ಬ್ರೇಕಿಂಗ್​ ನ್ಯೂಸ್​ ನೀಡಿದ ‘ಹೊಂಬಾಳೆ ಫಿಲ್ಮ್ಸ್​’: ಯುವ ರಾಜ್​ಕುಮಾರ್​ ಜತೆ ಹೊಸ ಸಿನಿಮಾ ಘೋಷಣೆ… ಅಪ್ಪು ಅಭಿಮಾನಿಗಳು ಫುಲ್ ಖುಷ್..!?

ಸುದ್ದಿ

ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಹಲವು ಸಾಧನೆಗಳ್ಳನು ಮಾಡುತ್ತಿದೆ ಯಶ್ ಅಭಿನಯದ ಕೆಜಿಎಫ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರದಿಂದ ವಿಶ್ವದಾದ್ಯಂತ ಖ್ಯಾತಿ ಪಡೆದಿರುವ ಈ ನಿರ್ಮಾಣ ಸಂಸ್ಥೆ ಈ ಹೊಸ ಬ್ರೇಕಿಂಗ್ ನ್ಯೂಸ್ ಹೊರಹಾಕಿದೆ. ಹಿರಿಯ ನಟ ರಘುವೇಂದ್ರ ರಾಜಕುಮಾರ್ ಅವರ ಎರಡನೇ ಮಗ ಯುವ ರಾಜಕುಮಾರ್ ಮತ್ತು ಸ್ಟಾರ್ ನಿರ್ದೇಶಕ ಸಂತೋಷ ಆನಂದ್ ರಾಮ್ ಜೊತೆ ಸಿನಿಮಾ ಮಾಡಲು ನಿರ್ಮಾಪಾಕ ವಿಜಯ್ ಕಿರಾಗಂದೂರ್ ವೇದಿಕೆ ಸಜ್ಜಗಿದೆ.
ಈ ಬಗ್ಗೆ ನಿರ್ಮಾಣ ಸಂಸ್ಥೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಬೆಳ್ಳಿ ಪರದೆಗೆ ಹೊಸದೊಂದು ಪರ್ವ ‘ ಎಂಬ ಸ್ಲೋಗನ್ ಮೂಲಕ ಬಾರಿ ದೊಡ್ಡ ಸುದ್ದಿ ಮಾಡಿದೆ. ಹೊಸ ಚಿತ್ರದ ಅನ್ನೌನ್ಸ್ಮೆಂಟ್ ನಿನ್ನೆ ಚಿತ್ರತಂಡ ಸೂಚನೆ ನೀಡಿತ್ತು. ಅದೇನು ಎಂಬ ಕುತೂಹಲ ಅಭಿಮಾನಿಗಳ್ಳಲ್ಲಿ ಕಾದಿತ್ತು. ಆ ಕುತೂಹಲಕ್ಕೆ ಹೊಂಬಾಳೆ ಫಿಲ್ಮ್ಸ್ ಹಾಗೂ ನಿರ್ಮಾಪಕ ವಿಜಯ್ ಕಿರಗುಂದರ್ ಅವರ ಹಾಗೂ ಸ್ಟಾರ್ ನಿರ್ದೇಶಕ ಸಂತೋಷ ಆನಂದ್ ರಾಮ್ ಹಾಗೂ ಯುವ ರಾಜಕುಮಾರ್ ಅವರ ಜಂಟಿ ಯಲ್ಲಿ ಹೊಸ ಚಿತ್ರ ಸೆಟ್ಟೇರಲಿದೆ ಎಂಬ ಸುದ್ದಿ ಅಧಿಕೃತ ಅವಾಗಿದೆ.

