ಮಜಾ ಟಾಕೀಸ್ ನ ರೆಮೋ ಅವರ ಮಗಳು 10 ನೇ ತರಗತಿಯಲ್ಲಿ ಗಳಿಸಿದ ಅಂಕ ಎಷ್ಟು ಗೊತ್ತಾ? ಮಗಳ ಬಗ್ಗೆ ಹೇಳಿದ್ದೇನು ಒಮ್ಮೆ ನೋಡಿ…

ಸುದ್ದಿ

ಕನ್ನಡ ಕಿರುತೆರೆಯ ಲೋಕದಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿರುವ ಸೃಜನ್ ಲೋಕೇಶ್ ಅವರು ನಡೆಸಿಕೊಡುವ ಮಜಾಟಾಕೀಸ್ ಶೋ ಕಿರುತೆರೆ ರಿಯಾಲಿಟಿ ಶೋ ನಲ್ಲಿ ಅತೀ ಹೆಚ್ಚು ಟೀ. ಆರ್. ಪಿ ಯನ್ನು ಪಡೆದುಕೊಂಡು ಕನ್ನಡಿಗರ ಮನೆಮಾತಾಗಿತ್ತು. ಸೃಜನ್ ಲೋಕೇಶ್ ಅವರ ಮುಂದಾಳತ್ವದಲ್ಲಿ ಆರಂಭವದ ಈ ಶೋಗೆ ರೆಮೋ ಕೂಡ ಈ ಶೋ ನ ಯಶಸ್ವಿಗೆ ಕಾರಣವಾಗಿದ್ದರು. ಮಜಾ ಟಾಕೀಸ್ ನಲ್ಲಿ ಒಂದು ಸೂಪರ್ ಕಾಮಿಡಿ ಶೋ ಆ ಶೋ ನೋಡಿದವರೆಲ್ಲ ನಗೆಯ ಕಡಲಲ್ಲಿ ತೆಲಿಹೋಗುತ್ತಾರೆ.

ನಿಮಗೆ ಗೊತ್ತಿರುವ ಹಾಗೇ ಎಲ್ಲರನ್ನು ನಗಿಸುತ್ತಾ ತಾನು ನಗುವ ರೆಮೋ ಅವರು ಕೂಡ ಜೀವದಲ್ಲಿ ಸಾಕಷ್ಟು ಕಷ್ಟಗಳನ್ನು ದಾಟಿ ಎಂದು ಈ ಮಟ್ಟಕ್ಕೆ ಬೆಳೆದಿದ್ದರೆ. ಅಂದು ರಾಮೋ ಅವರು ಒಂದೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದರು. ಈಗ ರೆಮೋ ಅವರ ಜೊತೆಯಾಗಿ ನಿಂತ್ತಿರುವುದು ಅವರ ಮಗಳು ಮಾತ್ರ. ಮಜಾಟಾಕೀಸ್ ನ ರೆಮೋ ಅವರ ನಿಜವಾದ ಹೆಸರು ರೇಖಾ ದಾಸ್. ಮಜಾಟಾಕೀಸ್ ನಲ್ಲಿ ತಮ್ಮ ಹಾಡಿನ ಮೂಲಕ ಜನರನ್ನು ರಂಜಿಸುತಿದ್ದರು ರೆಮೋ ಅವರು ತಮ್ಮದೇ ಆದ ಆರ್ಕೆಸ್ಟ್ರಾ ತಂಡವನ್ನು ಹೊಂದಿದ್ದಾರೆ. ಪತಿ ಮೋಹನ್ ಕೂಡ ಗಾಯಕರಾಗಿದ್ದಾರೆ. ಕಿರುತೆರೆಯ ಸೂಪರ್ ಹಿಟ್ ಶೋ ಮಜಾ ಟಾಕೀಸ್ ನಿಂದ ರೆಮೋ ಅವರು ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.

