ಕನ್ನಡ ಕಿರುತೆರೆ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಬಿಗ್ ಬಾಸ್ ನಲ್ಲಿ ಒಮ್ಮೆ ಕಾಲಿಟ್ಟು ಬಂದರೆ ಸಾಕು ಖಂಡಿತವಾಗಿ ಮುಂದಿನ ದಿನಗಳಲ್ಲಿ ಅವರಿಗೆ ಜನಪ್ರಿಯತೆಗೆ ಏನು ಕೊರತೆ ಇರುವುದಿಲ್ಲ. ಪ್ರತಿಯೊಬ್ಬ ಕಿರುತೆರೆ ವೀಕ್ಷಕ ಬಿಗ್ಬಾಸ್ ಪ್ರಾರಂಭವಾದ ಮೇಲೆ ಖಂಡಿತವಾಗಿ ಒಂದು ಸಂಚಿಕೆಯನ್ನಾದರೂ ನೋಡುತ್ತಾನೆ.
ಇನ್ನು ಬಿಗ್ ಬಾಸ್ ನಲ್ಲಿ ವಿಜೇತರಾಗಿ ಹೊರಹೊಮ್ಮಿರುವ ಅಂತಹ ಶೈನ್ ಶೆಟ್ಟಿ ರವರ ಕುರಿತಂತೆ ನಿಮಗೆಲ್ಲ ಗೊತ್ತಿರಬಹುದು. ಮೊದಲಿಗೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ಇಷ್ಟವಾಗಿರುವ ಶೈನ್ ಶೆಟ್ಟಿ ಅವರು ಹಲವಾರು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ಸಿನಿಮಾ ಹಾಗೂ ಧಾರವಾಹಿಗಳು ಎರಡು ಕೂಡ ಕೈ ಹಿಡಿಯದ ಕಾರಣದಿಂದಾಗಿ ಗಲ್ಲಿ ಕಿಚನ್ ಎನ್ನುವ ಗಾಡಿ ಹೋಟೆಲನ್ನು ಕೂಡ ಪ್ರಾರಂಭಿಸಿದರು. ನಂತರ ಶೈನ್ ಶೆಟ್ಟಿರವರಿಗೆ ಬಿಗ್ ಬಾಸ್ ನಿಂದ ಕರೆ ಬರುತ್ತದೆ.
ಬಿಗ್ ಬಾಸ್ ಗೆ ಹೋಗಿ ವಿಜೇತರಾಗಿ ಬಂದಿರುವ ಕಥೆ ನಿಮಗೆಲ್ಲ ಗೊತ್ತಿರುವುದೇ. ಈ ಸಂದರ್ಭದಲ್ಲಿ ಶೈನ್ ಶೆಟ್ಟಿ ಅವರು ಹೆಚ್ಚಾಗಿ ಕಾಣಿಸಿಕೊಂಡಿದ್ದು ನಟಿ ದೀಪಿಕಾ ದಾಸ್ ರವರ ಜೊತೆಗೆ. ನಟಿ ದೀಪಿಕಾ ದಾಸ್ ರವರು ನಾಗಿಣಿ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ಪರಿಚಿತರಾದ ನಟಿ. ಬಿಗ್ ಬಾಸ್ ಮನೆ ಒಳಗೆ ಬಂದ ಮೇಲೆ ಕೂಡ ದೀಪಿಕಾ ದಾಸ್ ಅವರು ಆಟಿಟ್ಯೂಡ್ ಮೂಲಕ ಎಲ್ಲಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ. ಇದೇ ಸಂದರ್ಭದಲ್ಲಿ ಜೈನ್ ಶೆಟ್ಟಿ ಅವರು ಕೂಡ ಬಿಗ್ ಬಾಸ್ ಮನೆಯಲ್ಲಿ ದೀಪಿಕಾದಾಸ್ ರವರ ಹಿಂದೆ ಬಿದ್ದವರಂತೆ ಕಾಣಿಸಿಕೊಳ್ಳುತ್ತಾರೆ.
