ಬಣ್ಣದ ಬದುಕಿಗೆ ಗುಡ್ ಬಾಯ್ ಹೇಳಿ ಕೃಷಿಯತ್ತ ಮುಖಮಾಡಿ ನೇಗಿಲು ಹಿಡಿದ ನಟಿ ಶ್ರುತಿ! ವಿಡಿಯೋ ಸಿಕ್ಕಾಪಟ್ಟೆ ವೈರಲ್

ಸುದ್ದಿ

ನಮ್ಮ ಚಂದನವನದಲ್ಲಿ ಚಂದದ ನಟಿ ಎಂದರೆ ಅದು ನಮ್ಮ ಶ್ರುತಿ ಅಮ್ಮ. ಅವರಿಗೆ ಬರುವ ಚಂದದ ಪತ್ರಗಳ ಮೂಲಕ ಪತ್ರಗಳ ಪ್ರೇಕ್ಷಕರನ್ನು ರಂಜಿಸಿ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ನಟಿ ಶ್ರುತಿ ಅವರು ಸಿನಿಮಾ ರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅಂದು ಶ್ರುತಿ ಅವರು ಹೆಚ್ಚಾಗಿ ಕೌಟುಂಬಿಕ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದರು.
ಅವರು ಅಭಿನಯಿಸುತ್ತಿದ್ದ ಚಿತ್ರಗಳಲ್ಲಿ ಹೆಚ್ಚಾಗಿ ಫ್ಯಾಮಿಲಿ ಸೆಂಟಿಮೆಂಟ್ ಗಳೇ ಹೆಚ್ಚು ಇರುತ್ತಿತ್ತು. ಇದರಿಂದ ಅವರಿಗೆ ಮಹಿಳೆಯರೆ ಅಭಿಮಾನಿಗಳೆ ಜಾಸ್ತಿ. ಶ್ರುತಿ ಅವರು ತಮ್ಮ ಪಾತ್ರ ನಿಭಾಯಿಸಿಕೊಂಡು ಹೋಗುವ ಪರಿ ಇವತ್ತಿಗೂ ಕಣ್ಣಿಗೆ ಕಟ್ಟಿದ ಹಾಗಿದೆ. ಅಲ್ಲದೇ ಅವರು ಅಭಿನಯದ ಎಲ್ಲಾ ಪಾತ್ರಗಳು ಪ್ರೇಕ್ಷಕರಿಗೆ ತುಂಬಾ ಹತ್ತಿರವಾಗಿದೆ. ಭಾವನಾತ್ಮಕ ನಟನೆಯಿಂದ ಪ್ರೇಕ್ಷಕರ ಕಣ್ಣು ಒದ್ದೆಯಾಗುವಂತೆ ಮಾಡುತ್ತಾರೆ.