ರಾಮೋ ಅವರು ಸಾಕಷ್ಟು ಸಿನಿಮಾಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಸಾಹಿತ್ಯ ಕೂಡ ಬರೆದಿದ್ದಾರೆ. ಅಷ್ಟೇ ಅಲ್ಲದೇ ರೆಮೋ ಅವರು ಬದುಕಿನಲ್ಲಿ ಸಾಕಷ್ಟು ಗಳಿಸಿದ್ದರು ನಂತರ ಎಲ್ಲವನ್ನು ಕಳೆದುಕೊಂಡರು. ಅದರ ಜೊತೆಗೆ ಅವರ ಸುತ್ತ ಮುತ್ತು ಇರುವ ಜನರು ನಾನಾ ರೀತಿಯಲ್ಲಿ ಅವರ ಬಗ್ಗೆ ಮಾತನಾಡುತ್ತಿದ್ದರು. ಕಷ್ಟದ ಸಮಯದಲ್ಲಿ ಜನರು ಹೇಗೆ ಮಾತಾಡುತ್ತಾರೆ ಎಂಬುದು ಅವರಿಗೆ ಅರಿವಾಗಿದೆ. ಆ ಕಷ್ಟದ ಸಮಯದಲ್ಲಿ ಅವರಿಗೆ ಸಹಾಯ ಮಾಡಿದ್ದೆ ಮಿಮಿಕ್ರಿ ದಯಾನಂದ್ ಅವರು.
ಅಷ್ಟೇ ಅಲ್ಲದೇ ಶೋಗಳಲ್ಲಿ ಹಾಡುವ ಕೆಲಸ, ಮಿಮಿಕ್ರಿ ಮಾಡುವ ಕೆಲಸವನ್ನು ಕಷ್ಟದಲ್ಲಿ ಇರುವ ರೆಮೋ ಅವರಿಗೆ ಕೊಡಿಸಿದ್ದಾರೆ. ಅದರ ಜೊತೆಗೆ ದಯಾನಂದ್ ರೆಮೋ ಅವರಿಗೆ ಪೇಮೆಂಟ್ ಕೂಡ ಕೊಡಿಸುತ್ತಿದ್ದರು. ನಂತರದ ದಿನಗಳಲ್ಲಿ ರೆಮೋಅವರ ಕಷ್ಟವನ್ನು ನಿಗಿಸಿದವರು ಸೃಜನ್ ಲೋಕೇಶ್ ಅವರು. ಕಷ್ಟದಲ್ಲಿ ಇರುವ ರೆಮೋ ಅವರ ಪರಿಸ್ಥಿತಿ ಬಗ್ಗೆ ಸೃಜನ್ ಅವರಿಗೆ ಮೊದಲೇ ತಿಳಿದಿತ್ತು. ಹಗಫಿ ತಮ್ಮ ಬ್ಯಾನರ್ ನಲ್ಲಿ ತಯಾರಾಗುತ್ತಿದ್ದ ಸೀರಿಯಲ್ ನಲ್ಲಿ ಕೆಲಸ ಮಾಡುವ ಅವಕಾಶ ರೆಮೋ ಅವರಿಗೆ ಕೊಟ್ಟರು. ರೆಮೋ ಅವರ ಪಾಲಿಗೆ ಸೃಜನ್ ಲೋಕೇಶ್ ದೇವರಾದರು.

ಒಂದು ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ತನ್ನ ಮನಸ್ಸಿನಲ್ಲಿ ಇರುವ ನೋವನ್ನು ತಡೆಯಲಾರದೆ ರೆಮೋ ತನ್ನ ಮನಸ್ಸಿನ ನೋವುಗಳನ್ನು ಹೇಳಿಕೊಂಡಿದ್ದಾರೆ. ರೆಮೋ ಅವರು ಸುಮ್ಮನೆ ದುಡ್ಡು ಕೊಟ್ಟರೆ ನಾನು ತೆಗೆದುಕೊಳ್ಳುತ್ತಾ ಇರಲಿಲ್ಲ ಎಂದು ಸೃಜನ್ ಅವರು ಕೆಲಸ ಕೊಟ್ಟು ಪೇಮೆಂಟ್ ಕೊಡುತ್ತಿದ್ದರು. ರೆಮೋ ನಿಮಗೆ ಹೆಲ್ಪ್ ಆಗುತ್ತೆ ಕೆಲಸ ಮಾಡಿ ಎನ್ನುತ್ತಿದ್ದರು. ಎಂದು ರೆಮೋ ಹೇಳಿಕೊಂಡಿದ್ದರು.
ಧಾರಾವಾಹಿ ಮತ್ತು ಮಜಾ ಟಾಕೀಸ್ ಕಾರ್ಯಕ್ರಮ ನೀಡಿ, ರೆಮೋ ಅವರ ಬದುಕಿನಲ್ಲಿ ಆಸರೆಯಾದರು. ಈ ವಿಚಾರವನ್ನು ರೆಮೋ ಹೇಳಿಕೊಂಡು ಅತ್ತಾಗ ಶ್ವೇತಾ ಚಂಗಪ್ಪ, ಅಪರ್ಣ ಎಲ್ಲರೂ ಬಂದು ರೆಮೋ ಅವರನ್ನು ಸಮಾಧಾನ ಮಾಡಿದ್ದಾರೆ. ಕಳೆದ ವರ್ಷ ರೆಮೋ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ರೆಮೋಗೆ ಸ್ನೇಹಿತರು ಮತ್ತು ಕುಟುಂಬದವರೆಲ್ಲ ಸೇರಿ ರೆಮೋ ಅವರಿಗೆ ಸೇರ್ಪ್ರೈಸ್ ಆಗಿ ಹುಟ್ಟುಹಬ್ಬದ ಆಚರಣೆಯನ್ನು ಆಯೋಜಿಸಿದ್ದರು.