ನೀವು ಗಮನಿಸಿರಬಹುದು ಬಿಗ್ ಬಾಸ್ ವಿಜೇತರಾದ ನಂತರವೂ ಕೂಡ ಶೈನ್ ಶೆಟ್ಟಿ ಅವರ ಜೊತೆಗೆ ಹಲವಾರು ದೇವಸ್ಥಾನಗಳು ಹಾಗೂ ಶೆಟ್ಟಿಯವರ ನೇಟಿವ್ ಪ್ಲೇಸ್ ಆಗಿರುವ ಕುಂದಾಪುರದಲ್ಲಿ ಕೂಡ ಜೊತೆಗೆ ಕಾಣಿಸಿಕೊಂಡಿದ್ದರು. ಇದಕ್ಕೂ ಮುನ್ನವೇ ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರು ಮದುವೆ ಆಗುತ್ತಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಯಾಕೆಂದರೆ ಅವರು ಬಿಗ್ ಬಾಸ್ ನಲ್ಲಿ ಸಾಕಷ್ಟು ಕ್ಲೋಸ್ ಆಗಿ ಕಾಣಿಸಿಕೊಂಡಿದ್ದರು.ಮದುವೆ ಆಗ್ತಿದ್ದಾರಾ ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್; ಕೊನೆಗೂ ಪ್ರತಿಕ್ರಿಯಿಸಿದ ಶೈನ್ ಶೆಟ್ಟಿ..
ಇದಕ್ಕೆ ಪುಷ್ಟಿ ನೀಡುವಂತೆ ಬಿಗ್ ಬಾಸ್ ಮನೆಯ ಹೊರಬಂದ ಮೇಲೆ ಕೂಡ ದೀಪಿಕಾ ದಾಸ್ ಶೈನ್ ಶೆಟ್ಟಿ ಅವರ ಜೊತೆಗೆ ಓಡಾಡುತ್ತಿದ್ದನ್ನು ನೋಡಿದ ಪ್ರೇಕ್ಷಕರು ಅತಿಶೀಘ್ರದಲ್ಲಿ ಅವರಿಬ್ಬರೂ ಮದುವೆಯಾಗಲಿದ್ದಾರೆ ಎಂಬುದಾಗಿ ಮಾತನಾಡಿಕೊಳ್ಳಲು ಆರಂಭಿಸಿದ್ದರು. ಈ ಮಾತು ಕೊನೆಗೂ ನಿಜವಾಗುತ್ತದೆ ಎನ್ನುವುದಾಗಿ ಭಾವಿಸಿದ್ದರು ಯಾಕೆಂದರೆ ಹಲವಾರು ಸಮಾರಂಭಗಳಲ್ಲಿ ಕೂಡಗಿ ಜೋಡಿ ಒಟ್ಟಿಗೆ ಕ್ಯಾಮರ ಕಣ್ಣಿಗೆ ಕಾಣಿಸಿಕೊಂಡಿತ್ತು. ಇದಕ್ಕೆ ಪರಿಪೂರ್ಣ ಸ್ಪಷ್ಟೀಕರಣ ನೀಡುವ ಹಿನ್ನೆಲೆಯಲ್ಲಿ ಶೈನ್ ಶೆಟ್ಟಿಯವರು ಇದರ ಕುರಿತಂತೆ ಪ್ರತಿಕ್ರಿಯಿಸಿದ್ದಾರೆ.ಮದುವೆ ಆಗ್ತಿದ್ದಾರಾ ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್; ಕೊನೆಗೂ ಪ್ರತಿಕ್ರಿಯಿಸಿದ ಶೈನ್ ಶೆಟ್ಟಿ.
ಹೌದು ಗೆಳೆಯರೆ ಶೈನ್ ಶೆಟ್ಟಿ ಅವರು ದೀಪಿಕಾದಾಸ್ ರವರನ್ನು ನಾನು ತುಂಬಾ ಗೌರವಿಸುತ್ತೇನೆ. ಅವರು ಬೋರ್ಡ್ ಆಟಿಟ್ಯೂಡ್ ಹೊಂದಿರುವಂತಹ ಸ್ವಾವಲಂಬಿ ಹುಡುಗಿ. ನಮ್ಮಿಬ್ಬರ ನಡುವೆ ಇರುವುದು ಕೇವಲ ಸ್ನೇಹ ಅಷ್ಟೇ ಹೊರತು ಇನ್ಯಾವುದೂ ಇಲ್ಲ ಎಂಬುದಾಗಿ ಎಲ್ಲವನ್ನು ಸ್ಪಷ್ಟೀಕರಿಸಿದ್ದಾರೆ. ಈ ಮಾತನ್ನು ಕೇಳಿದ ನಂತರ ಇವರಿಬ್ಬರು ಮದುವೆಯಾಗುತ್ತಾರೆ ಅಥವಾ ಇವರಿಬ್ಬರ ನಡುವೆ ಪ್ರೀತಿ ಇದೆ ಎಂದು ಅಂದುಕೊಂಡಿದ್ದ ನೆಟ್ಟಿಗರಿಗೆ ಬೇಸರವಾಗುವುದು ಖಂಡಿತ. ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್ ಅವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
