ಭಾರತೀಯ ಚಿತ್ರರಂಗದ ಈ ಖ್ಯಾತ ನಟಿ ಹೇಳಿರುವ ಹೇಳಿಕೆಗೆ ಇಡೀ ಚಿತ್ರರಂಗವೇ ಸ್ತಬ್ಧ..!?

Entertainment

ಚಿತ್ರರಂಗದಲ್ಲಿ ಏನಾದರೂ ಸಾಧಿಸಬೇಕೆಂದು ವರ್ಷಾನುಗಟ್ಟಲೆ ಸಾವಿರಾರು ಲಕ್ಷಾಂತರ ಪ್ರತಿಭೆಗಳು ಬಂದು ಹೋಗುತ್ತಾರೆ. ಆದರೆ ಅದರಲ್ಲಿ ಯಶಸ್ಸು ಸಿಗುವುದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ. ಕೆಲವರು ಹಲವಾರು ವರ್ಷಗಳ ಕಾಲ ಶ್ರಮಪಟ್ಟರು ಕೂಡ ಅವರಿಗೆ ನಿರೀಕ್ಷಿತ ಯಶಸ್ಸು ಸಿಗುವುದಿಲ್ಲ. ಇನ್ನು ಕೆಲವು ಪ್ರತಿಭೆಗಳಿಗೆ ಅದೃಷ್ಟ ಕೈ ಹಿಡಿದರೆ ಸಾಕು ಕೆಲವೇ ಕೆಲವು ಸಮಯಗಳಲ್ಲಿ ಎಲ್ಲರ ನೆಚ್ಚಿನ ನಟರಾಗಿ ನಟಿಯರಾಗಿ ಮಿಂಚುತ್ತಾರೆ.
ಒಂದು ಬಾರಿ ಸೆಲೆಬ್ರಿಟಿ ಆದ ನಂತರ ಅವರು ಸಾರ್ವಜನಿಕರ ಆಸ್ತಿ ಆಗಿರುತ್ತಾರೆ. ಅವರು ಮಾಡುವ ಅವರು ನಡೆದುಕೊಳ್ಳುವ ರೀತಿ ಎಲ್ಲವೂ ಕೂಡ ಅವರ ಅಭಿಮಾನಿಗಳ ದೃಷ್ಟಿಯಲ್ಲಿ ಸರಿಯಾಗಿರುತ್ತದೆ. ಅದು ಸಿನಿಮಾನಟರೇ ಆಗಿರಲಿ ಅಥವಾ ರಾಜಕಾರಣಿಗಳು ಆಗಿರಲಿ ಇಲ್ಲವೇ ದೊಡ್ಡ ಬಿಸಿನೆಸ್ ಮ್ಯಾನ್ ಆಗಿರಬಹುದು. ಸಾರ್ವಜನಿಕವಾಗಿ ಸೆಲೆಬ್ರಿಟಿ ಸ್ಟೇಟಸ್ ಅನ್ನು ಹೊಂದಿರುವುದರಿಂದಾಗಿ ಅವರ ಪ್ರತಿಯೊಂದು ಮಾತು ಹಾಗೂ ನಡೆ ಜವಾಬ್ದಾರಿಯುತವಾಗಿ ಇರಬೇಕು.
ಇತ್ತೀಚಿಗೆ ಒಬ್ಬರು ಭಾರತೀಯ ಚಿತ್ರರಂಗದ ಖ್ಯಾತ ನಟಿ ಹಾಗೂ ಟಾಪ್ ನಟನ ಮಗಳು ನೀಡಿರುವ ಹೇಳಿಕೆಗೆ ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ. ಅಷ್ಟಕ್ಕೂ ಆಕೆ ಹೇಳಿರುವ ಹೇಳಿಕೆ ಏನು ಸುದ್ದಿಗೆ ಕಾರಣವಾಗಲು ಇರುವಂತಹ ಅಂಶಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ಈ ಮಾತನ್ನು ಹೇಳಿರುವುದು ಇನ್ಯಾರು ಅಲ್ಲ ತಮಿಳು ಚಿತ್ರರಂಗದ ಖ್ಯಾತ ನಟ ಆಗಿರುವ ಕಮಲ್ ಹಾಸನ್ ಅವರ ಮಗಳಾಗಿರುವ ಶ್ರುತಿ ಹಾಸನ್ ಅವರು. ಹೌದು ಅವರು ಮದುವೆಯಾಗುವ ಮುನ್ನವೇ ನನಗೆ ತಾಯಿಯಾಗಬೇಕು ಎನ್ನುವುದಾಗಿ ಬಹಿರಂಗವಾಗಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಅವರ ತಾಯಿ ಕೂಡ ಮದುವೆಯಾಗುವ ಮುನ್ನವೇ ಕಮಲ್ ಹಾಸನ್ ರವರಿಂದ ತಾಯಿಯಾಗಿದ್ದರು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಮಾತನ್ನು ಕೇಳಿರುವ ಕೆಲವರು ಶ್ರುತಿ ಹಾಸನ್ ರವರ ವಿರುದ್ಧ ಕಿಡಿಕಾರಿದ್ದಾರೆ. ಆದರೆ ಶ್ರುತಿಹಾಸನ್ ಅವರು ಮಾತ್ರ ನನಗೆ ಮದುವೆ ಆಗುವ ಮುನ್ನ ತಾಯಿತನದ ಅನುಭವವನ್ನು ಅನುಭವಿಸಬೇಕೆಂಬ ಆಸೆ ಇದೆ ಎಲ್ಲರಿಗೂ ಕೂಡ ಅವರದೇ ಆದಂತಹ ಆಸೆ ಇರುತ್ತದೆ ಎಂಬುದಾಗಿ ಹೇಳಿದ್ದಾರೆ. ಇದರ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ತಪ್ಪದೇ ಹೇಳಿ.


Leave a Reply

Your email address will not be published. Required fields are marked *