ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಾಯಕ ನಟಿ ಆಗಿದ್ದವರು ನಟಿ ಶುಭಾ ಪೂಜಾ. ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಪ್ರೇಕ್ಷಕರಿಗೆ ಪರಿಚಿತರಾದವರು ಶುಭಪೂಂಜ. ಶುಭ ಪೂಂಜಾ ರವರು ತಮ್ಮ ಸಿನಿಮಾ ಜರ್ನಿಯಲ್ಲಿ ಆಯ್ಕೆ ಮಾಡಿದಂತಹ ಹಲವು ತಪ್ಪು ಸಿನಿಮಾಗಳಿಂದಾಗಿ ಅವರು ಚಿತ್ರರಂಗದಿಂದ ಬೇಡಿಕೆಯನ್ನು ಕಳೆದುಕೊಳ್ಳುವಂತಾಯಿತು.
ಆದರೂ ಕೂಡ ಸಿನಿಮಾರಂಗದಲ್ಲಿ ಕನ್ನಡ ಹಾಗೂ ತಮಿಳು ಸೇರಿದಂತೆ 20ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.ನಟಿ ಶುಭಾ ಪೂಂಜಾ ರವರನ್ನು ಮರೆತ್ ಅಂತಹ ಕನ್ನಡಿಗರು ಅವರನ್ನು ಮತ್ತೆ ಜ್ಞಾಪಿಸಿಕೊಂಡಿದ್ದು ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಮೂಲಕ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ನಡೆಸಿಕೊಡುವ ಕನ್ನಡದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಮೂಲಕ ಅವರನ್ನು ಜನರು ಇಷ್ಟಪಡಲು ಆರಂಭಿಸುತ್ತಾರೆ.
ಬಿಗ್ ಬಾಸ್ ಗೆ ಬರುವ ಮುನ್ನ ಶುಭ ಪೂಜಾ ರವರ ಬಗ್ಗೆ ಇದ್ದಂತಹ ತಪ್ಪು ಹಾಗೂ ಕೆಟ್ಟ ಕಲ್ಪನೆಗಳು ಬಿಗ್ ಬಾಸ್ ನಲ್ಲಿ ಅವರ ಮುಗ್ಧತೆಯನ್ನು ನೋಡಿದ ನಂತರ ಪ್ರೇಕ್ಷಕರಲ್ಲಿ ಕ್ಲಿಯರ್ ಆಗಿತ್ತು.ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಶುಭಪೂಂಜಾ ರವರ ಜನ ಪ್ರಿಯತೆ ಇನ್ನಷ್ಟು ಹೆಚ್ಚಾಯಿತು. ಇನ್ನು ಹಲವಾರು ವರ್ಷಗಳಿಂದ ಪ್ರೀತಿಸಿದ್ದ ಸುಮಂತ ಬಿಲ್ಲವ ಎನ್ನುವವರನ್ನು ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಶುಭಪುಂಜ ರವರು ತಮ್ಮ ಊರಿನಲ್ಲಿ ಮದುವೆಯಾಗುತ್ತಾರೆ. ಈಗ ಸದ್ಯಕ್ಕೆ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ವಂದನು ಶುಭಪೂಂಜ ನೀಡಲಿದ್ದಾರೆ.ಅದೇನೆಂದರೆ ಶುಭಪುಂಜಾ ರವರು ಈಗಾಗಲೇ ಮೂರು ಸಿನಿಮಾಗಳಲ್ಲಿ ನಟಿಸಿದ್ದು ಎರಡು ಸಿನಿಮಾಗಳು ಈಗಾಗಲೇ ಬಿಡುಗಡೆಗೆ ಸಜ್ಜಾಗಿವೆ.
ಮುಂದಿನ ದಿನಗಳಲ್ಲಿ ಕಿರುತೆರೆಯಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸಲು ನಿಶ್ಚಯಿಸಿದ್ದಾರೆ. ಹೀಗಾಗಿ ತಮ್ಮ ಸ್ವಂತ ಪ್ರೊಡಕ್ಷನ್ ಹೌಸ್ ಅನ್ನು ತೆರೆಯುವ ನಿರ್ಧಾರ ಮಾಡಿದ್ದು ಹೊಸ ಧಾರವಾಹಿಯನ್ನು ನಿರ್ಮಾಣ ಮಾಡುವ ಇಚ್ಛೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಶುಭಪೂಂಜಾ ರವರ ನಿರ್ಮಾಣದಲ್ಲಿ ಹೊಸ ಧಾರವಾಹಿ ಒಂದು ಕಿರುತೆರೆ ಲೋಕಕ್ಕೆ ಕಾಲಿಡುವುದು ಕನ್ಫರ್ಮ್.
