ಮೆಗಾಸ್ಟಾರ್ ಸಲ್ಮಾನ್ ಖಾನ್ ರವರು ಕೇವಲ ಬಾಲಿವುಡ್ ಚಿತ್ರರಂಗದಲ್ಲಿ ಮಾತ್ರವಲ್ಲದೆ ದೇಶ-ವಿದೇಶಗಳಲ್ಲಿ ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ನೆಚ್ಚಿನ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಎಂದರೆ ತಿಳಿಯದವರು ಇಡೀ ಭಾರತದಲ್ಲೇ ಇಲ್ಲ ಎಂದು ಹೇಳಬಹುದಾಗಿದೆ. ಒಂದು ಕಾಲದಲ್ಲಿ ಬಾಲಿವುಡ್ ನ ಬ್ಯಾಡ್ ಬಾಯ್ ಎನ್ನುವುದಾಗಿ ಕರೆಸಿಕೊಂಡಿದ್ದ ಸಲ್ಮಾನ್ ಖಾನ್ ರವರು ಇತ್ತೀಚಿನ ದಿನಗಳಲ್ಲಿ ಎಲ್ಲರ ಭಾಯ್ ಆಗಿ ಕಾಣಿಸಿಕೊಂಡಿದ್ದಾರೆ.
ತನ್ನ ಆದಾಯದಲ್ಲಿ 65% ಗೂ ಅಧಿಕ ಹಣವನ್ನು ಬಡವರ ಹಾಗೂ ಸಹಾಯ ಕೇಳಿಕೊಂಡು ಬರುವವರು ಕಲ್ಯಾಣಕ್ಕಾಗಿ ವಿನಿಯೋಗಿಸುತ್ತಿರುವ ಏಕೈಕ ನಟ ಎಂದು ಹೇಳಬಹುದಾಗಿದೆ. ನಿಜಕ್ಕೂ ಕೂಡ ಸಲ್ಮಾನ್ ಖಾನ್ ಅವರ ನಡವಳಿಕೆ ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಬದಲಾವಣೆ ಕಂಡಿದ್ದು ಪ್ರತಿಯೊಬ್ಬ ಅಭಿಮಾನಿ ಕೂಡ ಅವರ ಕಾರ್ಯವನ್ನು ನೋಡಿ ಕಾಲರ್ ಎತ್ತಿಕೊಂಡು ಓಡಾಡುತ್ತಿದ್ದಾರೆ. ಒಬ್ಬ ನಟನಾಗಿ ತನ್ನ ಜವಾಬ್ದಾರಿಯನ್ನು ಅರಿತುಕೊಂಡು ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿರುವ ಸಲ್ಮಾನ್ ಖಾನ್ ರವರ ಪ್ರಯತ್ನಕ್ಕೆ ನಿಜಕ್ಕೂ ಕೂಡ ನಾವು ಹ್ಯಾಟ್ಸಾಫ್ ಹೇಳಲೇಬೇಕು.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸಲ್ಮಾನ್ ಖಾನ್ ರವರು ಫಿಟ್ನೆಸ್ ಐಕಾನ್ ಎಂಬುದಾಗಿ ಕರೆಯಲ್ಪಡುತ್ತಾರೆ. ಪ್ರತಿಯೊಂದು ಜಿಮ್ಮಿನಲ್ಲಿ ಕೂಡ ಸಲ್ಮಾನ್ ಖಾನ್ ರವರ ಫೋಟೋ ಕಂಡಿತವಾಗಿ ಇದ್ದೇ ಇರುತ್ತದೆ. ವಯಸ್ಸು 50 ದಾಟಿದ್ದರೂ ಕೂಡ ಇನ್ನೂ ಕೂಡ ತಮ್ಮ ದೇಹದಾರ್ಡ್ಯತೆಯನ್ನು ಸದೃಢವಾಗಿ ಇಟ್ಟುಕೊಂಡಿದ್ದಾರೆ. ನಿಜಕ್ಕೂ ಕೂಡ ದೈಹಿಕ ದಾರ್ಡ್ಯತೆಯ ವಿಚಾರದಲ್ಲಿ ಇಂದಿನ ಯುವ ನಟರು ಕೂಡ ನಾಚಿಸುವಂತೆ ಮೆಂಟೇನ್ ಮಾಡಿಕೊಂಡು ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸಲ್ಮಾನ್ ಖಾನ್ ರವರು ಸಾಕಷ್ಟು ಟ್ರೋಲ್ ಗೆ ಒಳಗಾಗುತ್ತಿದ್ದಾರೆ.
ಹೌದು ಇದಕ್ಕೆ ಕಾರಣವಾಗಿರುವುದು ಕೂಡ ಅವರ ಇತ್ತೀಚಿನ ದೈಹಿಕ ರೂಪುರೇಷೆ. ಇತ್ತೀಚಿನ ಕೆಲವು ಫೋಟೋಗಳಲ್ಲಿ ಸಲ್ಮಾನ್ ಖಾನ್ ರವರು ದಪ್ಪವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿಯೇ ಕೆಲವು ನೆಟ್ಟಿಗರು ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಸದ್ಯಕ್ಕೆ ಸಲ್ಮಾನ್ ಖಾನ್ ರವರ ಟೈಗರ್ 3 ಚಿತ್ರ ಸಾಕಷ್ಟು ಸುದ್ದಿ ಯಲ್ಲಿದ್ದು ಅಭಿಮಾನಿಗಳು ಟೈಗರ್ 3 ಚಿತ್ರದ ಬಿಡುಗಡೆಗಾಗಿ ಎದುರುನೋಡುತ್ತಿದ್ದಾರೆ.
