ಭಾರತೀಯ ಚಿತ್ರರಂಗದಲ್ಲಿ ನಿಜವಾದ ಬಾಸ್ ಯಾರೂ ಅನ್ನೋದನ್ನ ಎಲ್ಲರಿಗೂ ಮುಟ್ಟಿ ಕೊಳ್ಳುವ ಹಾಗೆ ಮನವರಿಕೆ ಮಾಡಿಸಿದ ಗೂಗಲ್! ವಾವ್ ಗೂಗಲ್ ಪ್ರಕಾರ ಯಾರೂ ಗೊತ್ತಾ ಅಸಲಿ ಬಾಸ್!! ನೋಡಿ

ಸುದ್ದಿ

ನಮ್ಮ ಕನ್ನಡ ಚಿತ್ರರಂಗದಲ್ಲಿ ಆಗಿನಿಂದ ಈಗಿನವರೆಗೂ ಅನೇಕ ಕಲಾವಿದರನ್ನು ನೋಡಿದ್ದೇವೆ. ಈಗಿನ ಜೆನೆರೇಶನ್ ನಲ್ಲಿ ಬಹಳಷ್ಟು ಕಲಾವಿದರು ಅವರಿಗೆ ತಮ್ಮದೇ ಆದ ಫ್ಯಾನ್ ಬೇಸ್ ಇದೆ. ಎಲ್ಲಾ ಕಲಾವಿದರಿಗೂ ಅಭಿಮಾನಿ ಬಳಗ ಇದೆ, ಆದರೆ ಎಲ್ಲರೂ ಟಾಪ್ ನಟರಾಗಲು ಸಾಧ್ಯವಿಲ್ಲ, ನಂಬರ್ ಎನ್ನುವುದು ಇದ್ದೇ ಇರುತ್ತದೆ. ಕನ್ನಡ ಚಿತ್ರರಂಗದಲ್ಲಿ ಎಲ್ಲಾ ಹೀರೋಗಳಿಗೂ ಒಂದೊಂದು ಪಟ್ಟ ಇದೆ. ಅದರಲ್ಲೂ ಬಾಸ್ ಎನ್ನುವ ಪದಕ್ಕೆ ಬೇರೆಯದೇ ಗತ್ತಿದೆ ಎಂದರೆ ತಪ್ಪಾಗುವುದಿಲ್ಲ

ಬಾಸ್ ಎನ್ನಿಸಿಕೊಳ್ಳುವ ಆ ನಾಯಕ ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ. ಅದಕ್ಕೆ ಇದಿವ ಉತ್ತರವೂ ಸಿಕ್ಕಿದ್ದು, ಕನ್ನಡಚಿತ್ರರಂಗದ ಬಾಸ್ ಮತ್ಯಾರು ಅಲ್ಲ, ಡಿಬಾಸ್ ದರ್ಶನ್ ಅವರು. ದರ್ಶನ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಡಿಬಾಸ್ ಎಂದು ಕರೆಯುತ್ತಾರೆ. ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಕರೆಯುತ್ತಾರೆ. ದರ್ಶನ್ ಅವರೇ ಭಾರತ ಚಿತ್ರರಂಗದ ಬಾಸ್ ಎನ್ನುವ ವಿಚಾರ ಇಲ್ಲಿ ಅವರ ಅಭಿಮಾನಿಗಳಿಗೆ ಸಂತೋಷದ ವಿಚಾರ.

ಇದು ಕಾಲ್ಪನಿಕವಲ್ಲ, ನಿಜಕ್ಕೂ ದರ್ಶನ್ ಅವರೇ ಬಾಸ್ ಎನ್ನುವುದು ಪ್ರೂವ್ ಆಗಿದೆ. ದರ್ಶನ್ ಅವರ ಅಭಿಮಾನಿಯೊಬ್ಬ, ಬಾಸ್ ಆಫ್ ಇಂಡಿಯನ್ ಸಿನಿಮಾ ಎಂದು ಗೂಗಲ್ ಸರ್ಚ್ ಮಾಡಿದ್ದು, ಸರ್ಚ್ ರಿಸಲ್ಟ್ ನಲ್ಲಿ ದರ್ಶನ್ ಅವರ ವಿಕಿಪೀಡಿಯಾ ಪ್ರೊಫೈಲ್ ಬಂದಿದೆ. ಇದನ್ನು ನೋಡಿ, ಅಭಿಮಾನಿಗಳಿಗೆ ಇನ್ನಿಲ್ಲದ ಸಂತೋಷ ಉಂಟಾಗಿದೆ.