ಪುನೀತ್ ರಾಜಕುಮಾರ್ ಮತ್ತು ಸಂತೋಷ ಆನಂದ್ ರಾಮ್ ಅವರ ಕಾಂಬಿನೇಶನ್ ನಲ್ಲಿ ರಾಜಕುಮಾರ, ಮತ್ತು ಯುವರತ್ನ, ಚಿತ್ರಗಳು ಮೂಡಿಬಂದುದ್ದು. ಈ ಎರಡು ಚಿತ್ರಗಳು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಅದೇ ಕಾಂಬಿನೇಶನ್ ನಲ್ಲಿ ಇನ್ನೊಂದು ಚಿತ್ರ ಸೆಟ್ಟೇರಬೇಕಿತ್ತು. ಅದು ಆಕ್ಷನ್ ತ್ರಿಲ್ಲರ್ ಚಿತ್ರ ಆಗಿರಲಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿತ್ತು. ಇನ್ನೇನು ಆ ಚಿತ್ರವನ್ನು ಅನೌನ್ಸ್ ಮೆಂಟ್ ಮಾಡೋ ಮುನ್ನವೇ ಅಪ್ಪು ಅವರು ನಮ್ಮಿಂದ ದೂರ ಆದರು. ಈಗ ಅದೇ ಕಥೆಗೆ ಯುವಪ್ರತಿಭೆ ಯುವ ರಾಜಕುಮಾರ್ ನಾಯಕನಗಿ ಆಯ್ಕೆಆಗಿದ್ದಾರೆ. ಎಂಬ ದೊಡ್ಡ ಸುದ್ದಿ ಹೊರಬಿದ್ದಿದೆ. ಇದರ ಬಗ್ಗೆ ಚಿತ್ರತಂಡ ಮತ್ತಷ್ಟು ಮಾಹಿತಿ ನಮಗೆ ಸಿಗಬೇಕಿದೆ.

ಅಭಿಮಾನದಿಂದ ಅಭಿನಯಕ್ಕಾಗಿ ಈ ನಮ್ಮ ಪಯಣ ಇರಲಿ ನಿಮ್ಮ ಅಪ್ಪುಗೆ. ಸ್ಲೋಗನ್ ಮುಂದುವರಿಯಲಿದೆ. ಯುವ ರಾಜಕುಮಾರ್ ಅವರನ್ನು ಹೊಂಬಾಳೆ ಫಿಲ್ಮ್ಸ್ ಹೆಮ್ಮೆಯಿಂದ ಕರುನಾಡಿಗೆ ಪರಿಚಯಿಸುತ್ತಿದೆ. ಎಂದು ಸೋಷಿಯಲ್ ಮೀಡಿಯಾ ದಲ್ಲಿ ಪೋಸ್ಟ್ ಮಾಡಲಾಗಿದೆ. ಯುವನ ಹೊಸ ಪೋಸ್ಟ್ ಕೂಡ ಬಿಡುಗಡೆಮಾಡಲಾಗಿದೆ. ಈ ಸಿಹಿ ಸುದ್ದಿ ಕೇಳಿ ಡಾ. ರಾಜಕುಮಾರ್ ಕುಟುಂಬ ಹಾಗೂ ಅಪ್ಪು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ಯುವ ರಾಜಕುಮಾರ್ ನಟನೆಯ ಮೊದಲ ಚಿತ್ರ ‘ಯುವ ರಣಧೀರ ಕಂಠೀರವ’ ಈ ಚಿತ್ರ ಚಿತ್ರಿಕಾರಣ ಮುಗಿದಿದ್ದು ಚಿತ್ರದ ಟೀಸರ್ ಬಿಡುಗಡೆಯಾಗಿ ಭಾರಿ ವೈರಲ್ ಆಗಿತ್ತು ಎಲ್ಲವು ಚಿತ್ರತಂಡ ಅಂದುಕೊಂಡತ್ತೇ ಆಗಿದ್ದಾರೆ ಇಷ್ಟೋತ್ತಿಗೆ ಬಿಡುಗಡೆಯಗಬೇಕಿತ್ತು. ನಾನಾ ಕಾರಣಗಳಿಂದ ಚಿತ್ರ ವಿಳಂಬವಾಗಿದೆ. ಹಾಗಾಗಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುವ ಚಿತ್ರವೇ ಅವರ ಮೊದಲ ಚಿತ್ರವಾಗಲಿದೆ. ಸ್ಟಾರ್ ನಿರ್ದೇಶಕ ಸಂತೋಷ ಆನಂದ್ ರಾಮ್ ಅವರು ರಾಜಕುಮಾರ, ಯುವರತ್ನ, ರಘುವೇಂದ್ರ ಸ್ಟೋರ್ಸ್,
ಆದಮೇಲೆ ಮತ್ತೆ ಹೊಂಬಾಳೆ ಫಿಲ್ಮ್ಸ್ ಜೊತೆಗೆ ಸಿನಿಮಾ ಮಾಡುತ್ತಿರುವುದು ಖುಷಿಯ ವಿಚಾರ. ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಅನಿಸಿಕೆ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *