ನಮಸ್ತೆ ಪ್ರೀತಿಯ ವೀಕ್ಷಕರೇ ಕನ್ನಡ ಸಿನೆಮಾರಂಗದ ಬಂಗಾಳಿ ಬೆಡಗಿ ಪ್ರಿಯಾಂಕಾ ಉಪೇಂದ್ರ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಮಲ್ಲ ಚಿತ್ರದ ಮೂಲಕ ಸಿನೆಮಾರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ನಟಿ ಇವರು ಕನ್ನಡದಲ್ಲಿ ಸರಿ ಸುಮಾರು ನಲವತ್ತಾಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಇಂದಿಗೂ ಕನ್ನಡದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುಟ್ಟುದ್ದಾರೆ. ಕನ್ನಡ ಅಲ್ಲದೇ ಬಂಗಾಳಿ, ಹಿಂದಿ, ತೆಲುಗು, ತಮಿಳು ಮತ್ತು ಓರಿಯಾ ಭಾಷೆಯಲ್ಲಿ ಅಭಿನಯಿಸಿದ್ದು ಎಲ್ಲಾ ಕ್ಷೇತ್ರದಲ್ಲೂ ಸೈ ಎನಿಸಿಕೊಂಡ ಅದ್ಭುತ ನಟಿ ಇವರು. ಮದುವೆಯಾದ ಬಳಿಕ ಒಂದಿಷ್ಟು ಬಂಗಾಳಿ ನಟಿಸುವಾಗ ಕನ್ನಡಕ್ಕೆ ಬ್ರೇಕ್ ನೀಡಿದ್ದರು. ಇಬ್ಬರು ಮುದ್ದಿನ ಮಕ್ಕಳ ತಾಯಿಯದ ಬಳಿಕ ಚಿತ್ರರಂಗದಿಂದ ಸ್ವಲ್ಪ ದೂರನೇ ಇದ್ದರು.
ಇತ್ತೀಚಿಗೆ ನಟಿ ಪ್ರಿಯಾಂಕಾ ಉಪೇಂದ್ರ ಹುಟ್ಟುಹಬ್ಬದ ಸಮಯದಲ್ಲಿ ಮತ್ತೇ ಅಭಿಮಾನಿಗಳಿಗೆ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದರು. ಕನ್ನಡ ಸಿನೆಮಾಗಳಿಗೆ ಬ್ರೇಕ್ ನೀಡಿದ ಅವರು ಅಂದು ಎರಡು ಚಿತ್ರಗಳ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ಧಿ ಕೊಟ್ಟರು. ಮಾತ್ರವಲ್ಲ ನಾಯಕಿ ಪ್ರಧಾನ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ.
ಇಂತ ಪ್ರಿಯಾಂಕಾ ಉಪೇಂದ್ರ ತಮ್ಮ ವೃತ್ತಿ ಬದುಕಿನ ಮರೆಯಲಾಗದ ಚಿತ್ರಗಳ ಬಗ್ಗೆ ನಮ್ಮ ಪ್ರೆಶ್ನೆಗಳಿಗೆ ಇಲ್ಲಿ ಉತ್ತರ ನೀಡಿದ್ದು ಅವುಗಳಲ್ಲಿ ಒಂದು ಹೆಚ್ ಟು ಓ ಅದು ನನಗೆ ವೈಯಕ್ತಿಕವಾಗಿ ನನಗೆ ಹೆಚ್ಚು ಇಷ್ಟವಾದ ಚಿತ್ರ ಸುಮಾರು ಒಂದು ವರ್ಷಗಳ ಕಾಲ ಶೋಟಿಂಗ್ ನಡೆದಿತ್ತು. ಆ ಚಿತ್ರದ ಸಮಯದಲ್ಲೇ ಉಪ್ಪಿ ನನಗೆ ಆತ್ಮೀಯರಾದರು. ಆ ಸಮಯದಲ್ಲಿ ಕನ್ನಡದಲ್ಲಿ ನನಗೆ ಎಲ್ಲವೂ ತುಂಬಾ ಹೊಸದು ಹಾಗಾಗಿ ಹೆಚ್ ಟು ಓ ನನಗೆ ತುಂಬಾ ಆತ್ಮೀಯ.
ನಂತರ ರವಿಚಂದ್ರನ್ ಅವರ ಜೊತೆ ಮಲ್ಲ ಚಿತ್ರ ಈ ಚಿತ್ರದ ಮೂಲಕ ಹಿಟ್ ಜೋಡಿ ಎಂದು ಅನಿಸಿಕೊಂಡರು. ಈಗ ಹಲವು ವರ್ಷಗಳ ನಂತರ ಅದೇ ರವಿಚಂದ್ರನ್ ಅವರ ಜೊತೆ ಕನ್ನಡದ ರಿಯಾಲಿಟಿ ಶೋ ಒಂದರಲ್ಲಿ ಹೆಜ್ಜೆ ಹಾಕಿ ಕನ್ನಡ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. ಒಂದು ರೀತಿಯಲ್ಲಿ ಇವರ ಅಭಿಮಾನಿಗಳಿಗೆ ಹಾಗೂ ಕನ್ನಡ ಸಿನಿರಸಿಕರಿಗೆ ಅಚ್ಚರಿಯ ಸುದ್ಧಿ.
ಅಂದು ಮಲ್ಲ ದಲ್ಲಿ ಹಾಗೆಲ್ಲ ಪ್ರಿಯಾಂಕಾ ಉಪೇಂದ್ರ ಕಾಣಿಸಿಕೊಳ್ಳುವಾಗ ರಿಯಲ್ ಸ್ಟಾರ್ ಉಪೇಂದ್ರರನ್ನು ಮದುವೆಯಾಗಿರಲಿಲ್ಲ. ಆದರೆ ಅವರಿಬ್ಬರ ನಡುವೆ ಪ್ರೀತಿಯ ಹೆಮ್ಮರ ಬೆಳೆದಿತ್ತು. ಮಲ್ಲ ಚಿತ್ರ ಬಿಡುಗಡೆಯಾಗುವ ಮೊದಲೇ ಉಪೇಂದ್ರ ಹಾಗೂ ಪ್ರಿಯಾಂಕಾ ಮದುವೆಯಾಗಿತ್ತು. ಇದೇ ಹಿನ್ನಲೆಯಲ್ಲಿ ಚಿತ್ರದ ಕೆಲವು ಹಾಟ್ ದೃಶ್ಯಗಳಿಗೆ ಕತ್ತರಿ ಹಾಕುವಂತೆ ನಟ ರವಿಚಂದ್ರನ್ ಅವರಲ್ಲಿ ಉಪೇಂದ್ರ ಕೇಳಿಕೊಂಡಿದ್ದರು ಎಂಬ ಸುದ್ಧಿ ಅಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಆದರೆ ಇದಕ್ಕೆ ರವಿಚಂದ್ರನ್ ಒಪ್ಪಿರಲಿಲ್ಲ. ಈ ಸಿನೆಮಾದಲ್ಲಿ ಯಾವುದೇ ಬದಲಾವಣೆ ಮಾಡಲು ನಾನು ಸಿದ್ದನಿಲ್ಲ ಎಂದು ರವಿಚಂದ್ರನ್ ಖಡಕ್ ಆಗಿಯೇ ಹೇಳಿದ್ದರು. ಇದಕ್ಕಿಂತಲೂ ಹೆಚ್ಚಾಗಿ ಪ್ರಿಯಾಂಕಾ ಹಾಗೂ ರವಿಚಂದ್ರನ್ ಅವರಿಬ್ಬರ ನಡುವೆ ಬೇರೇನೋ ನಡೀತಿದೆ ಎಂಬ ಊಹೆ ಪುಹೆಗಳು ಅಂದು ಹುಟ್ಟಿದ್ದವು. ಇದಲ್ಲದಕ್ಕೂ ಕಾಲವೇ ಉತ್ತರ ನೀಡುತ್ತದೆ ಎಂದು ಸುಮ್ಮನಾದರು. ವಿವಾದಗಳು ತಣ್ಣಗಾದವು. ಈಗ ಅದೇ ಜೋಡಿಗಳು ಮತ್ತೇ ಒಂದಾಗಿದೆ. ಮದುವೆಯದ ಮೇಲೆ ಎಲ್ಲರೂ ಉಪೇಂದ್ರ ಅವರ ಪತ್ನಿಯೆಂದೇ ಗುರುತಿಸುತ್ತಾರೆ ಇಂದು ನನಗೆ ಇಷ್ಟವಿಲ್ಲ. ನಾನು ಒಬ್ಬ ಕಲಾವಿದೆಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂಬ ಆಸೆ ನನಗಿದೆ. ಅದೇ ಕಾಣರದಿಂದ ಹಿಂದಿ ಮತ್ತು ಬೆಂಗಾಲಿ ಸಿನೆಮಾಗಳಲ್ಲಿ ನಟಿಸುತ್ತಿದ್ದೇನೆ.