ಇನ್ನು ರೆಮೋ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ನಿರೂಪಕಿ ಶಾಲಿನಿ, ನೆನಪಿರಲಿ ಖ್ಯಾತಿಯ ನಟಿ ವರ್ಷ ಮಜಾ ಟಾಕೀಸ್ ಶ್ವೇತಾ ರಾಣಿ ಸೇರಿದಂತೆ ಹಲವಾರು ಜನರು ಪಾಲ್ಗೊಂದ್ದಿದ್ದರು. ತಮ್ಮ ಸರ್ ಪ್ರೈಸ್ ಹುಟ್ಟುಹಬ್ಬದ ಸಂಭ್ರಮಾಚರಣೆಯ ಫೋಟೋಗಳನ್ನು ರೆಮೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತನ್ನ ಹುಟ್ಟುಹಬ್ಬ ವನ್ನು ಆಚರಿಸಿದ ಎಲ್ಲರಿಗೂ ರೆಮೋ ಅವರು ಧನ್ಯವಾದಗಳನ್ನು ಕೊರಿದ್ದಾರೆ. ಇದೀಗ ರೆಮೋ ಅವರು ಮತ್ತೊಂದು ವಿಚಾರವಾಗಿ ಸಿಕ್ಕಾಪಟ್ಟೆ ಸುದ್ಧಿಯಾಗಿದ್ದಾರೆ.
ಕನ್ನಡದ ಬೆಸ್ಟ್ ರಿಯಾಲಿಟಿ ಶೋ ಮಜಾ ಟಾಕೀಸ್ ನಲ್ಲಿನ ಸೌಂಡ್ ಪಲ್ಲೂಷನ್ ಎಂದೇ ಖ್ಯಾತಿ ಪಡೆದಿರುವ ರೆಮೋ ಅವರ ಮಗಳು ಮೇಧಿನಿ ಕೂಡ SSLC ಪರೀಕ್ಷೆಯಲ್ಲಿ ಶೇಕಡಾ 87% ಅಂಕಗಳನ್ನು ಪಡೆದುಕೊಂಡಿದ್ದಾರೆ. ತನ್ನ ಮಗಳ ಸಾಧನೆಯನ್ನು ಕಂಡು ಖುಷಿಪಟ್ಟಿರುವ ರೆಮೋ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. “ನನ್ನ ಮುದ್ದಿನ ಮಗಳು.. ನನ್ನ ವಜ್ರ.

ಹತ್ತನೇ ತರಗತಿಯಲ್ಲಿ ಶೇಕಡಾ 87% ಪಡೆದುಕೊಂಡು ನಾನು ಹೆಮ್ಮೆ ಪಡುವಂತೆ ಖಂಡಿತ ಮಾಡಿದ್ದಿಯ. ನೀನೇ ನನಗೆ ಜಗತ್ತು ಯಾರ ಜೀವನವು ಹೂವಿನ ಹಾದಿಯಲ್ಲ. ನಮ್ಮದು ಕೂಡ. ನಾವು ಪಟ್ಟ ಕಷ್ಟಕ್ಕೆ ಈಗ ಪ್ರತಿಫಲ ಸಿಕ್ಕಿದೆ. ಇದು ನಿನ್ನ ಯಶಸ್ಸಿನ ಮೊದಲ ಹೆಜ್ಜೆ ಮಗಳೇ. ಹೀಗೆ ಮುಂದೆ ಎತ್ತರಕ್ಕೆ ಸಾಗುತ್ತಿರು. ನಿನ್ನೆಲ್ಲಾ ಕನಸುಗಳು ಆದಷ್ಟು ಬೇಗ ಈಡೇರಲಿ. ಎಂದು ಮಗಳು ವೇಧಿನಿ ಕುರಿತಾಗಿ ರೆಮೋ ಬರೆದುಕೊಂಡಿದ್ದಾರೆ.
ರೆಮೋ ಅವರ ಈ ಪೋಸ್ಟ್ ನೋಡಿ ಚಿತ್ರರಂಗದ ಅನೇಕ ನಟ ಹಾಗೂ ನಟಿಯರು ಹಾಗೂ ಅವರ ಅಭಿಮಾನಿಗಳು ಶುಭಾಶಯಗಳನ್ನು ಕೊರಿದ್ದಾರೆ. ನೀವು ಕೂಡ ಆ ಪುಟ್ಟ ಹೆಣ್ಣು ಮಗಳಿಗೆ ಶುಭಾಶಯಗಳನ್ನು ಕೋರಿ ಧನ್ಯವಾದಗಳು


Leave a Reply

Your email address will not be published. Required fields are marked *