ಬಾಕ್ಸಾಫೀಸ್ ನಲ್ಲಿ ಅಬ್ಬರಿಸಿದ ಜೇಮ್ಸ್; ಇಲ್ಲಿದೆ ನೋಡಿ ಚಿತ್ರದ ಸಂಪೂರ್ಣ ರಿವ್ಯೂ..!?
ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರವಾಗಿರುವ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಿದ್ದು ಅದ್ಭುತ ಪ್ರದರ್ಶನವನ್ನು ಯಶಸ್ವಿಯಾಗಿ ಕಾಣುತ್ತಿದೆ. ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಕೂಡ ಜೇಮ್ಸ್ ಚಿತ್ರ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಅವರ ಜನ್ಮದಿನದ ವಿಶೇಷವಾಗಿ ವಿಭಿನ್ನವಾಗಿ ಮೂಡಿ ಬಂದಿದ್ದು ಸಿನಿರಸಿಕರಿಗೆ ಫುಲ್ ಮೀಲ್ಸ್ ಮನರಂಜನೆಯನ್ನು ನೀಡಿದೆ ಎಂದರೆ ತಪ್ಪಾಗಲಾರದು.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರವಾಗಿರುವ ಜೇಮ್ಸ್ ಚಿತ್ರ ಬಾಕ್ಸಾಫೀಸ್ ನಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವುದು ಕನ್ಫರ್ಮ್ ಆಗಿದೆ. ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸೆಲೆಬ್ರೇಶನ್ ಕೂಡ ಮುಗಿಲುಮುಟ್ಟಿದೆ. ಚಿತ್ರದಲ್ಲಿ ಹಲವಾರು ವಿಷಯಗಳು ಪ್ರೇಕ್ಷಕರನ್ನು ಆಕರ್ಷಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂದಿನ ಲೇಖನಿಯಲ್ಲಿ ಚಿತ್ರದ ಕುರಿತಂತೆ ವಿಮರ್ಶೆಯನ್ನು ಮಾಡಲು ಹೊರಟಿದ್ದೇವೆ ತಪ್ಪದೇ ಲೇಖನಿಯನ್ನು ಕೊನೆಯವರೆಗೂ ಓದಿ.
ಮೊದಲನೇದಾಗಿ ಜೇಮ್ಸ್ ಚಿತ್ರವನ್ನು ಒಂದು ವಾಕ್ಯದಲ್ಲಿ ಹೇಳುವುದಾದರೆ ಕೆಟ್ಟ ಕೆಲಸಗಳನ್ನು ಮಾಡಲು ಹೊರಟಿರುವ ಕೆಟ್ಟವರಿಗೆ ಜೇಮ್ಸ್ ಶಿಕ್ಷಿಸುತ್ತಾನೆ ಎನ್ನುವುದು ಆಗಿದೆ. ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಂತೋಷನ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನು ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಆರ್ಮಿ ಆಫೀಸರ್ ಆಗಿ ಖಡಕ್ಕಾಗಿ ಮಿಂಚಿದ್ದಾರೆ. ಮೊದಲರ್ಧ ಎನ್ನುವುದು ಚಿತ್ರದ ಒಟ್ಟು ಸಾರಾಂಶದ ಮುನ್ನುಡಿಯಾಗಿದೆ ಎಂದರೆ ತಪ್ಪಾಗಲಾರದು. ಇಂಟರ್ವಲ್ ಬರುವತನಕ ಚಿತ್ರದ ಕುರಿತಂತೆ ಪ್ರೇಕ್ಷಕರಿಗೆ ಕುತೂಹಲವನ್ನು ಹೆಚ್ಚಿಸುವಂತೆ ಮಾಡುತ್ತಾರೆ ನಿರ್ದೇಶಕರು. ಬಹದ್ದೂರ್ ಚೇತನ್ ರವರ ನಿರ್ದೇಶನಕ್ಕೆ ಸಲಾಂ ಹೇಳಲೇಬೇಕು.
ಚರಣ್ರಾಜ್ ರವರ ಮ್ಯೂಸಿಕ್ ಕೂಡಾ ಸಿನಿಮಾದಲ್ಲಿ ಪ್ರಾರಂಭದಿಂದ ಕೊನೆಯವರೆಗೂ ನಮ್ಮನ್ನು ಕಾಡುತ್ತಲೇ ಇರುತ್ತದೆ. ರವಿವರ್ಮ ಅವರ ಸಾಹಸ ಸಂಯೋಜನೆ ಎನ್ನುವುದು ಕೂಡ ಚಿತ್ರದ ಪ್ರಮುಖ ಜೀವಾಳವಾಗಿದೆ ಎಂದರೆ ತಪ್ಪಾಗಲಾರದು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಪಕ್ಕಾ ಆಕ್ಷನ್ ಅವತಾರದಲ್ಲಿ ಕಾಣಬೇಕೆಂದು ಅಂದುಕೊಂಡಿದ್ದ ಅಭಿಮಾನಿಗಳಿಗೆ ಜೇಮ್ಸ್ ಚಿತ್ರ ಹಬ್ಬದ ಊಟ ಎಂದರೆ ತಪ್ಪಾಗಲಾರದು. ಬಹುತೇಕ ರಾಜಕುಮಾರ ಚಿತ್ರದ ತಾರಾಬಳಗವೇ ಜೇಮ್ಸ್ ಚಿತ್ರದಲ್ಲಿ ಕೂಡ ಇದೆ.