ಹೌದು ಪ್ರಿಯಾಂಕಾ ಉಪೇಂದ್ರ ಮದುವೆಯದ ನಂತರ ಕನ್ನಡದಲ್ಲಿ ನಾಯಕಿಯಾಗಿ ಯಾವ ಚಿತ್ರದಲ್ಲೂ ನಟಿಸಿಲ್ಲ.ಇತ್ತೀಚಿಗಷ್ಟೇ ಒಳ್ಳೆಯ ಕಥೆಯಿದೆ ಎಂದು ರವಿಚಂದ್ರನ್ ಅವರು ಮನೆಗೆ ಬಂದಿದ್ದರು. ನನಗೆ ಹೊಂದುವ ಕಥೆಯೊಂದನ್ನು ಹೇಳಿದರು. ಕೇಳಿ ನನಗೂ ಇಷ್ಟವಾಯಿತು. ಉಪ್ಪುಯಲ್ಲೂ ಈ ಬಗ್ಗೆ ಚರ್ಚಿಸಿದ್ದೆ. ರವಿಚಂದ್ರನ್ ಸಿನೆಮಾದಲ್ಲಿ ಮತ್ತೇ ನಟಿಸುವ ನನ್ನ ನಿರ್ಧಾರವನ್ನು ಅವರು ಬೆಂಬಲಿಸಿದರು. ಖಂಡಿತ ನಮ್ಮಿಬ್ಬರ ಜೋಡಿ ಮಲ್ಲ ಚಿತ್ರದಂತೆ ಇಲ್ಲೂ ಮೋಡಿ ಮಾಡಲಿದೆ.
ಈ ಸಿನೆಮಾದಲ್ಲಿ ನಾನು ರವಿಚಂದ್ರನ್ ಅವರ ಹೆಂಡತಿಯಾಗಿ ನಟಿಸುತ್ತಿದ್ದೇನೆ. ನನ್ನ ಈಗಿನ ಇಮೇಜ್ ತಕ್ಕ ಪಾತ್ರವಿದು ಎಂದು ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ. ಮಲ್ಲ ಎಂಬ ಹಾಟ್ ಸಿನೆಮಾವನ್ನು ನಿರ್ದೇಶನ ಮಾಡಿದ್ದು ರವಿಚಂದ್ರನ್. ಈ ಚಿತ್ರಕೂಡ ಅವರೇ ನಿರ್ದೇಶನ ಮಾಡುತ್ತಿದ್ದಾರೆ.ಅದೇ ನಾಯಕಿಯೂ ಇಲ್ಲಿದ್ದಾರೆ. ಚಿತ್ರಕ್ಕೆ ಸಂಗೀತ ನಿರ್ದೇಶನ ಕೂಡ ರವಿಚಂದ್ರನ್ ಅವರೇ ಮಾಡಲಿದ್ದಾರೆ. ಆದರೆ ಇದು ರಿಮೇಕ್ ಎಂಬ ಸಾಧ್ಯದ ಮಾಹಿತಿ ಲಭ್ಯವಾಗಿದೆ.
ಎಲ್ಲೆಡೆ ರವಿಚಂದ್ರನ್ ಅವರ ಜೊತೆಗೆ ಪ್ರಿಯಾಂಕಾ ಉಪೇಂದ್ರ ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ರವಿಚಂದ್ರನ್ ಅವರ ಜೊತೆ ನಟಿ ಪ್ರಿಯಾಂಕಾ ಸುಂದರವಾಗಿ ಹೆಜ್ಜೆ ಹಾಕಿದ್ದಾರೆ. ಇವರಿಬ್ಬರ ಈ ಕ್ಯೂಟ್ ಜೋಡಿ ಮತ್ತೇ ತೆರೆಯ ಮೇಲೆ ಬರುತ್ತಿರುವುದು ಏನೋ ಮೋಡಿ ಮಾಡಲಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.