ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಸುದ್ದಿ ಎಂದರೆ ಮೇಘನಾ ಹಾಗೂ ಶಂಕ್ರಣ್ಣನ ವಿಚಾರ. ಮೇಘನಾ ಈಗಾಗಲೇ ಮದುವೆಯಾಗಿದ್ದ ಹುಡುಗಿ. ಆದರೆ ಗಂಡ ಬಿಟ್ಟು ಓಡಿ ಹೋಗಿದ್ದ. ನಂತರ 25ವರ್ಷದ ಮೇಘನಾ 45 ವರ್ಷದ ಶಂಕ್ರಣ್ಣನನ್ನು ಮದುವೆಯಾಗುತ್ತಾಳೆ. ಮದುವೆಯಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡಮಟ್ಟದ ಪ್ರಚಾರ ವಸ್ತುಗಳಾಗಿ ಇವರಿಬ್ಬರು ಕಾಣಿಸಿಕೊಳ್ಳುತ್ತಾರೆ. ಎಲ್ಲರೂ ಇವರನ್ನು ದುಡ್ಡಿಗಾಗಿ ಮದುವೆಯಾಗಿದ್ದಾರೆ ಎಂಬುದಾಗಿ ಮೇಘನಾ ಕುರಿತಂತೆ ಮಾತನಾಡುತ್ತಾರೆ.
ಆದರೆ ಒಂದು ಲೆಕ್ಕದಲ್ಲಿ ಆ ವಿಚಾರ ಈಗ ಸತ್ಯ ಆಗುತ್ತಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ ಕೆಲವು ದಿನಗಳ ಹಿಂದಷ್ಟೇ ಶಂಕ್ರಣ್ಣ ತಮ್ಮ ತೋಟದ ಮನೆಯಲ್ಲಿ ಆ’ತ್ಮಹ’ತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಈಗ ಸಾಕಷ್ಟು ವಾದ ವಿವಾದ ಚರ್ಚೆಗಳು ನಡೆಯುತ್ತಿವೆ. ಇದರಲ್ಲಿ ತಪ್ಪು ಯಾರದು ಸರಿ ಯಾರದು ಎಂದು ಅಧಿಕೃತವಾಗಿ ತಿಳಿದುಬಂದಿಲ್ಲ. ಆದರೆ ಶಂಕ್ರಣ್ಣ ಎನ್ನುವ ಮುಗ್ಧ ಜೀವಿಯ ಪ್ರಾಣ ಹೋಗಿರುವುದು ಸತ್ಯ. ಈ ಕುರಿತಂತೆ ಮೇಘನಾ ಒಂದು ಕಡೆಯಲ್ಲಿ ನಾನು ಗರ್ಭಿಣಿ ನನ್ನ ಯಜಮಾನರಿಗೆ ಹೀಗೆ ಆಗಿದ್ದು ಅವರ ತಾಯಿ ಯಿಂದ ಎಂಬುದಾಗಿ ಶಂಕ್ರಣ್ಣನ ತಾಯಿ ಕಡೆಗೆ ಬೆರಳು ಮಾಡಿ ತೋರಿಸುತ್ತಿದ್ದಾರೆ.
ಆದರೆ ಶಂಕ್ರಣ್ಣನ ತಾಯಿ ಹೇಳುತ್ತಿರುವ ವಿಚಾರವೇ ಬೇರೆ. ಮದುವೆಯಾಗಿ ಮನೆಗೆ ಬಂದಾಗಿನಿಂದಲೂ ಕೂಡ ಮೇಘನಾ ರವರಿಗೆ ಶಂಕ್ರಣ್ಣನ ತಾಯಿ ಮನೆಯಲ್ಲಿ ಇರುವುದು ಇಷ್ಟವಿರಲಿಲ್ಲವಂತೆ. ಇದಕ್ಕಾಗಿಯೇ ಆಸ್ತಿಯನ್ನು ಮಾರಾಟ ಮಾಡಿ ಮೈಸೂರಿಗೆ ಹೋಗಿ ಮನೆಯನ್ನು ಖರೀದಿಸಿ ಸೆಟಲ್ ಆಗುವ ಕುರಿತಂತೆ ಪ್ರತಿದಿನ ಗಂಡನಿಗೆ ಕಿರು’ಕುಳವನ್ನು ನೀಡುತ್ತಿದ್ದರಂತೆ. ಈ ಕುರಿತಂತೆ ಮಾಧ್ಯಮಗಳ ಸಂದರ್ಶನದಲ್ಲಿ ಶಂಕ್ರಣ್ಣನ ತಾಯಿ ಹೇಳಿಕೊಂಡಿದ್ದಾರೆ.
ಕೇವಲ ಎಷ್ಟು ಮಾತ್ರವಲ್ಲದೆ ಯಾವನೋ ಜೊತೆಗೆ ಆಗಾಗ ಫೋನ್ನಲ್ಲಿ ಮಾತನಾಡುತ್ತಲೇ ಇರುತ್ತಾರೆ ಆಕೆಗೆ ಬೇರೆ ಸಂಬಂಧ ಇದೆ ಎಂಬುದಾಗಿ ಕೂಡ ಶಂಕ್ರಣ್ಣನ ತಾಯಿ ಹೇಳಿಕೊಂಡಿದ್ದಾರೆ. ಮನೆಯಲ್ಲಿ ತನ್ನ ಕೋಣೆಯಲ್ಲಿ ರಾಶಿಗಟ್ಟಲೆ ಮೇಕಪ್ ವಸ್ತುಗಳನ್ನು ಇಟ್ಟುಕೊಳ್ಳುತ್ತಾಳೆ. ಇವರಿಂದಾಗಿಯೇ ನನ್ನ ಮಗ ಜೀವವನ್ನು ಕಳೆದುಕೊಂಡಿದ್ದಾನೆ ಎನ್ನುವುದಾಗಿ ಶಂಕ್ರಣ್ಣನ ತಾಯಿ ಹೇಳಿದ್ದಾರೆ. ಪೊಲೀಸ್ ತನಿಖೆ ಈಗಾಗಲೇ ಭರದಿಂದ ಸಾಗುತ್ತಿದ್ದು ಯಾರ ತಪ್ಪು ಯಾತಕ್ಕಾಗಿ ಶಂಕ್ರಣ್ಣ ಈ ತರಹ ಮಾಡಿಕೊಂಡರು ಎನ್ನುವುದನ್ನು ತಿಳಿಯಬೇಕಾಗಿದೆ.
ಈ ಪ್ರಕರಣದ ಕುರಿತಂತೆ ನಿಮ್ಮಲ್ಲಿರುವ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸಲ್ಲಿ ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಶೇರ್ ಮಾಡಿಕೊಳ್ಳುವುದು ಮಾತ್ರ ಮರೆಯಬೇಡಿ.