ಹೌದು ರಂಗಾಯಣ ರಘು ನಾಯಕಿಯಾಗಿ ಪ್ರಿಯಾ ಆನಂದ್ ಶರತ್ ಕುಮಾರ್ ಚಿಕ್ಕಣ್ಣ ದತ್ತಣ್ಣ ಹೀಗೆ ಹಲವಾರು ಜನರು ಕಾಣಿಸಿಕೊಳ್ಳುತ್ತಾರೆ. ಸಿನಿಮಾದಲ್ಲಿ ಸ್ನೇಹದ ಕುರಿತಂತೆ ಕೂಡ ಪ್ರಬಲ ವಾದಂತಹ ಸಂದೇಶ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಚಿತ್ರದಲ್ಲಿ ಪ್ರಮುಖವಾದ ಅಂಶವೆಂದರೆ ಮೂರುಜನ ಅಣ್ಣಾವ್ರ ಮಕ್ಕಳು ಒಂದೇ ಸಿನಿಮಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ.
ಒಟ್ಟಾರೆಯಾಗಿ ಜೇಮ್ಸ್ ಚಿತ್ರವನ್ನು ಆಕ್ಷನ್ ಪ್ರಿಯರು ಖಂಡಿತವಾಗಿ ಸಾಕಷ್ಟು ಇಷ್ಟಪಡುತ್ತಾರೆ ಎಂದರೆ ತಪ್ಪಾಗಲಾರದು. ಒಳ್ಳೆಯದು-ಕೆಟ್ಟದ್ದು ಎನ್ನುವುದಕ್ಕಿಂತ ಆ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರವಾಗಿರುವುದರಿಂದ ಪ್ರತಿಯೊಬ್ಬ ಕನ್ನಡಿಗನು ಈ ಚಿತ್ರವನ್ನು ನೋಡುವ ಮೂಲಕ ಅವರ ದಿನವನ್ನು ಆಚರಣೆ ಮಾಡಬೇಕಾಗಿರುವುದು ಅತ್ಯವಶ್ಯಕವಾಗಿದೆ. ಇದೇ ಕೊನೆಯ ಬಾರಿಗೆ ನಾವು ಪುನೀತ್ ರಾಜಕುಮಾರ್ ಅವರನ್ನು ದೊಡ್ಡ ಪರದೆ ಮೇಲೆ ನೋಡುತ್ತಿರುವುದರಿಂದ ಖಂಡಿತವಾಗಿ ಪ್ರತಿಯೊಬ್ಬರೂ ಕೂಡ ಈ ಚಿತ್ರ ಭಾವನಾತ್ಮಕವಾಗಿ ಸಾಕಷ್ಟು ಕೊನೆಯಲ್ಲಿ ಕಣ್ಣೀರು ತರಿಸುವುದು ಗ್ಯಾರಂಟಿ. ಚಿತ್ರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕೂಡ ಚಿತ್ರವನ್ನು ನೋಡಿದ ನಂತರ ನಮ್ಮೊಂದಿಗೆ ಹಂಚಿಕೊಳ್ಳಿ.
ಭರ್ಜರಿಯಾದ ಕಾರ್ ಚೇಸಿಂಗ್ ದೃಶ್ಯದ ಮೂಲಕ ನಮ್ಮೆಲ್ಲರ ಪ್ರೀತಿಯ ಪುನೀತ್ ರಾಜ್ಕುಮಾರ್ ಎಂಟ್ರಿ ನೀಡುತ್ತಾರೆ. ಈ ಎಂಟ್ರಿ ಸಕ್ಕತ್ ಮಾಸ್ ಆಗಿದೆ. ಚಿತ್ರದ ಮೊದಲ ದೃಶ್ಯವೇ ಕಾರ್ ಚೇಸಿಂಗ್ ಆಗಿರುವುದರಿಂದ ಪ್ರೇಕ್ಷಕರಿಗೆ ಥ್ರಿಲ್ ಎನಿಸುತ್ತದೆ. ಅಭಿಮಾನಿಗಳು ಫುಲ್ ಖುಷ್ ಆಗುತ್ತಾರೆ ಅಪ್ಪು ಅಭಿನಯದ ‘ಜೇಮ್ಸ್’ ಬಿಡುಗಡೆಗೂ ಮುನ್ನ ‘ಟ್ರೇಡ್ ಮಾರ್ಕ್’ ಸಾಂಗ್ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿತ್ತು. ಆ ಹಾಡು ಕೂಡ ಸಿನಿಮಾದ ಆರಂಭದಲ್ಲೇ ಬರುತ್ತದೆ. ಇದು ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆ ಕಿಕ್ ನೀಡುತ್ತದೆ.ಫಸ್ಟ್ಹಾಫ್ನಲ್ಲಿ ಸಂತೋಷ್ ಎಂಬ ಪಾತ್ರದಲ್ಲಿ ಪುನೀತ್ ರಾಜಕುಮಾರ್ ಕಾಣಿಸಿಕೊಂಡಿದ್ದಾರೆ. ಸೆಕ್ಯುರಿಟಿ ಏಜೆನ್ಸಿಯ ಸಿಬ್ಬಂದಿಯಾಗಿ ಅವರ ಪಾತ್ರ ಪರಿಚಯಿಸಿಕೊಳ್ಳುತ್ತಾರೆ ವಿಲನ್ಗಳ ದರ್ಶನ ಕೂಡ ಆಗುತ್ತದೆ.
