ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕನ್ನಡತಿ ರಶ್ಮಿಕಾ ಮಂದಣ್ಣ ರವರನ್ನು ನಟ ರಣಬೀರ್ ಕಪೂರ್ ಏನೆಂದು ಕರೆಯುತ್ತಾರೆ ಗೊತ್ತೇ? ರಣಬೀರ್ ಕರೆಯುದನ್ನು ನೋಡಿ ನಾಚಿ ನೀರಾದ ರಶ್ಮಿಕಾ ಮಂದಣ್ಣ..!

ಸುದ್ದಿ

ಕೊಡಗಿನ ಸುಂದರ ಕುವರಿ, ಕನ್ನಡಿಗರ ಕೃಶ್, ನ್ಯಾಷನಲ್ ಕೃಶ್, ಹೀಗೆ ಹಲವು ಹೆಸರುಗಳಿಂದ ಭಾರತದಾದ್ಯಂತ ಹೆಸರು ಮಾಡಿರುವ ಏಕೈಕ ನಟಿ ಎಂದರೆ ಅದು ರಶ್ಮಿಕಾ ಮಂದಣ್ಣ. ಕನ್ನಡ ಚಿತ್ರರಂಗದಲ್ಲಿ ತಮ್ಮ ಸಿನಿ ಜರ್ನಿ ಶುರು ಮಾಡಿ ಕನ್ನಡ, ತಮಿಳು, ತೆಲುಗು, ಹಿಂದಿ ನಲ್ಲಿ ಆರಂಭಿಸಿ ಈಗ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಒಬ್ಬ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ ಇಷ್ಟೆಲ್ಲ ಜನಪ್ರಿಯತೆ ಹೊಂದಿರೋದು ನಮಗೆಲ್ಲ ಹೇಮ್ಮೆಯ ವಿಷಯ. ಇನ್ನು ರಶ್ಮಿಕಾ ಆಗಾಗ ಕೆಲವು ವಿಚಾರಗಳಿಗೆ ಸುದ್ದಿಯಾಗುತ್ತಲೆ ಇರುತ್ತಾರೆ.

ನಟಿ ರಶ್ಮಿಕಾ ಮಂದಣ್ಣ 2016 ರಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ನಂತರ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಚಮಕ್ ಚಿತ್ರದಲ್ಲಿ ನಟಿಸಿ ಟಾಲಿವುಡ್ ಗೆ ಹಾರಿದರು.

ಒಂದೆರಡು ಚಿತ್ರಗಳಲ್ಲಿ ನಟಿಸಿ ಮತ್ತೆ ಕನ್ನಡದಲ್ಲಿ ಅಂಜನೀಪುತ್ರ, ಯಜಮಾನ, ಮತ್ತು ಪೊಗರು ಸಿನೆಮಾಗಳಲ್ಲಿ ನಟಿಸಿದ ನಂತರ 4 ಚಿತ್ರಗಳಲ್ಲಿ ನಟಿಸಿ. ಅಲ್ಲು ಅರ್ಜುನ್ ಅವರ ಪುಷ್ಪ ಸಿನೆಮಾದಲ್ಲಿ ನಟಿಸಿ ದೊಡ್ಡ ಮಟ್ಟದಲ್ಲಿ ಯಶಸ್ಸುನ್ನು ಕಂಡರು. ಪುಷ್ಪ ಚಿತ್ರದ ಯಶಸ್ಸುನಿಂದ ಬಾಲಿವುಡ್ ನಲ್ಲಿ ಅವರಿಗೆ ಸಾಲು ಸಾಲು ಆಫರ್ಗಳು ತಂದುಕೊಟ್ಟಿತು.