ಭಾರತ ಚಿತ್ರರಂಗದಲ್ಲಿ ಅನೇಕ ಇಂಡಸ್ಟ್ರಿಗಳಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಬಾಲಿವುಡ್ ಹಾಗೂ ಬೇರೆ ಚಿತ್ರರಂಗಗಳು ಸಹ ಇದೆ. ಆದರೆ ಆ ಎಲ್ಲಾ ಚಿತ್ರರಂಗಗಳನ್ನು ಮೀರಿ, ಡಿಬಾಸ್ ಅವರ ಹೆಸರು ಬಾಸ್ ಆಫ್ ಇಂಡಿಯನ್ ಸಿನಿಮಾ ಎಂದು ಸರ್ಚ್ ಮಾಡಿದಾಗ ಬಂದಿರುವುದು ನಿಜಕ್ಕೂ ಹೆಮ್ಮೆಯ ಮತ್ತು ಸಂತೋಷದ ವಿಚಾರ.ಇನ್ನು ಡಿಬಾಸ್ ಅವರ ಬಗ್ಗೆ ಹೇಳುವುದಾದರೆ ದರ್ಶನ್ ಅಂದ್ರೆ ಕರ್ನಾಟಕದಲ್ಲಿ ಎಂದಿಗೂ ಮುಗಿಯದ ಕ್ರೇಜ್. ನಟ ದರ್ಶನ್ ಅವರ ಸಿನಿಮಾಗಳವಿಷಯ ಅಂದರಂತೂ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲ.

ಡಿಬಾಸ್ ಸಿನಿಮಾ ಬಗ್ಗೆ ಸಿಗುವ ಒಂದೊಂದು ಅಪ್ಡೇಟ್ ಗಳನ್ನು ಸಹ ಸೋಷಿಯಲ್ ಮೀಡಿಯಾದಲ್ಲಿ ಸಂತೋಷದಿಂದ ಶೇರ್ ಮಾಡಿ, ವೈರಲ್ ಆಗುವ ಹಾಗೆ ಮಾಡುತ್ತಾರೆ ದರ್ಶನ್ ಅವರ ಅಭಿಮಾನಿಗಳು. ಅಭಿಮಾನಿಗಳ ಪ್ರೀತಿಯ ಡಿಬಾಸ್ ಅಂದ್ರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ದರ್ಶನ್ ಅವರು ಸ್ಟಾರ್ ನಟನ ಮಗನಾಗಿದ್ದರು ಸಹ, ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಕಷ್ಟಪಟ್ಟರು. ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಇಂದು ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಹೆಸರು ಪಡೆದಿದ್ದಾರೆ.

ದರ್ಶನ್ ಅವರ ಸಿನಿಮಾ ಬಿಡುಗಡೆ ಆಗುತ್ತದೆ ಎಂದರೆ, ಅಭಿಮಾನಿಗಳು ಥಿಯೇಟರ್ ನಲ್ಲಿ ಹಬ್ಬ ಮಾಡುವುದಂತೂ ಖಂಡಿತ. ಕರ್ನಾಟಕದ ಗಡಿ ಮೀರಿ ದರ್ಶನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಬಾಸ್ ಎಂದು ಕರೆಯುವುದರಲ್ಲಿ, ಯಾವುದೇ ಆಶ್ಚರ್ಯ ಇಲ್ಲ, ಯಾಕಂದ್ರೆ ಅಭಿಮಾನಿಗಳ ಪಾಲಿನ ಬಾಸ್ ಆಗಿದ್ದಾರೆ ಡಿಬಾಸ್. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *