ಮನೆ ಬಿಟ್ಟು ಓಡಿ ಹೋಗಿದ್ದ ಪಂಚಭಾಷಾ ನಟಿ ಲಕ್ಷ್ಮಿ ಅಮ್ಮನವರ ಮಗಳು ಐಶ್ವರ್ಯ ಈಗ ಏನಾಗಿದ್ದಾರೆ ಗೊತ್ತಾ..!?

Entertainment

ನಟಿ ಲಕ್ಷ್ಮಿ ಅವರ ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಂದಿನ ಕಾಲದಲ್ಲಿ ಅಂದರೆ 80ರ ದಶಕದಲ್ಲಿ ಪಂಚಭಾಷಾ ತಾರೆಯಾಗಿ ಮಿಂಚಿ ಮೆರೆದಂತಹ ಬಹುಬೇಡಿಕೆಯ ನಟಿ. ಬಹುತೇಕ ಭಾರತೀಯ ಚಿತ್ರರಂಗದ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಕೂಡ ಆ ಸಮಯದಲ್ಲೇ ನಟಿಸಿ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿದವರು. ನಟಿ ಲಕ್ಷ್ಮಿ ರವರು ನಿಜಕ್ಕೂ ಕೂಡ ಕನ್ನಡ ಚಿತ್ರರಂಗ ಕಂಡಂತಹ ಮಹಾನ್ ನಟಿ ಎಂದರೆ ತಪ್ಪಾಗಲಾರದು.
ಸಿನಿಮಾರಂಗದಲ್ಲಿ ನಟಿ ಲಕ್ಷ್ಮಿಯವರು ರಾಣಿಯಂತೆ ಮೆರೆದವರು. ಆದರೆ ನಟಿ ಲಕ್ಷ್ಮಿ ಅವರ ವೈವಾಹಿಕ ಜೀವನ ಅಥವಾ ವೈಯಕ್ತಿಕ ಜೀವನ ಎನ್ನುವುದು ಅಷ್ಟೊಂದು ಸುಖಕರವಾಗಿರಲಿಲ್ಲ ಎಂಬುದು ಅವರನ್ನು ಬಲ್ಲವರಿಗೆ ಚೆನ್ನಾಗಿ ಗೊತ್ತಿದೆ. ಅತಿ ಚಿಕ್ಕ ವಯಸ್ಸಿನಲ್ಲೇ ಮದುವೆಯಾದವರು. ಆದರೆ ಅವರಿಂದ ಒಂದು ಹೆಣ್ಣು ಮಗು ಜನಿಸಿ ನಂತರ ಭಿನ್ನಾಭಿಪ್ರಾಯಗಳಿಂದಾಗಿ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ. ನಂತರ ಮತ್ತೊಂದು ವಿವಾಹವಾಗಿ ಅದು ಕೂಡ ಡಿವೋರ್ಸ್ ನಲ್ಲಿ ಅಂತ್ಯವಾಗುತ್ತದೆ. ಮೂರನೇದಾಗಿ ನಟಿ ಲಕ್ಷ್ಮೀ ಅವರು ತಮಿಳು ನಿರ್ದೇಶಕ ಶಿವ ಚಂದ್ರನ್ ರವರನ್ನು ಮದುವೆಯಾಗುತ್ತಾರೆ.
ಈ ಸಂದರ್ಭದಲ್ಲಿ ತಾಯಿ ಲಕ್ಷ್ಮಿಗೆ ಅವರ ಮಗಳಾಗಿರುವ ಐಶ್ವರ್ಯ ಮೂರನೇ ಮದುವೆಯಾಗಲು ವಿರೋಧವನ್ನು ವ್ಯಕ್ತಪಡಿಸಿದರು ಕೂಡ ಅದು ವಿಫಲವಾಗುತ್ತದೆ. ಮಗಳಾದ ಐಶ್ವರ್ಯಳನ್ನು ನಟಿ ಲಕ್ಷ್ಮೀ ಅವರು ಬಹಳ ಹದ್ದುಬಸ್ತಿನಲ್ಲಿ ಬೆಳೆಸುತ್ತಾರೆ. ನಂತರ ತಾಯಿಯೊಂದಿಗೆ ಚಿತ್ರರಂಗದಲ್ಲಿ ಕೂಡ ಐಶ್ವರ್ಯ ದವರು ಭಾಗಿಯಾಗುತ್ತಾರೆ. ಇದೇ ಸಂದರ್ಭದಲ್ಲಿ ಮುಸ್ಲಿಂ ಹುಡುಗನ ಸ್ನೇಹ ಸಂಬಂಧ ಉಂಟಾಗಿ ನಂತರ ಮನೆಯವರ ವಿರೋಧದ ನಡುವೆ ಕೂಡಾ ದರ್ಗಾ ಗೆ ಹೋಗಿ ಮದುವೆಯಾಗಿ ಬರುತ್ತಾರೆ. ಆದರೆ ಕೆಲವೇ ಸಮಯಗಳಲ್ಲಿ ಆತ ಮಾದಕದ್ರವ್ಯಗಳ ವ್ಯಸನಿ ಹಾಗೂ ಕೆಟ್ಟವನು ಎಂದು ತಿಳಿದು ವಿವಾಹ ವಿಚ್ಛೇದನವನ್ನು ಪಡೆದು ಬರುತ್ತಾರೆ.
ಸದ್ಯಕ್ಕೆ ಐಶ್ವರ್ಯ ರವರು ಉದ್ಯಮವನ್ನು ನಡೆಸುತ್ತಿದ್ದು ತಮ್ಮ ಮಗಳಿಗೂ ಕೂಡ ಮದುವೆಯನ್ನು ಮಾಡಿಸಿ ಬಿಟ್ಟಿದ್ದಾರೆ. ಇದರಿಂದ ನಾವು ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ ಸೆಲೆಬ್ರೆಟಿಗಳ ಜೀವನ ತೆರೆ ಗಿಂತ ಹೆಚ್ಚಾಗಿ ತೆರೆಯ ಹಿಂದೆ ಸಾಕಷ್ಟು ದುಃಖಕರವಾಗಿರುತ್ತದೆ ಎಂಬುದನ್ನು.


Leave a Reply

Your email address will not be published. Required fields are marked *