ಇಲ್ಲಿಯವರೆಗೆ ಮಾಡಿದ ಎಲ್ಲಾ ಪಾತ್ರಗಳಿಗು ಶೃತಿ ಅವರು ತಕ್ಕ ನ್ಯಾಯ ಒದಗಿಸಿಕೊಂಡಿದ್ದರು. ಇನ್ನು ನಟಿ ಶ್ರುತಿ ಅವರು 18 ಸೆಪ್ಟೆಂಬರ್ 1975 ರಲ್ಲಿ ಜನಿಸಿದರು. ಇವರ ಮೂಲ ಹೆಸರು ಗಿರಿಜಾ. ಸಿನಿಮಾ ರಂಗಕ್ಕೆ ಪಾದಾರ್ಪಣೆ ಕೊಟ್ಟು ಇವರು ಶ್ರುತಿ ಎಂದು ಹೆಸರಿನಿಂದ ಸಿನಿ ರಂಗಕ್ಕೆ ಪರಿಚಿತರಾದರು. ಹಿರಿಯ ನಟ ದ್ವಾರಕೀಶ್ ಅವರು ನಿರ್ದೇಶನ ಮಾಡಿರುವ ಕನ್ನಡದ “ಶೃತಿ” ಸಿನಿಮಾದಲ್ಲಿ ನಟಿಸಿರುವ ಇವರಿಗೆ ಗಿರಿಜಾ ಹೆಸರು ಬದಲಾಯಿತು. ಇವರು ಕೂಡ ಕನ್ನಡ ಸೇರಿದಂತೆ ತಮಿಳು, ಮಲಯಾಳಂ, ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳಿಂದ ಸೈ ಏನೆಸಿಕೊಂಡಿದ್ದರೆ.
ಕನ್ನಡದಲ್ಲಿ ಮೊದಲ ಬಾರಿಗೆ ಶಿವಣ್ಣ ಅಭಿನಯದ ಆಸೆಗೊಬ್ಬ ಮೀಸೆಗೊಬ್ಬ ಚಿತ್ರದಲ್ಲಿ ಸಹಾಯಕ ಪಾತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ನಂತರ ಹಿರಿಯ ನಟ ದ್ವಾರಕೀಶ್ ಅವರ ಚಿತ್ರದಲ್ಲಿ ನಾಯಕಿಯಾಗಿ ಪಾತ್ರದಲ್ಲಿ ಕಾಣಿಸಿಕೊಂಡರು. ಅದಾದ ಬಳಿಕ ನಟಿ ಶ್ರುತಿ ಅವರಿಗೆ ಅವಕಾಶಗಳು ಒಂದರ ಮೇಲೆ ಒಂದು ಬರುತ್ತ ಹೋದವು. ತಾಯಿ ಇಲ್ಲದ ತವರು, ವೀರಪ್ಪ ನಾಯಕ, ಗೌರಿ ಗಣೇಶ್, ಬೊಂಬಾಟ್ ಹೆಂಡ್ತಿ, ಹೀಗೆ ಹಲವಾರು ಚಿತ್ರಗಳು ಇತ್ತೀಚಿಗೆ ಬಿಡುಗಡೆಯದ ರತ್ನನ್ ಪ್ರಪಂಚದಲ್ಲಿ ಕೂಡ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದ ಅವರ ವೈವಾಹಿಕ ಜೀವದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಶ್ರುತಿ ಅವರು ಎರಡು ಮದುವೆಯಾದರು ಕೂಡ ಅವರ ದಾಂಪತ್ಯಜೀವನ ಅಷ್ಟೇನು ಸುಖಕರವಾಗಿರಲಿಲ್ಲ. ಎಸ್ ಮಹೇಂದ್ರ ಮತ್ತು ಶ್ರುತಿ ಅವರು ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಅವರಿಬ್ಬರ ನಡುವೆ ಪ್ರೀತಿ ಬೆಳೆಯಿತು. ಇವರಿಬ್ಬರು ಪ್ರೇಮಕ್ಕೆ 1998 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇದರ ನಡುವೆ ಪತಿಯು ರಾಜಕೀಯದಲ್ಲಿ ತೊಡಗಿಕೊಂಡರು ಅದಕ್ಕೂ ಪತ್ನಿ ಶ್ರುತಿ ಕೂಡ ಸಾಥ್ ನೀಡಿದ್ದರು. 2008 ರಲ್ಲಿ ನಟಿ ಶ್ರುತಿ ಅವರು ಬಿಜೆಪಿ ಪಕ್ಷಕ್ಕೆ ಎಂಟ್ರಿ ಕೊಟ್ಟರು. ಹೀಗಿರುವಾಗ ಮೊದಲು ಪತಿ ಎಸ್ ಮಹೇಂದ್ರ ಮತ್ತು ಶ್ರುತಿ ಇವರ ದಾಂಪತ್ಯ ಜೀವನದ ಮಧ್ಯೆ ಚಂದ್ರಚುಡ್ ಅವರು ಬಂದರು. ಹೀಗಾಗಿ ಶ್ರುತಿ ಅವರ ದಾಂಪತ್ಯ ಕೊನೆ ಗೊಂಡಿತು. ಅದಾದ ಬಳಿಕ 2011 ರಲ್ಲಿ ಅಧಿಕೃತವಾಗಿ ವಿಚ್ಚೇದಾನ ಸಿಕ್ಕಾಗ ಎಸ್ ಮಹೇಂದ್ರ ಅವರಿಂದ ಶ್ರುತಿ ದೂರವಾದರು. ಇನ್ನು 2013 ರಲ್ಲಿ ಚಕ್ರವರ್ತಿ ಅವರನ್ನು ವಿವಾಹಆಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಆದರೆ ಚಂದ್ರಚುಡ್ ಮೊದಲ ಮದುವೆಯಾಗಿದ್ದ ಕಾರಣ ಈ ಮದುವೆ ನಿಂತುಹೋಯಿತು. ನಟಿ ಶ್ರುತಿ ಅವರ ಜೀವನದಲ್ಲಿ ಒಂದಿಷ್ಟು ಏರು ಪೆರುಗಳನ್ನು ಅರಿತ ಶ್ರುತಿ ಅವರು ತನ್ನ ಮಗಳು ಗೌರಿ ಜೊತೆಗೆ ಜೀವನ ಸಾಗಿಸುತ್ತಿದ್ದಾರೆ. ಶ್ರುತಿ ಅವರ ಮಗಳು ಗೌರಿ ಕೂಡ ತುಂಬಾ ಟ್ಯಾಲೆಂಟ್ ಆಗಿದ್ದಾಳೆ. ಸದ್ಯಕ್ಕೆ ಕಿರುತೆರೆ ಲೋಕದಲ್ಲಿ ಶೋ ಒಂದರಲ್ಲಿ ಜಡ್ಜ್ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ನಟಿ ಶ್ರುತಿ ಅವರು ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಇನ್ನು ಅವರು ಕೃಷಿಯತ್ತ ಮುಖಮಾಡಿದ್ದಾರೆ.
ನಟಿ ಶ್ರುತಿಯವರು ಗದ್ದೆಗಿಳಿದು ಉಳಿಮೆ ಮಾಡಲು ಪ್ರಾರಂಭಿಸಿರುವ ನಟಿ ಶ್ರುತಿಯವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಿನಿಮಾರಂಗದಿಂದ ಬ್ರೇಕ್ ಪಡೆದುಕೊಂಡು ತಮ್ಮ ಹೊಲದಲ್ಲಿ ಕೃಷಿ ಕೆಲಸ ಮಾಡಿದ್ದಾರೆ. ನೇಗಿಲು ಹಿಡಿದು ಉಳುಮೆ ಮಾಡುತ್ತಿರುವ ನಟಿ ಶ್ರುತಿಗೆ ಮಗಳು ಗೌರಿ ಮತ್ತು ಅವರ ತಾಯಂದಿರು ಕೂಡ ಸಾಥ್ ನೀಡಿ ಜೊತೆಯಾಗಿದ್ದಾರೆ.
ಶ್ರುತಿ ಅವರಿಗೆ ತಾನೇ ಮಾಡಬೇಕು ಎನ್ನುವುದು ಬಹುವರ್ಷದ ಆಸೆ. ಈ ಭೂಮಿಯ ಕೊಟ್ಟ ಭಗವಂತನಿಗೆ ಕೋಟಿ ನಮನಗಳು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅವರು ಹಾಕಿರುವ ಈ ವಿಡಿಯೋಕ್ಕೆ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ನೀವು ನೋಡಿ ನಟಿ ಶ್ರುತಿ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದಗಳು.


Leave a Reply

Your email address will not be published. Required fields are marked *