ಸಿನೆಮಾ ಕ್ಷೇತ್ರದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಿದ ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲಿ ಸಿದ್ದಾರ್ಥ್ ಮಲೋತ್ರ ಅವರೊಡನೆ ಮಿಷನ್ ಮಜ್ನ್ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಡನೆ ಒಂದು ಸಿನೆಮಾ. ಇನ್ನು ಮೂರು ಹಿಂದಿ ಸಿನೆಮಾದಲ್ಲಿ ಒಪ್ಪಿಕೊಂಡು ಒಂದು ಹಂತದ ಚಿತ್ರಿಕಾರಣ ಮುಗಿಸಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಅವರು ಸಂದೀಪ್ ವಂಗಾ ಅವರ ನಿರ್ದೇಶನದಲ್ಲಿ ರಣಬೀರ್ ಕಪೂರ್ ಅವರು ನಾಯಕರಾಗಿರುವ ಅನಿಮಲ್ ಚಿತ್ರದಲ್ಲಿ ಅಭಿನಯಿಸುತ್ತಿರುವುದು ವಿಷಯ ನಮಗೆಲ್ಲ ಗೊತ್ತೇ ಇದೇ.

ಈಗಾಗಲೇ ಮನಾಲಿಯಲ್ಲಿ ಒಂದು ಹಂತದ ಶೋಟಿಂಗ್ ಮುಗಿಸಿದ್ದು ರಶ್ಮಿಕಾ ಮಂದಣ್ಣ. ನಟಿ ರಶ್ಮಿಕಾ ಅವರಿಗೆ ಎಲ್ಲಾ ಭಾಷೆಯ ಚಿತ್ರರಂಗದಲ್ಲಿ ಬೇಡಿಕೆ ತುಂಬಾ ಹೆಚ್ಚಾಗಿದೆ. ಇತ್ತೀಚಿಗೆ ಅವರು ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು, ಅದರಲ್ಲಿ ರಣಬೀರ್ ಕಪೂರ್ ಅವರ ಬಗ್ಗೆ ಮಾತನಾಡಿದ್ದು “ರಣಬೀರ್ ಕಪೂರ್ ಅವರು ತುಂಬಾ ಒಳ್ಳೆಯ ಮನಸ್ಸನ್ನು ಹೊಂದಿದ ವ್ಯಕ್ತಿ” ನಾನು ಮೊದಲು ಬಾರಿ ಅವರನ್ನು ಭೇಟಿ ಆದಾಗ ನನಗೆ ತುಂಬಾ ಬಯವಾಗಿತ್ತು.

ಭೇಟಿಯಾದ 10ನಿಮಿಷದಲ್ಲೇ ಅವರೊಡನೆ ಆತ್ಮೀಯತೆ ಬೆಳೆಯಿತು. ಇಡೀ ಇಂಡಸ್ಟ್ರಿಯಲ್ಲಿ ಅವರೋಬ್ಬರು ಮಾತ್ರ ನನ್ನನ್ನು ಮೇಡಂ ಎಂದು ಕರೆಯುತ್ತಾರೆ. ಎಂದು ಹೇಳಿದ್ದಾರೆ ರಶ್ಮಿಕಾ ಮಂದಣ್ಣ. ಈ ಮೂಲಕ ರಣಬೀರ್ ಕಪೂರ್ ಅವರು ತಮ್ಮನ್ನು ಏನೆಂದು ಕರೆಯುತ್ತಾರೆ ಎನ್ನುವುದನ್ನು ತಿಳಿಸಿದ್ದಾರೆ.
ಏನೇ ಅಗಲಿ ಕನ್ನಡ ಮಣ್ಣಿನ ಹೆಣ್ಣು ಇಷ್ಟು ದೊಡ್ಡ ಮಟ್ಟಿಗೆ ಬೆಳೆಯುತ್ತೆ ಅಂದರೆ ಅವರು ಪಟ್ಟ ಶ್ರಮ, ಅವರ ಶ್ರುದ್ದೆ, ಮಾಡುವ ಕೆಲಸದಲ್ಲಿ ಛಲ ಇಷ್ಟು ಇದ್ದಾರೆ ಜೀವನದಲ್ಲಿ ಏನು ಬೇಕಾದರು ಸಾಧಿಸಬಹುದು ಎನ್ನುವುದಕ್ಕೆ ನಟಿ ರಶ್ಮಿಕಾ ಮಂದಣ್ಣ ನೆ ಸಾಕ್ಷಿ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *