ನಮಸ್ಕಾರ ಪ್ರೀತಿಯ ಓದುಗರೇ ಸ್ಯಾಂಡಲ್ವುಡ್ ನಲ್ಲಿ ಕೆಲ ನಟಿಯರು ತಮ್ಮ ವಿಭಿನ್ನವಾದ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ ಅವರಲ್ಲಿ ನಟಿ ಶ್ರುತಿ ಅವರು ಕೂಡ ಒಬ್ಬರು. ನಟಿ ಶ್ರುತಿ ಅವರ ಬಗ್ಗೆ ಅಥವಾ ಅವರ ಅಭಿನಯದ ಬಗ್ಗೆ ನಿಮಗೆ ಹೆಚ್ಚೇನು ಹೇಳಬೇಕಿಲ್ಲ. ನಟಿ ಶ್ರುತಿ ಅವರ ಹೆಸರು ಕೇಳಿದ ಕೂಡಲೇ ನೆನಪಿಗೆ ಬರುವುದು ಅವರ ಪಾತ್ರಗಳು ಯಂತವರನ್ನು ಕೂಡ ಕಣ್ಣೀರು ತರಿಸುತ್ತದೆ.
ಸದ್ಯಕ್ಕೆ ನಟಿ ಶ್ರುತಿಯವರು ಬೆಳ್ಳಿ ತೆರೆ ಹಾಗೂ ಕಿರುತೆರೆಯಲ್ಲಿ ಬಹಳಷ್ಟು ಸಕ್ರಿಯವಾಗಿ ಕೆಲಸ ಮಾಡುತಿದ್ದರೆ. ಶ್ರುತಿ ಅವರು ಸೋಷಿಯಲ್ ಮೀಡಿಯಾದಲ್ಲಿ ಆಗಾಗಿ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಶೇರ್ ಮಾಡುತ್ತಿರುತ್ತಾರೆ. ಈ ನಟಿ ಸದ್ಯಕ್ಕೆ ಸಿನೆಮಾ ರಂಗದಿಂದ ದೂರ ಉಳಿದಿದ್ದರೆ. ಇವರು ತಮ್ಮ ಸ್ವಂತ ಭೂಮಿಯಲ್ಲಿ ಕೃಷಿ ಮಾಡಲು ಹೊರಟಿದ್ದಾರೆ.
ಇತ್ತೀಚಿಗೆ ಅಷ್ಟೇ ಹೊಲಕ್ಕಿಳಿದು ಉಳಿಮೆ ಮಾಡಲು ಆರಂಭಿಸಿರುವ ಶ್ರುತಿ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸಿನೆಮಾ ಕ್ಷೇತ್ರದಿಂದ ಬ್ರೇಕ್ ತೆಗೆದುಕೊಂಡು ಕೃಷಿ ಯತ್ತ ಮುಖಮಾಡಿದ್ದಾರೆ ನಟಿ ಶ್ರುತಿ. ನೇಗಿಲ ಹಿಡಿದು ಉಳಿಮೆ ಮಾಡುತ್ತಿರುವ ಶ್ರುತಿಗೆ ಮಗಳು ಗೌರಿ ಮತ್ತು ತಾಯಂದಿರು ಕೂಡ ಅವರಿಗೆ ಸಾಥ್ ನೀಡಿದ್ದಾರೆ.
ಅವರ ಆಸೆ ಅಂತೆ ತಾನೇ ಉತ್ತಿ ಬಿತ್ತಿ ಬೆಳೆಯಬೇಕೆಂಬುದು ಬಹುವರ್ಷದ ಆಸೆ. ಭಗವಂತನಿಗೆ ಕೋಟಿ ನಮನಗಳು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅವರ ಉಳುಮೆ ಮಾಡುತ್ತಿರುವ ವಿಡಿಯೋ ಅಭಿಮಾನಿಗಳು ಹಾಗೂ ಸಿನೆಮಾರಂಗದವರು ಸಾಕಷ್ಟು ಮೆಚ್ಚುಗೆ ವ್ಯಾಕಪಡಿಸಿದ್ದಾರು. ತಮ್ಮ ವೈಯಕ್ತಿಕ ಜೀವದಲ್ಲಿ ಸಾಕಷ್ಟು ಏರು ಪೆರು ಕಂಡ ಶ್ರುತಿ ಈಗ ಮಗಳು ಗೌರಿ ಜೊತೆಗೆ ಸುಂದರ ಜೀವನ ಸಾಗಿಸುತ್ತಿದ್ದಾರೆ.
ಮೊನ್ನೆ ತಾನೇ ಶ್ರುತಿ ಅವರ ಮುದ್ದು ಮಗಳು ಗೌರಿ ಅವರ ಹುಟ್ಟುಹಬ್ಬ ಇತ್ತು. ಹೀಗಾಗಿ ಮಗಳ ಹುಟ್ಟುಹಬ್ಬದ ವಿಶೇಷವಾಗಿ ಸ್ಪೆಷಲ್ ಉಡುಗೊರೆಯೊಂದನ್ನು ನೀಡಿದ್ದಾರೆ. ಈ ವಿಡಿಯೋ ಯಾವುದು ಎಂದು ನೀವು ನೋಡಿದರೆ ಕಣ್ಣಲ್ಲಿ ನೀರು ಬರುವುದು ಪಕ್ಕ. ಚಿತ್ರರಂಗದಲ್ಲಿ ಶ್ರುತಿ ಎಂದೇ ಪ್ರಸಿದ್ಧರಾಗಿರುವ ಇವರ ಮೂಲ ಹೆಸರು ಗಿರಿಜಾ. ಸಿನೆಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ನಂತರ ಶ್ರುತಿ ಎಂಬ ಹೆಸರಿನಿಂದಲೇ ಎಲ್ಲರಿಗೂ ಪರಿಚಯವಾದರು.
ಹಿರಿಯ ನಟ ದ್ವಾರಕೀಶ್ ಅವರ ನಿರ್ದೇಶನ ಮಾಡಿರುವ ಕನ್ನಡದ ‘ಶೃತಿ’ ಚಿತ್ರದಲ್ಲಿ ನಟಿಸಿರುವ ಇವರು ಗಿರಿಜಾ ಇದ್ದ ಹೆಸರು ಬದಲಾಯಿತು. ನಟಿ ಶ್ರುತಿ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಹಾಗೂ ಮಲಯಾಳಂ, ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ಮೊದಲು ಚಿತ್ರ ಕನ್ನಡ ಮೇರು ನಟ ಶಿವಣ್ಣ ಅವರ ಜೊತೆ ಆಸೆಗೊಬ್ಬ ಮೀಸೇಗೊಬ್ಬ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.
ನಂತರ ದ್ವಾರಕೀಶ್ ಅವರ ಶೃತಿ ಸಿನೆಮಾದಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸಿದರು. ಹೀಗೆ ಶ್ರುತಿ ಅವರು ಹಲವು ಚಿತ್ರಗಳಿಗೆ ನಾಯಕಿಯಾಗಿ ಅಭಿನಯಿಸಿದ ಸಿನೆಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡರು. ನಟಿ ಶ್ರುತಿ ಅವರ ಸಿನೆಮಾ ಅದೃಷ್ಟವಲಿದಷ್ಟು ಅವರ ವೈವಾಹಿಕ ಜೀವನದಲ್ಲಿ ಅಷ್ಟೇನು ಚನ್ನಾಗಿರಲಿಲ್ಲ. ಅಲ್ಲದೆ ಅವರು ಎರಡು ಮದುವೆ ಕೂಡ ಆಗಿದ್ದರು. ಅವರಿಬ್ಬರಿಂದಲು ದೂರ ಉಳಿದು ಮಗಳು ಗೌರಿ ಜೊತೆ ಜೀವನ ನಡೆಸುತ್ತಿದ್ದಾರೆ. ಮಗಳು ಕೂಡ ತುಂಬಾ ಬ್ರಿಲಿಯಂಟ್. ಇನ್ನು ಮಗಳು ಗೌರಿ ಬೆಂಗಳೂರಿನಲ್ಲಿ ಕಾಲೇಜು ಒಂದರಲ್ಲಿ ಪಿಯುಸಿ ಕಾಮರ್ಸ್ ವಿಭಾಗದಲ್ಲಿ ಓದಿದ್ದಳೆ.
ಮಗಳು ಓದುದರಲ್ಲಿ ಮಾತ್ರ ಅಲ್ಲದೆ ಹಾಡು, ಡ್ಯಾನ್ಸ್, ಹಾಗೂ ಮುಂತಾದ ಅದ್ಭುತವಾದ ಪ್ರೀತಿಭೆಯನ್ನು ಹೊಂದಿದ್ದಾರೆ. ಮಗಳಿಗೆ ಲಾಂಗ್ ಜರ್ನಿ ಎಂದರೆ ಅವರಿಗೆ ತುಂಬಾ ಇಷ್ಟವಂತೆ. ಇನ್ನು ಗೌರಿಯ ಹುಟ್ಟುಹಬ್ಬದ ಕಾರಣ ಗ್ರ್ಯಾಂಡ್ ಆಗಿ ಬರ್ತ್ಡೇ ಪಾರ್ಟಿಯನ್ನು ಮಾಡಿದ್ದಾರೆ.. ಹೌದು ಗಿಚ್ಚಿ ಗಿಲಿ ಗಿಲಿ ತಂಡದ ಜೊತೆಗೆ ಬರ್ತ್ಡೇ ಪಾರ್ಟಿಯನ್ನು ಶ್ರುತಿ ಮಗಳು ಗೌರಿ ಮಾಡಿದ್ದಾಳೆ. ಈ ಬರ್ತ್ಡೇ ಪಾರ್ಟಿಯಲ್ಲಿ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ಸೃಜನ್ ಲೋಕೇಶ್, ನಿರಂಜನ್ ದೇಶಪಾಂಡೆ, ಯಶಸ್ವಿನಿ ಸೇರಿದಂತೆ ಕುಂಟೆಸ್ಟೆಂಟ್ ಹಾಗೂ ಅನೇಕರು ಹಾಜರಾಗಿದ್ದಾರೆ. ಇನ್ನು ಕುಟುಂಬದವರ ಜೊತೆಗೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬದ ಆಚರಿಸಿಕೊಂಡಿದ್ದಾರೆ.
ಶ್ರುತಿಯವರು ಮಗಳಿಗೆ ಆಪಲ್ ಐ ಫೋನ್, ಬ್ರಾಂಡೆಂಡ್ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಮಗಳು ಗೌರಿ ಹುಟ್ಟುಹಬ್ಬದ ದಿನವೇ ಶ್ರುತಿ ಅವರು ಮಗಳು ಹುಟ್ಟಿದ ಕ್ಷಣದ ಸುಂದರ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಮೂಲಕ ಮಗಳಿಗಾಗಿ ಈ ವಿಶೇಷ ವಿಡಿಯೋ ಹಂಚಿಕೊಂಡು ಸಂತಸವನ್ನು ವ್ಯಕ್ತ ಪಡಿಸಿದ್ದಾರೆ. ಶ್ರುತಿ ಮಗಳು ಗೌರಿಯ ಹುಟ್ಟುಹಬ್ಬದ ಸಂಭ್ರಮದ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನೀವು ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ..