ಕನ್ನಡದ ಅತ್ಯಂತ ಶ್ರೀಮಂತ ಹಾಗೂ ದೊಡ್ಡಮಟ್ಟದ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಬಿಗ್ ಬಾಸ್ ನಲ್ಲಿ ಒಮ್ಮೆ ಹೋಗಿ ಬಂದರೆ ಸಾಕು ಅವರಿಗೆ ಖಂಡಿತವಾಗಿ ಜನಪ್ರಿಯತೆ ಹಾಗೂ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎನ್ನುವುದು ಸಾಬೀತಾಗಿರುವ ಅಂಶ. ಈಗಾಗಲೇ ಬರೋಬ್ಬರಿ 8 ಸೀಸನ್ ಗಳು ಕನ್ನಡದ ಬಿಗ್ ಬಾಸ್ ನಲ್ಲಿ ನಡೆದಿವೆ. 9ನೇ ಸೀಸನ್ ಕೂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ನಡೆಯಲಿದೆ.
ಹಾಗಿದ್ದರೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಯಾರೆಲ್ಲಾ ಸ್ಪರ್ಧಿಯಾಗಿ ಮನೆಯೊಳಗೆ ಕಾಲಿಡಲಿದ್ದಾರೆ ಎಂಬುದನ್ನು ತಿಳಿಯೋಣ. ಮೊದಲನೇದಾಗಿ ಇತ್ತೀಚಿಗೆ ಹಲವಾರು ಕಾರಣಗಳಿಂದಾಗಿ ವಿವಾ’ದಗಳಲ್ಲಿ ಸಿಲುಕಿಕೊಂಡಿರುವ ಲಾಯರ್ ಜಗದೀಶ್ ರವರು ಬಿಗ್ ಬಾಸ್ ಮನೆಯನ್ನು ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.ಆ ದಿನಗಳು ಖ್ಯಾತಿಯ ನಟ ಹಾಗೂ ಸಾಮಾಜಿಕ ಹೋರಾಟಗಾರ ನಾಗಿರುವ ಚೇತನ್ ಕುಮಾರ್ ರವರು ಕೂಡ ಬಿಗ್ಬಾಸ್ ಮನೆಗೆ ಕಾಲಿಡಲಿದ್ದಾರೆ ಎಂಬ ಸುದ್ದಿ ಇದೆ.
ಸೋಶಿಯಲ್ ಮೀಡಿಯಾ ದ ಸೆನ್ಸೇಷನಲ್ ಹುಡುಗಿ ಆಗಿರುವ ಸೋನು ಶ್ರೀನಿವಾಸಗೌಡ ಕೂಡ ಸಂಭಾವ್ಯರ ಪಟ್ಟಿಯಲ್ಲಿದ್ದಾರೆ. ಆದರೆ ಇವರು ನೆಟ್ಟಿಗರಿಂದ ಹೊಗಳಿಸಿಕೊಂಡಿದ್ದಕ್ಕಿಂತ ತೆಗಳಿಸಿಕೊಂಡಿದ್ದೇ ಜಾಸ್ತಿ. ಜೆಡಿಎಸ್ ಪಕ್ಷದ ಕಾರ್ಯಕರ್ತರು ಆಗಿರುವ ನಜ್ಮಾ ನಜೀರ್ ಕನ್ನಡ ಚಿತ್ರರಂಗದ ಖ್ಯಾತ ನಟಿ ಪ್ರೇಮಾ ರವರು ಕಲರ್ಸ್ ಕನ್ನಡ ವಾಹಿನಿಯ ಮಜಾಭಾರತ ಕಾರ್ಯಕ್ರಮದ ರಾಘವೇಂದ್ರ ಕನ್ನಡ ನಟ ಹಾಗೂ ರಾಪರ್ ಮ್ಯೂಸಿಷಿಯನ್ ಆಗಿರುವ ಅಲೋಕ್. ನಟಿ ವಿಜಯಲಕ್ಷ್ಮಿ. ಕನ್ನಡ ನಾಡು-ನುಡಿಯ ಕುರಿತಂತೆ ಸದಾ ಮುಂದೆ ಬಂದು ಹೋರಾಟ ಮಾಡುವ ರೂಪೇಶ್ ರಾಜಣ್ಣ ರವರು ಕೂಡ ಬರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಾಂಗ್ರೆಸ್ ಪಕ್ಷದ ಹೆಸರಾಂತ ಮುಖಂಡರೊಬ್ಬರು ಕೂಡ ಬರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮೂಲಗಳ ಪ್ರಕಾರ ಅದು ಡಿಕೆ ಶಿವಕುಮಾರ್ ಎಂಬ ಮಾತುಗಳು ಕೂಡ ಇವೆ. ಈಗಿರುವ ಪರಿಸ್ಥಿತಿಗಳನ್ನು ನೋಡಿಕೊಂಡು ಅತಿಶೀಘ್ರದಲ್ಲೇ ಕಾರ್ಯಕ್ರಮವನ್ನು ಆರಂಭಿಸಲಿದ್ದೇವೆ ಎಂಬುದಾಗಿ ವಾಹಿನಿಯ ಮುಖ್ಯಸ್ಥರಾಗಿರುವ ಪರಮೇಶ್ವರ್ ಗುಂಡ್ಕಲ್ ಅವರು ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮ ಯಾವಾಗ ಪ್ರಾರಂಭವಾಗುತ್ತದೆ ಎಂಬುದಾಗಿ ನೆಚ್ಚಿನ ವೀಕ್ಷಕರು ಕಾತರರಾಗಿದ್ದಾರೆ.