ಅಪ್ಪು ಅಭಿನಯದ ‘ಜೇಮ್ಸ್’ ಚಿತ್ರದ ಮೊದಲ ಭಾಗದಲ್ಲಿ ನಾಯಕ-ನಾಯಕಿಯ ಲವ್ ಸ್ಟೋರಿ ಹೆಚ್ಚು ಹೈಲೈಟ್ ಆಗಿದ್ದು. ಪ್ರಿಯಾ ಆನಂದ್ ಮತ್ತು ಪುನೀತ್ ರಾಜ್ಕುಮಾರ್ ಕಾಂಬಿನೇಷನ್ ಚೆನ್ನಾಗಿ ಮೂಡಿಬಂದಿದೆ.ಅಪ್ಪು ಚಿತ್ರ ಎಂದರೆ ಅಭಿಮಾನಿಗಳು ಸಹಜವಾಗಿಯೇ ಆ್ಯಕ್ಷನ್ ಬಯಸುತ್ತಾರೆ. ‘ಜೇಮ್ಸ್’ ಚಿತ್ರದಲ್ಲಿ ಫೈಟಿಂಗ್ ದೃಶ್ಯಗಳಿಗೆ ಕೊರತೆ ಇಲ್ಲ. ಅಪ್ಪು ಅವರ ಭರ್ಜರಿ ಆ್ಯಕ್ಷನ್ ಸೀನ್ಗಳಿವೆ. ನೋಡಿ ಕಣ್ಣುತುಂಬಿಕೊಳ್ಳಿ
ಚಿತ್ರದ ಕೊನೆಯಲ್ಲಿ ಒಂದು ಅದ್ಬುತ ಟ್ವಿಸ್ಟ್ ಇದೇ ಆ ಟ್ವಿಸ್ಟ್ ಏನು ಎಂಬುದನ್ನು ಚಿತ್ರಮಂದಿರದಲ್ಲಿಯೇ ಹೋಗಿ ಚಿತ್ರ ನೋಡಿ ಚಿತ್ರ 100 ದಿನ ಆಚರಿಸುತ್ತಿರುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿದೆ
ಈ ಖುಷಿಯ ನಡುವೆ ಅಪ್ಪು ನಮ್ಮ ಜೊತೆ ಇದ್ದರೆ ಆ ಖುಷಿಗೆ ಹೇಳತೀರದು ಏನೇ ಇರಲಿ ಅಭಿಮಾನಿಗಳೇ ಅಂದು ಅಪ್ಪು ನಮ್ಮನ್ನು ಅಗಲಿದಗಾ ಇಡೀ ದೇಶಕ್ಕೆ ಆಗಿದ್ದ ನೋವು ಇಂದು ಬಿಡುಗಡೆಯದ ಜೇಮ್ಸ್ ಬಿಡುಗಡೆಯ ಸಂಭ್ರಮಾಚರಣೆಯ ಮೂಲಕ ಅಪ್ಪು ಅವರ ಆತ್ಮಕ್ಕೆ ಶಾಂತಿ ಕೊರೋನ ಆ ಕುಟುಂಬಕಕ್ಕೆ ದೇವರು ಮತ್ತಷ್ಟು ಶಕ್ತಿ ಕೊಡಲಿ ಎಂದು ಕೇಳಿಕೊಳ್ಳೋಣ ಜೇಮ್ಸ್ ಬಿಡುಗಡೆಯದ ಎಲ್ಲ ಸೆಂಟರ್ ನಲ್ಲೂ ಸಂಪೂರ್ಣ ಹೌಸ್ ಫುಲ್ ಆಗಿದೆ ಎಲ್ಲ ಚಿತ್ರಮಂದಿರದಲ್ಲೂ ಅಭಿಮಾನಿಗಳು ಅಪ್ಪು ಹಬ್ಬ ಮಾಡ್ತಾ ಇದ್ದಾರೆ ನೀವು ನಿಮ್ಮ ಹತ್ತಿರದ ಚಿತ್ರ ಮಂದಿರಕ್ಕೆ ಹೋಗಿ ಚಿತ್ರ ನೋಡಿ ನಿಮಗೆ ಇಷ್ಟಾಗಿದಲ್ಲಿ ಕಾಮೆಂಟ್ ಮೂಲಕ ನಿಮ್ಮ ಅನಿಸಿಕಿ ತಿಳಿಸಿ