಅದರಲ್ಲೂ ಡಿಬಾಸ್ ಗೆ ಮೂವಿ ಮಾಡಿದರೆ ಯಾವ ಲೆವೆಲ್ ಗೆ ಇರುತ್ತೆ ಯೋಚನೆ ಮಾಡಿ. ಅಭಿಮಾನಿಗಳಿಗಂತೂ ಖಂಡಿತ ಹಬ್ಬ.

ಸೂರಿ ಹಾಗೂ ದರ್ಶನ್ ಅವರ ಕಾಂಬಿನೇಶನ್ ನಲ್ಲಿ ಬರುತ್ತಿರುವ ಸಿನೆಮಾದ ಟೈಟಲ್ ಮಾತ್ರ ಇನ್ನು ಹೊರ ಬಿದ್ದಿಲ್ಲ. ಸದ್ಯದಲ್ಲೇ ಸಿನೆಮಾ ಆರಂಭ ಆಗಲಿದ್ದು ಸೂರಿ ದರ್ಶನ್ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಸಿನೆಮಾ ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿದ್ದು ಖಂಡಿತ ಎಲ್ಲಾ ಸ್ಟಾರ್ ಗಳ ಸಿನೆಮಾಗಳ ದಾಖಲೆಗಳನ್ನು ಧೂಳಿಪಟ ಮಾಡಲಿದೆ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. ಇವರಿಬ್ಬರ ಕಾಂಬಿನೇಶನ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *